ಹೊಟ್ಟೆಕಿಚ್ಚು ಪ್ರೀತಿ, ರೊಮ್ಯಾನ್ಸ್ ಎಲ್ಲವನ್ನೂ ಸಾಯಿಸಿಬಿಡಬಲ್ಲದು. ಆರಂಭದಲ್ಲಿ ಕ್ಯೂಟ್ ಎನಿಸುವ ಹೊಟ್ಟೆಕಿಚ್ಚು ಬರಬರುತ್ತಾ ಉಸಿರುಗಟ್ಟಿಸಲಾರಂಭಿಸುತ್ತದೆ. ಈ ಹೊಟ್ಟೆಕಿಚ್ಚಿನ ಸಂಗಾತಿಯನ್ನು ನಿಭಾಯಿಸುವುದು ಹೇಗೆ?
ಹೊಟ್ಟೆಕಿಚ್ಚು ಎಂಥ ಉತ್ತಮ ಸಂಬಂಧವನ್ನೂ ಹದಗೆಡಿಸಬಲ್ಲದು. ಪತ್ನಿ ತಮಗಿಂತ ಹೆಚ್ಚು ಸಂಬಳ ಪಡೆಯುತ್ತಾಳೆಂದು, ಆಕೆಯ ಯಶಸ್ಸು ಕಂಡು ಕರುಬುವ ಗಂಡಂದಿರು, ಪತಿಯ ಯಶಸ್ಸನ್ನು ನೋಡಿ ಅನುಮಾನಿಸುವ ಪತ್ನಿಯರು ಕೇವಲ ಕತೆ ಕಾದಂಬರಿ ಮಾತ್ರವಲ್ಲದೆ, ನಮ್ಮ ಸುತ್ತಮುತ್ತಲೇ ಹಲವರು ಕಾಣಿಸುತ್ತಿರುತ್ತಾರೆ. ಇಂಥ ಸಂಗಾತಿಯೊಂದಿಗೆ ಏಗುವುದು ಸುಲಭದ ಮಾತಲ್ಲ. ಹಾಗಂಥ ಅಷ್ಟಕ್ಕೇ ಅವರನ್ನು ಬಿಟ್ಟು ಬಿಡಬೇಕಾಗಿಲ್ಲ. ಏಕೆಂದರೆ ಅವರಲ್ಲಿ ಪ್ರೀತಿಯೂ ಇರುತ್ತದೆ. ಇಂಥ ಹೊಟ್ಟೆಕಿಚ್ಚಿನ ಸನ್ನಿವೇಶಗಳನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವ ಕಲೆ ತಿಳಿದುಕೊಂಡರೆ, ಇಂಥ ಪತಿ/ಪತ್ನಿಯೊಂದಿಗೂ ಸಂತೋಷದಿಂದಲೇ ಬಾಳಬಹುದು.
1. ಹೊಟ್ಟೆಕಿಚ್ಚಿನ ಹಿಂದಿನ ಕಾರಣ ತಿಳಿಯಿರಿ
undefined
ರಾತ್ರಿ ಬೆಳಗಾಗುವುದರೊಳಗೆ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಹೊಟ್ಟೆಕಿಚ್ಚು ಹುಟ್ಟಲು ಸಾಧ್ಯವಿಲ್ಲ. ಅದಕ್ಕೆ ಯಾವುದೋ ಕಾರಣ ಇರಲೇಬೇಕು. ಸಾಮಾನ್ಯವಾಗಿ ನಂಬಿಕೆ ಮುರಿದಾಗ ಹೊಟ್ಟೆಕಿಚ್ಚು ಮೇಲೇಳುತ್ತದೆ. ಅಥವಾ ನಿಮ್ಮ ಹಂಗಿಸುವ ವ್ಯಂಗ್ಯದ ಮಾತುಗಳು ಕೂಡಾ ಹೊಟ್ಟೆಕಿಚ್ಚಿಗೆ ಕಾರಣವಾಗಿರಬಹುದು. ಸಮಸ್ಯೆಯ ಮೂಲಕ್ಕೆ ಹೋಗಿ ಕಾರಣ ಹುಡುಕಿ. ಈ ಕಾರಣ ಹುಡುಕುವ ಸಂದರ್ಭದಲ್ಲಿ ಆತ್ಮವಿಮರ್ಶೆ ಬೇಕಾಗುತ್ತದೆ.
ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!
