ಕೂದಲು ಉದುರಲು ಈ ಆರೋಗ್ಯ ಸಮಸ್ಯೆಯೂ ಆಗಬಹುದು ಕಾರಣ..

Published : Jun 02, 2019, 09:35 AM IST
ಕೂದಲು ಉದುರಲು ಈ ಆರೋಗ್ಯ ಸಮಸ್ಯೆಯೂ ಆಗಬಹುದು ಕಾರಣ..

ಸಾರಾಂಶ

ಕೂದಲು ಉದುರುವಿಕೆ ಸಮಸ್ಯೆ ಯಾವ ಮಹಿಳೆಯರಿಗೆ ಇಲ್ಲ ಹೇಳಿ? ಈ ಸಮಸ್ಯೆಯಿಂದ ಮಹಿಳೆಯರು ಅನುಭವಿಸೋ ಯಾತನೆ ಅಷ್ಟಿಷ್ಟಲ್ಲ. ಇದಕ್ಕೆ ಕಾರಣ ನಮ್ಮಲ್ಲಿರುವ ಅರೋಗ್ಯ ಸಮಸ್ಯೆಗಳು ಅನ್ನುತ್ತಿವೆ ಅಧ್ಯಯನ. ಹಾಗಾದರೆ ಆ ಸಮಸ್ಯೆಗಳು ಯಾವುವು? 

ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ. ಒಂದು ದಿನದಲ್ಲಿ ಸುಮಾರು 50-100 ಕೂದಲು ಉದುರುತ್ತವೆ. ಅದನ್ನು ಸಮಸ್ಯೆ ಎನ್ನಲಾಗುವುದಿಲ್ಲ. ಅದಕ್ಕಿಂತ ಹೆಚ್ಚು ಕೂದಲು ಉದುರಿದರೆ ಹೆಚ್ಚಿನ ಗಮನ ಅಗತ್ಯ. ಇದು ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೆಚ್ಚು. ಕೂದಲು ಉದುರುವಿಕೆಗೆ ಮುಖ್ಯ ಕಾರಣ ಜೆನೆಟಿಕ್ ಅಂಶಗಳು, ಹಾರ್ಮೋನಲ್ ಅಸಮತೋಲನ ಇತ್ಯಾದಿ. ಇದಲ್ಲದೆ ಕೆಲವೊಂದು ಅರೋಗ್ಯ ಸಮಸ್ಯೆಯೂ ಕಾರಣವಾಗಿರಬಹುದು. 

ಪ್ರೆಗ್ನೆನ್ಸಿ: ಗರ್ಭಿಣಿಯಾಗಿದ್ದಾಗ ಮಹಿಳೆಯರಲ್ಲಿ ಹೆಚ್ಚು ಒತ್ತಡ ಇರುತ್ತದೆ. ಇದರಿಂದ ಕೂದಲು ಅಧಿಕ ಪ್ರಮಾಣದಲ್ಲಿ ಉದುರುತ್ತದೆ. ಆದರೆ ಮಗು ಆದ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ. 

ಕೂದಲಿನ ಸಮಸ್ಯೆಗಳಿಗೆ ಇಲ್ಲಿವೆ ಆಯುರ್ವೇದಿಕ್ ಟಿಪ್ಸ್

ಹೈಪೋ ಥೈರೋಡಿಸಂ: ಈ ಸಮಸ್ಯೆ ಕಾಣಿಸಿಕೊಂಡಾಗ ಹಾರ್ಮೋನ್ ಲೆವೆಲ್ ತುಂಬಾ ಕಡಿಮೆ ಆಗುತ್ತದೆ. ಇದರಿಂದ ಕೂದಲು ತುಂಬಾ ತೆಳ್ಳಗಾಗುತ್ತದೆ. 

ಲೂಪಸ್: ಇದೊಂದು ಆಟೋ ಇಮ್ಯೂನ್ ಸಮಸ್ಯೆ. ಇದರಿಂದ ಇಮ್ಯೂನ್ ಸಿಸ್ಟಮ್ ಆರೋಗ್ಯದ ಮೇಲೂ ಪರಿಣಾಮ ಬೀರಿ, ಕೂದಲು ಉದುರುತ್ತದೆ. 

ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

ಒತ್ತಡ : ಅಕ್ಯೂಟ್ ಸ್ಟ್ರೆಸ್ ಡಿಸಾರ್ಡರ್ ಸಮಸ್ಯೆ ಇದ್ದರೆ ದೇಹದಲ್ಲಿರುವ ಪೋಷ್ಟಕಾಂಶ ಕುಗ್ಗುತ್ತದೆ. ಇದರಿಂದ ದೇಹವು ಕೂದಲು ಬೆಳೆಸುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಬೀಡಿಗೆ ಫಿದಾ ಆದ ರಷ್ಯನ್ನರು, ಒಂದು ಪ್ಯಾಕೆಟ್‌ ಇಷ್ಟು ದುಬಾರಿನಾ?
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