ಮಕ್ಕಳ ಸ್ಟೈಲಿಶ್ ಲುಕ್‌ಗೆ ಇಲ್ಲಿವೆ ಬೆಸ್ಟ್ ವಿಧಾನ!

By Web DeskFirst Published Jun 2, 2019, 1:10 PM IST
Highlights

ಪುಟ್ ಪುಟಾಣಿ ಡ್ರೆಸ್ ಮೂಲಕ ಮಕ್ಕಳನ್ನು ಸ್ಟೈಲಿಶ್ ಮತ್ತು ಮುದ್ದಾಗಿ ದೇವತೆಗಳ ರೀತಿ ಡ್ರೆಸ್ ಮಾಡಿಸಬೇಕು ಎಂಬ ಅಸೆ ನಿಮಗಿದ್ದರೆ ಮಿಸ್ ಮಾಡದೆ ಈ ಟಿಪ್ಸ್ ಪಾಲಿಸಿ.. 

ಪುಟಾಣಿ ಮಕ್ಕಳಿದ್ದರೆ ಅವರಿಗೆ ಸ್ಟೈಲಿಶ್ ಆಗಿ ಡ್ರೆಸ್ ಹಾಕಿದರೆ ನೋಡೋಕೆ ಚೆನ್ನ. ಪುಟಾಣಿ ಮಕ್ಕಳಿಗಾಗಿ ಏನೇನೋ ಫ್ಯಾಷನ್ ಟ್ರೆಂಡ್ ಡ್ರೆಸ್‌ಗಳು ಬಂದಿವೆ. ಆದರೆ ಡ್ರೆಸ್‌ಗಳ ಜೊತೆಗೆ ಮಕ್ಕಳು ಸ್ಟೈಲಿಶ್ ಆಗಿ ಕಾಣಲು ಏನೇನು ಮಾಡಬಹುದು ಅಲ್ಲದೆ ಯಾವೆಲ್ಲಾ ನ್ಯೂ ಟ್ರೆಂಡ್ ಮೂಲಕ ಮಕ್ಕಳು ಮುದ್ದಾಗಿ ಕಾಣಲು ಇಲ್ಲಿವೆ ಟಿಪ್ಸ್....

ಫಂಕಿ ಕೋಟ್: ಬೇರೆ ಬೇರೆ ರೀತಿ ಕ್ರೇಜಿ ಕೋಟ್ ಅಥವಾ ವರ್ಡಿಂಗ್ ಹೊಂದಿರುವ ಟೀ ಶರ್ಟ್ ಬೆಸ್ಟ್. ಇಂಥ ಡ್ರೆಸ್‌ಗಳಿಂದ ಮಕ್ಕಳು ಚೆನ್ನಾಗಿ ಕಾಣಿಸುತ್ತಾರೆ. ಅವರ ಡ್ರೆಸ್ ಮೇಲಿನ ಅಕ್ಷರಗಳೂ ಇತರರ ಮುಖದ ಮೇಲೆ ನಗು ಮೂಡಿಸುತ್ತದೆ. 

ತುಂಬಾ ಶಾರ್ಟ್ ಇದ್ದೀರಾ? ಹೀಲ್ಸ್ ಇಲ್ಲದೇನೂ ಹೈಟ್ ಆಗಿ ಕಾಣಿಸ್ಕೊಳ್ಳಿ...

ಚೆಕ್ಸ್ ಮತ್ತು ಸ್ಟ್ರೈಪ್: ಮಗು ಗಂಡಾಗಿರಲಿ ಅಥವಾ ಹೆಣ್ಣಿರಲಿ ಮಕ್ಕಳಿಗೆ ಚೆಕ್ಸ್ ಮತ್ತು ಸ್ಟ್ರೈಪ್ ಡಿಸೈನ್ ಇರುವ ಶರ್ಟ್ ಧರಿಸಿದರೆ ಅದರ ಜೊತೆ ಜೀನ್ಸ್ ಅಥವಾ ಸ್ಕರ್ಟ್ ಏನೇ ಹಾಕಿದರೂ ಚೆಂದ ಕಾಣುತ್ತಾರೆ. 

