ಇವುಗಳನ್ನು ಮಾಡದೇ ಹೋದ್ರೆ ಕೂರ್ಗ್ ಟ್ರಿಪ್ ಕಂಪ್ಲೀಟೇ ಆಗಲ್ಲ!

By Web Desk  |  First Published Aug 19, 2019, 3:59 PM IST

ಕೂರ್ಗ್‌ಗೆ ಹೋದರೆ ಒಂದು ವಾರದ ಕಾಲದ ಪ್ರತಿ ದಿನ ಹೊಸತನ್ನು ನೋಡುತ್ತಾ, ಅನುಭವಿಸುತ್ತಾ, ಸಂಪೂರ್ಣ ರಿಲ್ಯಾಕ್ಸ್ ಆಗಿ ಬರಬಹುದು. ಅದಕ್ಕಾಗಿ ಏನೆಲ್ಲ ಬೇಕೋ ಅವೆಲ್ಲವೂ ದಂಡಿಯಾಗಿ ಇಲ್ಲಿವೆ. 


ಕೂರ್ಗ್ ಎಂದ ಕೂಡಲೇ ತಲೆಗೆ ಬರುವುದು ಬಿಸಿ ಬಿಸಿಯಾದ ರುಚಿಯಾದ ಕಾಫಿ. ಆದರೆ, ಅದಲ್ಲದೆ ಕೂರ್ಗ್‌ನಲ್ಲಿ ಮಾಡಬೇಕಾದುದು, ನೋಡಬೇಕಾದುದು ಸಾಕಷ್ಟಿದೆ. ಅವೆಲ್ಲ ಏನೆಂದು ಲೆಕ್ಕ ಹಾಕಿ ಇಲ್ಲಿ ಪಟ್ಟಿ ಮಾಡಿದ್ದೇವೆ. ಮುಂದಿನ ಬಾರಿ ಕೂರ್ಗ್ ಹೋದಾಗ ಇವೆಲ್ಲವನ್ನು ನೆನಪಿನಲ್ಲಿಟ್ಟುಕೊಂಡು ಮಾಡಿ ಬನ್ನಿ. 

1. ಚಿಕ್ಕಿ ಹೊಳೆ ಸುತ್ತಮುತ್ತ ವಾಕ್ ಮಾಡಿ

Tap to resize

Latest Videos

undefined

ಜನರಿಲ್ಲದ ಜಾಗದಲ್ಲಿ ಹೊಳೆಯ ಬುಡದಲ್ಲಿ ಹಸುಗಳು ಮೇಯುವುದು ನೋಡುತ್ತಾ, ಹಸಿರು, ನೀಲಿ ಆಗಸ, ಹೊಳೆ, ಪ್ರತಿಫಲನ ಮುಂತಾದ ಸುಂದರ ದೃಶ್ಯಾವಳಿಯನ್ನು ಸವಿಯುತ್ತಾ ಸಂಗಾತಿಯೊಂದಿಗೆ ವಾಕ್ ಮಾಡುವುದು ಅದೆಷ್ಟು ರೊಮ್ಯಾಂಟಿಕ್ ಗೊತ್ತಾ? 

ರಿಚ್ಚೀ ರಿಚ್ ಫೀಲಿಂಗ್ ಬೇಕೇ? ಕಡಿಮೆ ದುಡ್ಡಿದ್ರೂ ಈ ದೇಶಗಳಲ್ಲಿ ಎಂಜಾಯ್ ಮಾಡ್ಬೋದು!

