ಲೇಟಾಗೇಕೆ ಆಗುತ್ತೆ ಪಿರಿಯಡ್ಸ್?

By Web DeskFirst Published Jan 14, 2019, 4:03 PM IST
Highlights

ಸಂಕ್ರಾಂತಿಯಲ್ಲಿ ಎಳ್ಳು ಬೆಲ್ಲ ತಿಂದರೆ ಪಿರಿಯಡ್ಸ್ ನಾಲ್ಕು ದಿನ ಬೇಗ ಆಗುತ್ತೆ. ಅಥವಾ ದೇಹದ ಉಷ್ಣಾಂಶ ಹೆಚ್ಚಾದಾಗ ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಾರೆ. ಆದರೆ, ಲೇಟ್ ಆಗಲು ಕಾರಣವೇನು?

ಮಹಿಳೆಯರ ತಿಂಗಳ ಋತುಸ್ರಾವದ ಸಮಯದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತವೆ. ಕೆಲವರಿಗೆ ಹೊಟ್ಟೆ ನೋವು, ಇನ್ನು ಕೆಲವರಿಗೆ ಸೊಂಟ ನೋವು, ವಾಂತಿ, ಪಿರಿಯಡ್ಸ್ ತಡವಾಗುವುದು ಮತ್ತು ಸಮಯಕ್ಕಿಂತ ಮುಂಚಿತವಾಗಿ ಆಗುತ್ತದೆ. ಇಲ್ಲಿ ಪಿರಿಯಡ್ಸ್ ತಡವಾಗಿ ಆಗೋದು ಯಾಕೆ ಅನ್ನೋದನ್ನು ತಿಳಿಸಲಾಗಿದೆ...

  • ಒತ್ತಡ ಅಥವಾ ಸ್ಟ್ರೆಸ್ ಎಲ್ಲರನ್ನೂ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಆದರೆ ಒತ್ತಡ ತುಂಬಾ ಹೆಚ್ಚಾದರೆ ಹಾರ್ಮೋನ್ ಸಮತೋಲನ ತಪ್ಪಿ ಕೆಲವೊಮ್ಮೆ ಮುಟ್ಟು ತಡವಾಗಿ ಆಗಬಹುದು ಅಥವಾ ಕೆಲವೊಮ್ಮೆ ಬೇಗವೇ ಆಗಬಹುದು.
  • ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುವುದೂ ಪಿರಿಯಡ್ಸ್ ವ್ಯತ್ಯಯಕ್ಕೆ ಕಾರಣವಾಗುತ್ತದೆ. ಆದುದರಿಂದ ಅಂಥ ಅರೋಗ್ಯ ಸಮಸ್ಯೆ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿಯಾಗಿ.
  • ಕಚೇರಿಯಲ್ಲಿ ಶಿಫ್ಟ್ ಪ್ರಕಾರ ಕೆಲಸ ಮಾಡುವವರಲ್ಲೂ ಋತುಸ್ರಾವದಲ್ಲಿ ಏರುಪೇರು ಕಂಡುಬರುತ್ತದೆ. ಒಂದು ವಾರ ದಿನದಲ್ಲಿ ಕಚೇರಿ, ಮತ್ತೊಂದು ವಾರ ನೈಟ್ ಶಿಫ್ಟ್ ಮಾಡಿದರೆ ಪಿರಿಯಡ್ಸ್ ಸಮಸ್ಯೆ ಖಂಡಿತಾ.
  • ನೋವು ನಿವಾರಕ ಗುಳಿಗೆ ಅಥವಾ ಹೆಚ್ಚಾಗಿ ಔಷಧಿ ಸೇವಿಸಿದವರಿಗೂ ಪಿರಿಯಡ್ಸ್ ತಡವಾಗಿ ಆಗುತ್ತದೆ.
  • ಮಹಿಳೆಯರು ಮುಖ್ಯವಾಗಿ ತೂಕ ನಿಯಂತ್ರಿಸಿಕೊಳ್ಳಬೇಕು. ದೇಹ ತೂಕ ನಿಯಂತ್ರಣದಲ್ಲಿ ಇರದೇ ಇದ್ದರೆ ಬೊಜ್ಜು ತುಂಬಿ ಹಾರ್ಮೋನ್ ಅಸಮತೋಲನದಿಂದ ಸಮಸ್ಯೆ ಉಂಟಾಗಬಹುದು.
  • ಅತಿಯಾದ ತೂಕ ಮಾತ್ರವಲ್ಲ, ಕಡಿಮೆ ತೂಕವೂ ಪಿರಿಯಡ್ಸ್ ಸಮಸ್ಯೆ ತಂದೊಡ್ಡುತ್ತದೆ. ಪಿರಿಯಡ್ಸ್ ನಿಲ್ಲುವ ಸಂದರ್ಭದಲ್ಲಿ ಪಿರಿಯಡ್ಸ್ ತಡವಾಗಿ ಆಗುವುದು ಸಾಮಾನ್ಯ.
click me!