ರಾತ್ರಿ ಮಾಡೋ ಈ ತಪ್ಪು ನಿಮ್ಮನ್ನು ಮಾಡುತ್ತೆ ಬೆಪ್ಪು...!

By Web DeskFirst Published Jul 23, 2019, 1:20 PM IST
Highlights

ರಾತ್ರಿಯಲ್ಲಿ ಮಾಡೋ ಕೆಲವು ಕೆಲಸಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಗ್ಯಾರಂಟಿ. ಇಂಥ ಅಭ್ಯಾಸಗಳು ನಿಮಗೂ ಇದ್ದರೆ ಇವತ್ತೇ ಬಿಡೋದು ಒಳ್ಳೆಯದು. 

ರಾತ್ರಿ ಬೇಗ ಮಲಗಿ, ಸೂರ್ಯೋದಯಕ್ಕೂ ಮುಂಚೆ ಏಳಬೇಕು ಎಂಬುವುದು ನಮ್ಮ ಪೂರ್ವಿಕರು ಮಾಡಿರೋ ನಿಯಮ. ಕಾಲ ಬದಲಾಗಿದೆ. ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾದಂತೆ ಜೀವನಶೈಲಿಯೇ ವಿಚಿತ್ರವಾಗಿದೆ. ರಾತ್ರಿ ಲೇಟಾಗಿ ಮಲಗಿ, ಬೆಳಗ್ಗೆ ಬೇಗ ಅಥವಾ ಮಧ್ಯಾಹ್ನ ಏಳೋ ಅಭ್ಯಾಸ ಕೆಲವರಿಗೆ. ಇದು ಮನುಷ್ಯನ ಜೈವಿಕ ಚಕ್ರವನ್ನೇ ಬದಲಾಯಿಸುತ್ತಿದ್ದು, ಹತ್ತು ಹಲವು ಅನಾರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಅಷ್ಟೇ ಅಲ್ಲದೇ, ಇನ್ನೂ ಕೆಲವು ಅಭ್ಯಾಸಗಳು ಮನುಷ್ಯನನ್ನು ತುಂಬಾ ಹೈರಾಣಾಗಿಸುತ್ತವೆ. ಏನವು? 

ರಾತ್ರಿ ಹತ್ತು ಗಂಟೆ ನಂತ್ರ ಹೆಚ್ಚಾಗಿ ಯುವ ಜನತೆ ಹೊರಗಡೆ ಹೋಗಿ ನೈಟ್ ಔಟ್ ಮಾಡಿಕೊಂಡು ಊಟ ಮಾಡೋದು, ಚಹಾ ಕುಡಿಯೋದು ಏನೇನೋ ಮಾಡುತ್ತಾರೆ. ಆದರೆ ನಿಮ್ಗೊತ್ತಾ ನೀವು ರಾತ್ರಿ ಹೊತ್ತು ಮಾಡುವ ಕೆಲಸಗಳು, ಸೇವಿಸುವ ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತೆಂದು? ರಾತ್ರಿ ಹತ್ತರ ನಂತರ ಯಾವೆಲ್ಲಾ ಆಹಾರ ಸೇವಿಸಬಾರದು ನೋಡೋಣ... 

ಕೂದಲು ಹಾಗೂ ತ್ವಚೆಗೆ ಎಳನೀರ ಆರೈಕೆ!

ಹೆಚ್ಚು ಊಟ 

ರಾತ್ರಿ ಹೆಚ್ಚು ಊಟ ಮಾಡಿ, ಮಲಗೋದರಿಂದ ಆ್ಯಸಿಡಿಟಿ, ಗ್ಯಾಸ್‌ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಸರಿಯಾಗಿ ನಿದ್ರೆಯೂ ಬರೋದಿಲ್ಲ. ಆದುದರಿಂದ ಹತ್ತು ಗಂಟೆ ನಂತ್ರ ಎಷ್ಟು ಕಡಿಮೆ ಆಗುತ್ತೋ ಅಷ್ಟು ಕಡಿಮೆ ಆಹಾರ ಸೇವಿಸಿ. 

