ಡಾರ್ಕ್ ಅಂಡರ್‌ ಆರ್ಮ್‌ಗೆ ಇಲ್ಲಿದೆ ಮನೆ ಮದ್ದು...

Published : May 18, 2019, 12:35 PM IST
ಡಾರ್ಕ್  ಅಂಡರ್‌ ಆರ್ಮ್‌ಗೆ ಇಲ್ಲಿದೆ ಮನೆ ಮದ್ದು...

ಸಾರಾಂಶ

ತೋಳಿಲ್ಲದ ಬಟ್ಟೆ ಹಾಕಿಕೊಳ್ಳಬೇಕೆಂದರೆ ಅಂಡರ್ ಆರ್ಮ್ ಸ್ವಚ್ಛವಾಗಿರಬೇಕು. ಕೂದಲಿದ್ದು, ಕಪ್ಪು ಕಪ್ಪಗೆ ಇದ್ದರೆ ಅಂಥ ಬಟ್ಟೆಗಳನ್ನೇ ತೊಡಬಾರದು. ಅಷ್ಟಕ್ಕೂ ಕಂಕುಳ ಸಂದಿಯನ್ನು ಕ್ಲೀನಾಗಿ ಇಟ್ಟುಕೊಳ್ಳುವುದು ಹೇಗೆ? ಮಹಿಳೆಯರನ್ನು ಡಾರ್ಕ್  ಅಂಡರ್ ಆರ್ಮ್ ಸಮಸ್ಯೆ ಕಾಡೋದು ಸಹಜ. ಇದನ್ನು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ದೂರಮಾಡಬಹುದು. ಹೇಗೆ?

ಹೆಚ್ಚಾಗಿ ರೇಸರ್ ಬಳಸಿದರೆ ಅಥವಾ ಹೇರ್ ರಿಮೂವಲ್ ಕ್ರೀಮ್, ಡಿಯೋಡರೆಂಟ್ ಬಳಸುವುದರಿಂದ ಅಂಡರ್ ಆರ್ಮ್ ಕಪ್ಪಾಗುತ್ತದೆ. ಇದನ್ನು ದೂರ ಮಾಡುವುದೊಂದು ಚಾಲೆಂಜ್. ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಅಂಡರ್ ಆರ್ಮ್ ಕಪ್ಪಾಗುವುದನ್ನು ನಿವಾರಿಸಬಹುದು. 

ಟ್ಯಾನ್ ಆಗಿದ್ದರೆ ಹೀಗ್ ಮಾಡಿ...

ನಿಂಬೆ

ನಿಂಬೆಯಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ಆ್ಯಂಟಿ ಏಜಿಂಗ್ ತತ್ವ ಹಾಗೂ ಆ್ಯಸಿಡ್ ತತ್ವ ತ್ವಚೆಯ ಬಣ್ಣ ಕಪ್ಪಾಗುವುದನ್ನು ತಡೆದು ಬಿಳಿಯಾಗುವಂತೆ ಮಾಡುತ್ತದೆ. ಜೊತೆಗೆ ಡೆಡ್ ಸ್ಕಿನ್ ನಿವಾರಿಸುತ್ತದೆ. ಅದಕ್ಕಾಗಿ ನಿಂಬೆ ರಸ, ಜೇನು ಮತ್ತು ಅರಿಶಿನ ಮಿಕ್ಸ್ ಮಾಡಿ  ಅಂಡರ್ ಆರ್ಮ್‌ಗೆ ಹಾಕಿ ಚೆನ್ನಾಗಿ ಸ್ಕ್ರಬ್ ಮಾಡಿ. 

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಬ್ಲೀಚ್ ಗುಣ ಇರುತ್ತದೆ, ಸೆನ್ಸಿಟಿವ್ ಸ್ಕಿನ್ ಮೇಲೆ ನಿಂಬೆ ರಸ ಹಚ್ಚಿದರೆ ತುರಿಕೆ ಉಂಟಾಗಬಹುದು. ಅದರ ಬದಲಾಗಿ ಆಲೂ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಅದಕ್ಕಾಗಿ ಆಲೂಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಅಂಡರ್ ಆರ್ಮ್‌ಗೆ ಚೆನ್ನಾಗಿ ರಬ್ ಮಾಡಿ. ಹತ್ತು ನಿಮಿಷ ಅದನ್ನೇ ಮಾಡಿ. ನಂತರ ಉಗುರು ಬಿಸಿ ನೀರಿನಿಂದ ತೊಳೆಯಿರಿ. 

ಸೌತೆಕಾಯಿ

ಸೌತೆಕಾಯಿಯಲ್ಲಿರುವ ಅಂಶ ಚರ್ಮದ ಡಾರ್ಕ್‌ನೆಸ್ ದೂರಮಾಡುತ್ತದೆ. ಜೊತೆಗೆ ಸಾಫ್ಟ್ ಕೂಡ ಮಾಡುತ್ತದೆ. ಅಲ್ಲದೇ ಸ್ಕಿನ್‌ಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಸೌತೆಕಾಯಿ ರಸ ಮತ್ತು ನಿಂಬೆ ರಸ ಜೊತೆಯಾಗಿ ಬೆರೆಸಿ ಅಂಡರ್ ಆರ್ಮ್‌ಗೆ ಹಚ್ಚಿ. 

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ  ಡೆಡ್ ಸ್ಕಿನ್ ಅನ್ನೂ ದೂರ ಮಾಡುತ್ತದೆ. ಬೇಕಿಂಗ್ ಸೋಡಾಕ್ಕೆ ಸ್ವಲ್ಪ ನೀರು ಬೆರೆಸಿ ಅಂಡರ್ ಆರ್ಮ್‌ಗೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಸಮಸ್ಯೆ  ದೂರವಾಗುತ್ತದೆ. 

ಬೇಸಿಗೆಗೆ ಮ್ಯಾಕ್ಸಿ ಡ್ರೆಸ್‌ ಸೊಗಸು!

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಹಾಲು ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಅಂಡರ್ ಆರ್ಮ್‌ಗೆ ಹಚ್ಚಿದರೆ ಬೇಗ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರೋ ಬ್ಲೀಚಿಂಗ್ ಸಮಸ್ಯೆ ನಿವಾರಿಸುತ್ತದೆ ಹಾಗೂ ದೇಹದಿಂದ ಪರಿಮಳ ಬರುವಂತೆ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!