
ಕೊತ್ತಂಬರಿ ಸೊಪ್ಪಿನ ರೀತಿಯಲ್ಲಿಯೇ ಕಾಣುವ ಮತ್ತೊಂದು ಸೊಪ್ಪು ಪಾರ್ಸ್ಲೇ ಸೊಪ್ಪು. ಯುರೋಪ್ ಹಾಗೂ ಅಮೆರಿಕದಲ್ಲಿ ಹೆಚ್ಚಾಗಿ ಬಳಸುವ ಇದನ್ನು ಕೊತ್ತಂಬರಿ ಸೊಪ್ಪಿನಂತೆ ಬಳಸುತ್ತಾರೆ. ಸೊಪ್ಪು ಹಾಗೂ ಗಿಡ ಎರಡನ್ನೂ ಬಳಸಬಹುದಾದ ಇದರ ಗಡ್ಡೆ ಕ್ಯಾರೆಟ್ ಹೋಲುತ್ತದೆ. ಆದರೆ ಅದರ ರುಚಿ ವಿಭಿನ್ನ.
ಈ ಸೊಪ್ಪಿನಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣಾ
- ಬೇಗ ಪಿರಿಯಡ್ಸ್ ಆಗಬೇಕೆಂದಾದರೆ ದಿನಾಂಕ ಸಮೀಪಿಸುತ್ತಿರುವಾಗ ಪಾರ್ಸ್ಲೆ ಜ್ಯೂಸ್ ಮಾಡಿ ಸೇವಿಸಿ.
- ಮೂತ್ರಪಿಂಡದಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾ ಮತ್ತಿತರೆ ಕೀಟಾಣುಗಳನ್ನು ಹೊರಹಾಕಲು ಇದು ನೆರವಾಗುತ್ತದೆ.
- ಉಗುರು ಬೆಚ್ಚಗಿನ ನೀರಿನೊಂದಿಗೆ ಈ ಸೊಪ್ಪನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ದಿನದಲ್ಲಿ ಮೂರು ನಾಲ್ಕು ಬಾರಿ ಕುಡಿದರೆ, ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.
- ಪಾರ್ಸ್ಲೆ ಎಲೆಗಳಲ್ಲಿ ಬಾಯಿ ದುರ್ವಾಸನೆಯನ್ನು ನಿವಾರಿಸುತ್ತದೆ. ಬಾಯಿ ವಾಸನೆ ಬಂದರೆ ಊಟದ ಬಳಿಕ ಕೆಲವು ಪಾರ್ಸ್ಲೆ ಸೊಪ್ಪಿನ್ನ ಎಲೆಗಳನ್ನು ಜಗಿದು ನೀರಿನೊಂದಿಗೆ ನುಂಗಬೇಕು.
- ಕೊಂಚ ಹಾಲು, ನೀರು ಮತ್ತು ಕಲ್ಲುಸಕ್ಕರೆ ಸೇರಿಸಿ ಮಿಕ್ಸಿ ಮಾಡಿ, ಪ್ರತಿದಿನ ಸೇವಿಸಿದರೆ ಉರಿ ಮೂತ್ರ ಸಮಸ್ಯೆಗೂ ರಾಮಬಾಣ.
- ಈ ಜ್ಯೂಸನ್ನು ನಿಯಮಿತವಾಗಿ ಸೇವಿಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗಿ, ತೂಕ ಬೇಗ ಕಳೆದುಕೊಳ್ಳಬಹುದು.
- ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕರಗದ ನಾರಿದ್ದು, ಮಲಬದ್ಧತೆ ನಿವಾರಿಸುತ್ತದೆ.
ಕೊತ್ತಂಬರಿ, ಮೆಂತೆಯಿಂದ ಓಡಿ ಹೋಗುತ್ತೆ ಗ್ಯಾಸ್ಟ್ರಿಕ್ ಗುಮ್ಮ
- ಕಣ್ಣಿನ ಪೊರೆ ಸಮಸ್ಯೆಗೆ ನೈಸರ್ಗಿಕವಾದ ವಿಧಾನ ಎಂದರೆ ಪಾರ್ಸ್ಲಿ ಎಲೆಗಳ ಸೇವನೆ.
- ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಇದು ಸಹಕಾರಿ. ಅದಕ್ಕಾಗಿ ಇದರ ಜ್ಯೂಸ್ ಸೇವಿಸಿ.
- ಮೈಯಲ್ಲಿ ತುರಿಕೆ ಕಂಡು ಬಂದರೆ ಹಸಿ ಸೊಪ್ಪನ್ನು ಹಚ್ಚಿದರೆ ಕಡಿಮೆಯಾಗುತ್ತ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.