ಚಹಾ -ಕಾಫಿ 

ಕೆಲವರು ಚಹಾ-ಕಾಫಿಗೆ ಎಷ್ಟು ಅಡಿಕ್ಟ್ ಆಗಿರುತ್ತಾರೆಂದರೆ ಯಾವ ಹೊತ್ತಲ್ಲೂ ಬೇಕಾದರೂ ಇದನ್ನು ಕುಡಿಯುತ್ತಾರೆ. ಇದರಿಂದ ತಡ ರಾತ್ರಿಯವರೆಗೂ ನಿದ್ರೆ ಬರೋದಿಲ್ಲ. ಪದೆ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಆ್ಯಸಿಡಿಟಿ ಸಮಸ್ಯೆಯೂ ತಪ್ಪಿದ್ದಲ್ಲ. 

ಸ್ಮೋಕ್ 

ಮಲಗೋ ಮುನ್ನ ಸ್ಮೋಕ್ ಮಾಡುವುದು ಕೆಲವರು ಟ್ರೆಂಡ್ ಅಂದುಕೊಂಡಿದ್ದಾರೆ. ಆದರೆ ಇದರಿಂದ ನಿದ್ರೆ ಹಾಳಾಗುತ್ತದೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯೂ ತಪ್ಪಿದ್ದಲ್ಲ.

ಸೌಂದಯ ವರ್ಧಕ ಬಸವನ ಹುಳು...ಇದು ಸತ್ಯ ರೀ!

ಆಲ್ಕೋಹಾಲ್ 

ತಡ ರಾತ್ರಿ ಡ್ರಿಂಕ್ಸ್‌ ಮಾಡುವುದರಿಂದ ದೇಹದ ಕ್ರಿಯೆಗಳು ಅಸಮರ್ಪಕವಾಗುತ್ತವೆ. ನಿದ್ರಾ ಸಮಸ್ಯೆ, ಅಜೀರ್ಣ, ತಲೆನೋವು ಕಾಮನ್ ಆಗಿ ಬಿಡುತ್ತವೆ.

ಸ್ಪೈಸಿ ಜಂಕ್‌ ಫುಡ್‌ 

ರಾತ್ರಿ ಹೆಚ್ಚು ಸ್ಪೈಸಿ ಆಹಾರ ಸೇವಿಸಿದರೆ ಆಸಿಡಿಟಿ ಸಮಸ್ಯೆಯೂ ಗ್ಯಾರಂಟಿ. 

ಸಿಹಿ ತಿನಿಸು

 

ಹೊತ್ತಲ್ಲದ ಹೊತ್ತಲ್ಲಿ ಸಿಹಿ ತಿಂಡಿಗಳನ್ನು ತಿನೋ ಚಪಲ ಕೆಲವರಿಗೆ. ಲೇಟ್ ನೈಟ್ ಚಾಕೋಲೇಟ್ ಸೇರಿ ಸಕ್ಕರೆ ಅಂಶವಿರೋ ಆಹಾರ ಪದಾರ್ಥಗಳು ನಿದ್ರೆಯನ್ನು ಕಸಿಯುವುದಲ್ಲದೇ, ಬೊಜ್ಜು ಹೆಚ್ಚಾಗುವಂತೆ ಮಾಡುತ್ತದೆ. 

ಗೆಜೆಟ್ಸ್ ವ್ಯಾಮೋಹ

ತಡ ರಾತ್ರಿವರೆಗೂ ಮೊಬೈಲ್‌ ನೋಡುವುದೇ ಯುವಜನತೆಯ ಚಟವಾಗಿದೆ. ಮೊಬೈಲ್ , ಟಿವಿ, ಕಂಪ್ಯೂಟರ್‌ ಹೆಚ್ಚಾಗಿ ಬಳಸಿದರೆ ಕಣ್ಣು ಮತ್ತು ಬ್ರೈನಿಗೆ ಸುಸ್ತಾಗುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಗಂಭೀರ ಸಮಸ್ಯೆ ಕಾಡಬಹುದು. ಕತ್ತಲೆಯಲ್ಲಿ ಮೊಬೈಲ್ ಬೆಳಕು ಹೆಚ್ಚು ಬೀಳಲು ಆರಂಭಿಸಿದರೆ ದೃಷ್ಟಿ ದೋಷವೂ ಬರಬಹುದು. ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. 

click me!