2. ಆನೆಗೆ ಸ್ನಾನ ಮಾಡಿಸಿ

ಇಲ್ಲಿನ ದುಬಾರೆಗೆ ಭೇಟಿ ನೀಡಿ ಮುದ್ದಾದ ಆನೆಗಳಿಗೆ ಸ್ನಾನ ಮಾಡಿಸಿ ಲೈಫ್‌ಟೈಂ ಅನುಭವ ಗಳಿಸಿ. ಅಲ್ಲಿ ಆನೆಗಳನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆಂಬುದನ್ನು ನೋಡುವುದೇ ಚೆನ್ನ. ಈ ಆನೆಗಳನ್ನು ಕೇವಲ ಟೂರಿಸಂ ಉದ್ದೇಶಕ್ಕಾಗಿ ಅಲ್ಲದೆ, ಕಾಡಿನಲ್ಲಿ ಕೆಲಸಕ್ಕಾಗಿಯೂ ಬಳಸುತ್ತಾರೆ.

3. ಚೆಂದದ ಹೋಮ್ ಸ್ಟೇ ಎಂಜಾಯ್ ಮಾಡಿ

ಕೂರ್ಗ್‌ನಲ್ಲಿ ಕಾಫಿ ಪ್ಲ್ಯಾಂಟೇಶನ್ ನಡುವೆ ನಿಂತ ಹೋಂ ಸ್ಟೇಗಳು ಸಾಕುಬೇಕಾಗುವಷ್ಟಿರುವಾಗ ಹೋಟೆಲ್‌ನಲ್ಲಿ ಉಳಿಯುವ ಮೂರ್ಖತನ ಮಾಡಬೇಡಿ. ಈ ಚೆಂದದ ಪುಟ್ಟ ಪುಟ್ಟ ಹೋಂ ಸ್ಟೇಗಳು ಹೆಚ್ಚು ದುಬಾರಿಯೂ ಅಲ್ಲ. ಹಾಗಂತ ಮರೆಯದ ಅನುಭವ ನೀಡುವಲ್ಲಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇಡೀ ದಿನ ಸುತ್ತಾಡಿ ಬಂದಾಗ ಯಾರಾದರೂ ಟೀ ಮಾಡಿಕೊಟ್ಟರೆ ಎಷ್ಟು ಹಿತವೆನಿಸುತ್ತದಲ್ಲವೇ? ಅಲ್ಲಿನ ನಾಯಿಬೆಕ್ಕುಗಳೊಂದಿಗೆ ಆಡುತ್ತಾ, ಪ್ಲ್ಯಾಂಟೇಶನ್ ನೋಡುತ್ತಾ ಮನೆಯ ಕಟ್ಟೆಯ ಮೇಲೆ ಕೂರುವ ಸುಖವೋ ಸುಖ. ನೆಟ್ವರ್ಕ್, ವೈಫೈ ಯಾವ ರಗಳೆಯೂ ಇಲ್ಲದೆ ನಮ್ಮ ಪಾಡಿಗೆ ನಾವು ನಮ್ಮದೇ ಲೋಕದಲ್ಲಿ ಕಳೆದುಹೋಗಬಹುದು. 

ಭಾರತದ ಉತ್ತುಂಗ ಸ್ಥಳಗಳು: ಜೊತೆಯಾಗಿ ಭೇಟಿಯಿತ್ತರೆ ಅಳಿಯದಿರಲಿ ಹೆಜ್ಜೆಗಳು!

4. ಕಾಫಿ ಕಾಫಿ ಕಾಫಿ

ಬೆಳಗ್ಗೆ ಎದ್ದೊಡನೆ, ತಿಂಡಿ ಊಟದೊಡನೆ, ಮಧ್ಯೆ ಸುಮ್ಮನೆ ಎಲ್ಲಾದರೂ ನಿಂತಾಗ, ಸಂಜೆ ಸ್ನ್ಯಾಕ್ಸ್‌ನೊಡನೆ - ಇಲ್ಲಿ ಕಾಫಿ ಕುಡಿಯಲು ಹೊತ್ತುಗೊತ್ತು ಏನೂ ಬೇಕಿಲ್ಲ. ಏಕೆಂದರೆ, ಕೂರ್ಗ್‌ನ ಕಾಫಿಯ ಘಮಲು, ರುಚಿ, ಆ ಹಿತಾನುಭವ ಸವಿದೇ ನೋಡಬೇಕು. ಅಲ್ಲಿಯೇ ಬೆಳೆದ ಕಾಫಿಬೀಜಗಳನ್ನು ಬಳಸಿ ತಯಾರಿಸಿದ ತಾಜಾ ಕಾಫಿಯ ಪರಿಮಳವೇ ನೆತ್ತಿಗೆ ಮತ್ತೇರಿಸುತ್ತದೆ. ಅಷ್ಟೇ ಅಲ್ಲ, ಹೊರಡುವಾಗ ಅಲ್ಲಿಂದ ಒಂದು ಕೆಜಿ ಕಾಫಿ ಪುಡಿಯನ್ನು ಮನೆಗೆ ತರುವುದು ಮರೆಯಬೇಡಿ.