2. ತಾಳ್ಮೆ ಕಳೆದುಕೊಳ್ಳಬೇಡಿ
ಕೆಲವೊಮ್ಮೆ ನಿಮಗೆ ನಿಮ್ಮ ವರ್ತನೆಯಿಂದಲೇ ಸಂಗಾತಿಗೆ ಹೊಟ್ಟೆಕಿಚ್ಚಾಗುತ್ತಿದೆ ಎಂಬುದು ತಿಳಿಯದೆ ಹೋಗಬಹುದು. ಉದಾಹರಣೆಗೆ, ನೀವು ನಿಮ್ಮ ಗೆಳೆಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಲ್ಲಿ, ನಿಮ್ಮ ಪತ್ನಿಗೆ ನಿಮ್ಮ ಗೆಳೆಯರನ್ನು ನೋಡಿ ಹೊಟ್ಟೆಕಿಚ್ಚಾಗುತ್ತಿರಬಹುದು. ಇದನ್ನು ನೀವು ಸುಲಭವಾಗಿ ಸರಿ ಮಾಡಿಕೊಳ್ಳಬಹುದು. ಸಂಗಾತಿಗೆ ಕೂಡಾ ಸಮಯ ನೀಡಿ. ನಿಮ್ಮ ಸೋಷ್ಯಲ್ ಲೈಫ್ ಹಾಗೂ ಪರ್ಸನಲ್ ಲೈಫ್ ಎರಡನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಿದರಾಯಿತು. ಆದರೆ, ನಿಮ್ಮ ಸಂಗಾತಿ ಇನ್ನೊಬ್ಬರ ಯಶಸ್ಸು ನೋಡಿ ಕರುಬುತ್ತಿದ್ದರೆ ಮಾತ್ರ ಇದನ್ನು ಸರಿಪಡಿಸಲು ಸಮಯ ಬೇಕಾಗುತ್ತದೆ. ಜೊತೆಗೆ ಹಲವು ಪ್ರಯತ್ನಗಳೂ ಬೇಕಾದೀತು. ಇವೆಲ್ಲಕ್ಕೂ ನಿಮ್ಮಲ್ಲಿ ತಾಳ್ಮೆ ಇರುವುದು ಮುಖ್ಯ.
3. ಪುರುಷ ಪ್ರಧಾನ ಮನಸ್ಥಿತಿಯೂ ಕಾರಣ
ಸಂಬಂಧಗಳ ತಜ್ಞರ ಪ್ರಕಾರ, ಸಂಗಾತಿಯ ಬಗ್ಗೆ ಹೊಟ್ಟೆಕಿಚ್ಚಾಗಲು ಹಲವು ಕಾರಣಗಳಿರಬಹುದು. ಬಹುಷಃ ನಿಮ್ಮ ಪತಿಯು ಪುರುಷನೇ ಕುಟುಂಬದ ಯಜಮಾನ ಎಂದು ನೋಡಿಕೊಂಡು ಕೇಳಿಕೊಂಡು ಬೆಳೆದು ಬಂದಿದ್ದರೆ, ನೀವು ಹೆಚ್ಚು ಸಂಬಳ ತೆಗೆದುಕೊಂಡು ಮನೆಯನ್ನು ಅವರ ದುಡಿಮೆಯಿಲ್ಲದೆಯೇ ಚೆನ್ನಾಗಿ ನಿಭಾಯಿಸಿಕೊಂಡು ಹೋಗಬಲ್ಲಿರಿ ಎಂಬುದನ್ನು ಅವರಿಂದ ಅರಗಿಸಿಕೊಳ್ಳಲಾಗುವುದಿಲ್ಲ. ಇದರಿಂದ ಪತ್ನಿಯ ಸಂಬಳದ ಮೇಲೆ ಹೊಟ್ಟೆಕಿಚ್ಚು ಶುರುವಾಗುತ್ತದೆ. ಜೊತೆಗೆ, ತಾನು ಈ ಮನೆಗೆ ಅಗತ್ಯವಿಲ್ಲ ಎಂಬ ಭಾವನೆ ಅವರನ್ನು ಕುಗ್ಗಿಸುವುದರಿಂದ ಪತ್ನಿಯ ಮೇಲೆ ದ್ವೇಷ ಹುಟ್ಟಬಹುದು. ಇನ್ನು ಪತ್ನಿ ಹೌಸ್‌ವೈಫ್ ಆಗಿ ಮನೆ ಮಕ್ಕಳು ಎಂದು ನೋಡಿಕೊಂಡು ಹೆಣಗಾಡುತ್ತಿರುವಾಗ ಪತಿ ಮಾತ್ರ ಹೊರಗೆ ಆರಾಮಾಗಿ ತಿರುಗಿಕೊಂಡು ಮಜವಾಗಿ ಗೆಳೆಯರು, ಪಾರ್ಟಿಗಳಲ್ಲಿ ಸಮಯ ಕಳೆಯುತ್ತಿದ್ದರೆ, ಪತಿಯ ಜೀವನದ ಬಗ್ಗೆ ಆಕೆಗೆ ಹೊಟ್ಟೆಕಿಚ್ಚಾಗಬಹುದು. ತಾನು ಪತಿಯ ಜೀವನದಲ್ಲಿ ಬರೀ ಕೆಲಸ ಮಾಡಿಕೊಂಡಿರಲು ಮಾತ್ರ ಅಗತ್ಯ ಎಂಬ ಭಾವನೆ ಬೆಳೆಯಬಹುದು.
