ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!

By Web Desk  |  First Published May 18, 2019, 3:33 PM IST

ಜಿಮ್‌ಗೆ ಹೋಗಲು ಸಾಧ್ಯವಿಲ್ಲವೆಂದಾದರೆ ಅಥವಾ ನಿಮ್ಮ ಊರಿನಲ್ಲಿ ಜಿಮ್ ಇಲ್ಲವೆಂದಾದರೆ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ವರ್ಕ್‌ಔಟ್ ಮಾಡುವುದನ್ನು ರೂಢಿಸಿಕೊಳ್ಳಿ. 


ಮನಸ್ಸಿದ್ದರೆ ನೂರಾರು ಮಾರ್ಗವಿರುತ್ತದೆ. ನೀವು ಫಿಟ್ ಆಗಲೇಬೇಕೆಂದು ತೀರ್ಮಾನಿಸಿದರೆ ಅದಕ್ಕೆ ಯಾವುದೂ ಅಡ್ಡಿಯಾಗಲಾರದು. ಸಮಯ ಹೊಂದುವುದಿಲ್ಲ, ಹಣವಿಲ್ಲ, ಊರಿನಲ್ಲಿ ಜಿಮ್ ಇಲ್ಲ ಇತರೆ ಯಾವುದೇ ಕಾರಣ ಹೇಳುವವರು ನೀವಾದರೆ ಫಿಟ್‌ನೆಸ್ ಆ್ಯಪ್‌ಗಳು ನಿಮಗಾಗಿಯೇ ತಯಾರಾಗಿ ಕಾದು ಕುಳಿತಿವೆ. 

Tap to resize

Latest Videos

ಹೆಡ್‌ಸ್ಪೇಸ್

ಮೆಡಿಟೇಶನ್ ಮಾನಸಿಕ ಆರೋಗ್ಯ ಕಾಪಾಡಲು ಅತ್ಯುತ್ತಮ ವರ್ಕೌಟ್. ನಿಮಗೆ ಒಳಗಿನಿಂದ ಶಾಂತಿ ಇಲ್ಲವೆಂದಾದರೆ ಜೀವನದ ಯಾವ ಗುರಿಯನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರತಿ ದಿನ ಕೆಲವು ನಿಮಿಷಗಳ ಕಾಲ ಧ್ಯಾನ ಪ್ರತಿಯೊಬ್ಬರಿಗೂ ಅವಶ್ಯಕ. ಇದನ್ನು ಮಾಡಲು ಹೆಡ್‌ಸ್ಪೇಸ್ ಆ್ಯಪ್ ಅವಕಾಶ ಮಾಡಿಕೊಡುತ್ತದೆ. 

ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

ಫಿಟ್‌‌ನೆಸ್ ಬಡಿ

ನಿಮ್ಮ ಅಗತ್ಯ ಹಾಗೂ ವೈಯಕ್ತಿಕ ಗುರಿಗೆ ಅನುಗುಣವಾಗಿ ಈ ಆ್ಯಪ್‌ನ್ನು ಬಳಸಬಹುದು. ಏಕೆಂದರೆ ಇದರಲ್ಲಿ 75ಕ್ಕೂ ಹೆಚ್ಚಿನ ವರ್ಕೌಟ್‌ಗಳಿವೆ. ಇದೊಂದು ಫೋನ್‌ನಲ್ಲಿದ್ದರೆ, ನಿಮ್ಮ ಪರ್ಸನಲ್ ಟ್ರೇನರ್ ನಿಮ್ಮ ಜೇಬಿನಲ್ಲಿದ್ದಂತೆ.

