
ಹವಾಮಾನ ಬದಲಾಗುವ ಸಮಯದಲ್ಲಿ ವಾರ್ಡೋಬ್ ತುಂಬಾ ವ್ಯವಸ್ಥಿತವಾಗಿರಬೇಕು. ಕೆಲವೊಮ್ಮೆ ವಸ್ತುಗಳನ್ನು ಹೇಗೆ ಅರೆಂಜ್ ಮಾಡುವುದು ಅನ್ನೋದೇ ಗೊತ್ತಾಗುವುದಿಲ್ಲ. ಅದಕ್ಕಿಲ್ಲಿವೆ ಕೆಲವೊಂದು ಟಿಪ್ಸ್ ಇವೆ...
ಲಿಪ್ ಬಾಮ್ ಅನ್ನು ಹೀಗೆಲ್ಲ ಬಳಸಬಹುದು
- ವಾಡ್ರೋಬ್‌ನಲ್ಲಿ ಬಟ್ಟೆಗಳನ್ನು ಜೋಡಿಸಿಡುವ ಮೊದಲು ಕೆಳಗೆ ಪೇಪರ್ ಅಥವಾ ಸಿಲಿಕಾನ್ ಮ್ಯಾಟ್ ಹಾಕಿ.
- ಒಣಗಿದ ಬಟ್ಟೆಗಳನ್ನು ಐರನ್ ಮಾಡಿ ಚೆನ್ನಾಗಿ ಜೋಡಿಸಿ.
- ಡಿಸೈನರ್ ಡ್ರೆಸ್ ಅಥವಾ ಸೀರೆಯನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿಡಿ. ಹೀಗ್ ಮಾಡಿದರೆ ಬಟ್ಟೆ ಫ್ರೆಶ್ ಆಗಿರುತ್ತದೆ. ಅಲ್ಲದೆ ಇವುಗಳನ್ನು ಪದೇ ಪದೇ ಐರನ್ ಮಾಡಬೇಕಾಗಿಲ್ಲ.
- ಅಲ್ಮೆರಾವನ್ನು ಅಗಾಗ ತೆರೆದಿಡಿ. ಇದರಿಂದ ಗಾಳಿ ಸರಿಯಾಗಿ ಹರಡುತ್ತದೆ. ಇದರಿಂದ ಬ್ಯಾಡ್ ಸ್ಮೆಲ್ ಬರೋದಿಲ್ಲ.
- ವಾಡ್ರೋಬ್‌ನಲ್ಲಿ ನ್ಯಾಫ್ತಾಲಿನ್ ಬಾಲ್‌ಗಳನ್ನಿಡಿ. ಇದರಿಂದ ಬಟ್ಟೆಗಳು ಫ್ರೆಶ್ ಆಗಿರುತ್ತವೆ.
- ಮಳೆಗಾಲದಲ್ಲಿ ಬಟ್ಟೆಗಳಿಗೆ ಫಂಗಸ್ ಹಿಡಿಯುತ್ತದೆ. ಇದಕ್ಕೆ ಆ್ಯಂಟಿ ಫಂಗಸ್ ಮಾತ್ರೆಗಳನ್ನು ಇಡುವುದು ಒಳಿತು.
- ಹ್ಯಾಂಗರ್ ಬಳಸಿದಲ್ಲಿ ಹೆಚ್ಚು ಜಾಗ ಉಳಿಯುತ್ತದೆ. ಅಲ್ಲದೆ ಐರನ್ ಮಾಡದ ಬಟ್ಟೆಗಳನ್ನು ಬೇರೆ ಇಡಿ.
- ಅಲ್ಮೆರಾದಲ್ಲಿ ಬ್ಯೂಟಿ ಉತ್ಪನ್ನಗಳನ್ನು ಇಡುವುದಾದರೆ ಬೇರೆ ಜಾಗ ಮಾಡಿ. ಅಥವಾ ಒಂದು ಬಾಕ್ಸ್ ಅಥವಾ ಬ್ಯಾಸ್ಕೆಟ್‌ನಲ್ಲಿ ಹಾಕಿಡಿ.
- ಸ್ಲಿಪ್ಪರ್ ಅನ್ನು ಶೂ ಸ್ಟ್ಯಾಂಡ್‌ನಲ್ಲಿ ನೀಟಾಗಿ ಜೋಡಿಸಿಡಿ. ಕ್ರಮವಾಗಿ ಜೋಡಿಸಿಟ್ಟರೆ ಸುಲಭವಾಗಿ ಕೈಗೆ ಸಿಗುತ್ತೆ.
ಇಷ್ಚು ಚೆಂದ ರಂಗೋಲಿ ಹಾಕ್ಲಿಕ್ಕೆ ಸಾಧ್ಯವೇ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.