ಅತಿಯಾದರೆ ಹಸ್ತಮೈಥುನವೂ ಡೇಂಜರಸ್...ಜೋಪಾನ!
4. ದೂರುವುದನ್ನು ಅಭ್ಯಾಸ ಮಾಡಿಕೊಳ್ಳಬೇಡಿ
ಹೊಟ್ಟೆಕಿಚ್ಚಿನ ಸಂತ್ರಸ್ತ ಜೋಡಿಗಳು ಸಾಮಾನ್ಯವಾಗಿ ಒಬ್ಬರನ್ನೊಬ್ಬರು ದೂರುತ್ತಾ ಕುಳಿತುಬಿಡುತ್ತಾರೆ. ಇದು ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿಸುತ್ತದೆ. ಅದರ ಬದಲಿಗೆ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬಹುದೆಂದು ಯೋಚಿಸಿ.
5. ಇಬ್ಬರ ಪ್ರಯತ್ನವೂ ಬೇಕು
ಪತಿಪತ್ನಿಯ ಸಂಬಂಧದಲ್ಲಿ ಒಬ್ಬರಿಂದಲೇ ಎಲ್ಲವೂ ಸರಿಯಾಗಲು ಸಾಧ್ಯವಿಲ್ಲ. ಇಬ್ಬರೂ ಪ್ರಯತ್ನ ಹಾಕಿದಾಗ ಮಾತ್ರ ಸಂಬಂಧ ಸುಧಾರಿಸಲು ಸಾಧ್ಯ, ಸಂತೋಷ ಕಾಣಲು ಸಾಧ್ಯ. ಈ ವಿಷಯದಲ್ಲಿ ಹೊಟ್ಟೆಕಿಚ್ಚು ಪಡುವವರು ಒಬ್ಬರೇ ಆದರೂ, ಇಬ್ಬರೂ ಸಂತೋಷ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಸಮಸ್ಯೆ ಪರಿಹಾರಕ್ಕೆ ಇಬ್ಬರೂ ಸೇರಿ ಜಗಳಕ್ಕೆ ಆಸ್ಪದ ಕೊಡದೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಿ. ಒಂದು ವೇಳೆ ನಿಮ್ಮ ಸಂಬಳ ಅವರಲ್ಲಿ ಕೀಳರಿಮೆ, ಹೊಟ್ಟೆಕಿಚ್ಚಿಗೆ ಕಾರಣವಾಗುತ್ತಿದ್ದರೆ, ಅವರೂ ಕೆಲಸದಲ್ಲಿ ಉನ್ನತಿ ಪಡೆಯಲು ಏನು ಮಾಡಬೇಕು ಎಂಬುದನ್ನು ಹೇಳಿ ಪ್ರೋತ್ಸಾಹಿಸಿ. ಅವರ ಸಣ್ಣ ಸಣ್ಣ ಯಶಸ್ಸಿಗೆ ಹೆಚ್ಚು ಖುಷಿ ವ್ಯಕ್ತಪಡಿಸಿ. ಅಗತ್ಯವಿದ್ದರೆ ನಿಮ್ಮ ಸಂಬಳದಲ್ಲಿ ಅವರ ಖರ್ಚಿಗೂ ಪಾಲು ನೀಡಿ.
ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು, ಹಾಗಂತ ಈ ವಿಷಯಗಳಲ್ಲಿ ತ್ಯಾಗ ಬೇಡ!
6. ಸಂವಹನ ಮತ್ತು ಕೌನ್ಸೆಲಿಂಗ್
ಸಂಬಂಧದಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾದರೂ ಮಾತುಕತೆಯಿಂದ ಪರಿಹರಿಸದಿರಲು ಸಾಧ್ಯವಾಗದ್ದು ಯಾವುದೂ ಇಲ್ಲ ಎನ್ನುತ್ತಾರೆ ತಜ್ಞರು. ನಿಮ್ಮ ಸಂಗಾತಿಗೆ ನೀವು ಅಷ್ಟು ಪ್ರೀತಿಸುವ, ನಂಬುವ ವ್ಯಕ್ತಿಯ ಹೊಟ್ಟೆಕಿಚ್ಚಿನ ಬುದ್ಧಿಯಿಂದ ನಿಮಗೆ ಎಷ್ಟು ನೋವಾಗುತ್ತಿದೆ ಎಂಬುದನ್ನು ನಯವಾಗಿ ತಿಳಿಸಿ. ಹೊಟ್ಟೆಕಿಚ್ಚೊಂದನ್ನು ಬಿಟ್ಟರೆ ಅವರೆಂಥ ಅದ್ಭುತ ವ್ಯಕ್ತಿತ್ವ ಎಂಬುದನ್ನು ಹೇಳಿ. ಇದು ಕೆಲಸ ಮಾಡಲಿಲ್ಲವೆಂದಾಗ ಮಾತ್ರ ಕೌನ್ಸೆಲಿಂಗ್ ಮೊರೆ ಹೋಗಬಹುದು.