ಆಪ್ಟಿವ್

ಫಿಟ್‌ನೆಸ್ ವಿಷಯದಲ್ಲಿ ನೀವು ಗಂಭೀರವಾಗಿದ್ದರೆ,  ಈ ಫಿಟ್‌ನೆಸ್ ಆ್ಯಪ್‌ಗಾಗಿ ಖಂಡಿತಾ ದುಡ್ಡು ಖರ್ಚು ಮಾಡಬಹುದು. 2500ಕ್ಕೂ ಹೆಚ್ಚಿನ ಆಡಿಯೋ ತರಗತಿಗಳು ಇದರಲ್ಲಿವೆ. ಪ್ರತಿ ವಾರ 30ಕ್ಕೂ ಹೆಚ್ಚಿನ ತರಗತಿಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತವೆ. ಇದರಿಂದ ನೀವು ಬೇಕಾದ ವರ್ಕ್‌ಔಟ್ ಆಯ್ಕೆ ಮಾಡಬಹುದು.

ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...

ಸ್ವೋರ್‌ಕಿಟ್

ಈ ಆ್ಯಪ್‌ಗೆ ನಿಮ್ಮ ಈಗಿನ ಫಿಟ್‌ನೆಸ್ ಲೆವೆಲ್ ತಿಳಿಸಿದರೆ ಸಾಕು, ಅದು ನಿಮಗೆ ಮುಂದಿನ ಆರು ವಾರಗಳ ಡಯಟ್ ಕಾರ್ಯಕ್ರಮ ಆಯೋಜಿಸುತ್ತದೆ. ನಿಮಗೆ ಸಮಯ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದಾದರೆ, ನೀವು ಫ್ರೀ ಆಗುವ ಸಮಯವನ್ನೇ ಆರಿಸಿಕೊಂಡು ಇದು ಫಿಟ್‌ನೆಸ್ ಪ್ಲ್ಯಾನ್ ತಯಾರಿಸುತ್ತದೆ.

ಕೀಲೋ

ಬಹಳ ಪರಿಣಾಮಕಾರಿಯಾಗಿ, ಬಹಳ ಬೇಗ ಫಿಟ್ ಆಗಬೇಕೆನ್ನುವವರಿಗೆ ಈ ಆ್ಯಪ್ ಹೇಳಿ ಮಾಡಿಸಿದ್ದು. ಈ ವರ್ಕ್‌ಔಟ್‌ಗಳು 9 ನಿಮಿಷಕ್ಕೆಲ್ಲ ಮುಗಿದು ಹೋಗಬಹುದು, ಆದರೆ, ನೀವು ಹೆಮ್ಮೆ ಪಡುವ ಮಟ್ಟಿಗೆ ದೇಹದಲ್ಲಿ ಬದಲಾವಣೆಗಳನ್ನು ತರುತ್ತದೆ.

ಜೆಫಿಟ್

ನಿಮ್ಮ ಸ್ಟ್ರೆಂತ್ ಹಾಗೂ ತಡೆದುಕೊಳ್ಳುವ ಶಕ್ತಿ ಹೆಚ್ಚಿಸಬೇಕೆಂದಿದ್ದರೆ ಈಗಲೇ ಈ ಆ್ಯಪ್ ಡೌನ್‌ಲೋಡ್ ಮಾಡಿ. ಸುಮಾರು 1300 ವೈಟ್ ಟ್ರೈನಿಂಗ್ ವ್ಯಾಯಾಮಗಳು ಇದರಲ್ಲಿವೆ.

ನೈಕ್+ರನ್ ಕ್ಲಬ್

ಮ್ಯಾರಥಾನ್ ಓಡುವ ಪ್ಲ್ಯಾನ್ ಇದ್ದಲ್ಲಿ ಈ ಆ್ಯಪ್ ಬಳಸಿಕೊಳ್ಳಿ. 

ಕಸ ಹೆಕ್ಕೋ ಕಸರತ್ತು, ಪ್ಲಾಗಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ಲೇಬುಕ್

ನಿಮ್ಮ ಫೇವರೇಟ್ ಟ್ರೇನರ್ ಅಥವಾ ಅಥ್ಲೀಟ್ ನ ಫಿಟ್‌ನೆಸ್ ಸ್ಟ್ರ್ಯಾಟಜಿಯನ್ನು ಇಲ್ಲಿ ನೋಡಿ ತಿಳಿದುಕೊಳ್ಳಬಹುದು.

click me!