ಕಲರ್ ಫುಲ್ ಡ್ರೆಸ್: ಪುಟ್ಟ ಮಕ್ಕಳು ಕಲರ್ಫುಲ್ ಡ್ರೆಸ್‌ಗಳಲ್ಲಿ ಮುದ್ದಾಗಿ ಕಾಣಿಸುತ್ತಾರೆ. ಮಕ್ಕಳ ಮೇಲೆ ಬೇರೆ ಬೇರೆ ಶೇಡ್ಸ್ ಇರೋ ಡ್ರೆಸ್ ಟ್ರೈ ಮಾಡಬಹುದು. ಆದರೆ ಒಂದಕ್ಕೊಂದು ಕಲರ್ ಕಾಂಬಿನೇಷನ್ ಕ್ಲಾಶ್ ಆಗದಂತೆ ನೋಡಿಕೊಳ್ಳಿ. ಮಕ್ಕಳ ಡ್ರೆಸ್ ಡಲ್ ಆಗಿದ್ದರೆ ಕಲರ್ ಫುಲ್ ಹೇರ್ ಬ್ಯಾಂಡ್ ಅಥವಾ ಹ್ಯಾಟ್ ಧರಿಸಿದರೆ ಚೆನ್ನಾಗಿರುತ್ತದೆ. 

ಡೆನಿಮ್: ಡೆನಿಮ್ ಆರಾಮದಾಯಕವಾಗಿರುತ್ತದೆ. ಡೆನಿಮ್ ಪ್ಯಾಂಟ್, ಡ್ರೆಸ್ , ಶರ್ಟ್ ಎಲ್ಲಾ ಮಕ್ಕಳಿಗೂ ಚೆನ್ನಾಗಿ ಕಾಣಿಸುತ್ತದೆ. ಡೆನಿಮ್ ಬ್ರೌಸರ್ ಮತ್ತು ಡೆನಿಮ್ ಶರ್ಟ್ ಧರಿಸಿದರೆ ಮುದ್ದಾಗಿ ಕಾಣಿಸುತ್ತಾರೆ. 

ಜಂಪ್ ಸೂಟ್: ಜಂಪ್ ಸೂಟ್ ಮಕ್ಕಳು ಹಾಗೂ ಹಿರಿಯರಿಗೂ ಚೆನ್ನಾಗಿ ಕಾಣಿಸುತ್ತದೆ. ಜಂಪ್ ಸೂಟ್ ಬೇರೆ ಬೇರೆ ಪ್ಯಾಟರ್ನ್‌ಗಳಲ್ಲಿ ಬರುತ್ತದೆ. ಇದು ಸಿಂಗಲ್ ಔಟ್ ಫಿಟ್ ಆಗಿರೋದರಿಂದ ಇದರ ಜೊತೆ ಯಾವ ಟಾಪ್ ಧರಿಸೋದು ಅನ್ನೋ ಟೆನ್ಶನ್ ಇರೋದಿಲ್ಲ. 

ಧೋತಿ ಸೀರೆ, ಪಲಾಜೋ ಸೀರೆ... ರೆಡಿ ಟು ವೇರ್ ಸೀರೆಗಳ ಕಾರುಬಾರು!

ಡ್ರೆಸ್: ಉದ್ದ ಫ್ರಾಕ್, ಮುದ್ದಾದ ಪಿಂಕ್ ಡ್ರೆಸ್ ಧರಿಸಿದರೆ ಮಕ್ಕಳು ದೇವತೆಯಂತೆ ಕಾಣಿಸುತ್ತಾರೆ. ಪ್ರತಿ ಪೋಷಕರೂ ತಮ್ಮ ಮಕ್ಕಳು ಪ್ರಿನ್ಸೆಸ್‌ನಂತೆ ಕಾಣಬೇಕು ಎಂದು ಬಯಸುತ್ತಾರೆ. ಸಾಲಿಡ್ ಬಣ್ಣಗಳ ಡ್ರೆಸ್ , ಇಲ್ಲವಾದರೆ ಕಪ್ಪು, ಬಿಳಿ ಬಣ್ಣದ ಡ್ರೆಸ್ ಕೂಡ ಮಕ್ಕಳಿಗೆ ಚೆನ್ನಾಗಿ ಕಾಣಿಸುತ್ತದೆ. 

ಸಾಂಪ್ರದಾಯಿಕ ಉಡುಗೆ: ಮದುವೆ, ಹಬ್ಬ ಮೊದಲಾದ ಕಾರ್ಯಕ್ರಮಗಳಿದ್ದರೆ ಮಕ್ಕಳನ್ನು ಸಾಂಪ್ರದಾಯಿಕವಾಗಿ ಸಿಂಗರಿಸಬಹುದು. ಹುಡುಗರಿಗೆ ಶೇರ್ವಾನಿ, ಹುಡುಗಿಯರಿಗೆ ಹಾಫ್ ಸಾರಿ ಅಥವಾ ಸೀರೆ ಬೆಸ್ಟ್. 

click me!