5. ವೈನ್ ಗುಟುಕರಿಸಿ

ಕೂರ್ಗ್ ಕಾಫಿಗೆ ಮಾತ್ರವಲ್ಲ, ಹೋಂ ಮೇಡ್ ವೈನ್‌ಗೆ ಸಹಾ ಫೇಮಸ್. ಇಲ್ಲಿನ ಸಣ್ಣ ಸಣ್ಣ ಅಂಗಡಿಗಳಲ್ಲಿ, ಮನೆಗಳಲ್ಲಿ ಸಹಾ ವೈನ್ ದೊರೆಯುತ್ತದೆ, ಅದೂ ಕಡಿಮೆ ಬೆಲೆಗೆ. ಅದರಲ್ಲೂ ಅಡಕೆ, ಪೈನಾಪಲ್, ಜೇನುತುಪ್ಪ ಮುಂತಾದ ಫ್ಲೇವರ್‌ನ ವೈನ್ ಟ್ರೈ ಮಾಡಿಯೇ ನೋಡಬೇಕು. ಇಲ್ಲಿನ ತಣ್ಣನೆಯ ಹವಾಗುಣದಲ್ಲಿ ದೇಹವನ್ನು ಬೆಚ್ಚಗಿರಿಸುವ ಕೆಲಸವನ್ನು ಕಾಫಿ ಹಾಗೂ ವೈನ್ ಮಾಡಬಲ್ಲವು.

ಭಾರತದ ನಗರಗಳ ಹೆಸರನ್ನೇ ಹೊತ್ತ ವಿದೇಶಿ ನಗರಗಳು

6. ಬೈಲುಕುಪ್ಪೆ ಎಂಬ ಮಿನಿ ಟಿಬೆಟ್

ಎರಡನೇ ಅತಿ ದೊಡ್ಡ ಟಿಬೆಟನ್ ಕಾಲೋನಿ ನಮ್ಮ ಕೂರ್ಗ್‌ನ ಬೈಲುಕುಪ್ಪೆಯಲ್ಲಿದೆ ಎಂದ ಮೇಲೆ ಅದನ್ನು ನೋಡದೆ ಹಿಂದಿರುಗಬಹುದೇ? ಅನ್ನ ಸಾಂಬಾರ್ ನಡುವೆ ಧುತ್ತೆಂದು ಪ್ರತ್ಯಕ್ಷವಾಗುವ ಮೋಮೋಸ್, ಕನ್ನಡಿಗರ ನಡುವೆ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಟಿಬೆಟನ್ನರು- ಈ ಸಡನ್ನಾಗಿ ಕಾಣಿಸಿಕೊಳ್ಳುವ ಬೇರೊಂದೇ ಸಂಸ್ಕೃತಿ ಹಾಟ್ ಚಾಕೋಲೇಟ್ ಫಡ್ಜ್‌ನಲ್ಲಿ ಕೇಕ್‌ನ ನಡುವೆ ಬಿಸಿಯಾದ ಸಿರಪ್ ಕಾಣಿಸಿಕೊಂಡು ಮುದಗೊಳಿಸುವಂತೆ ಖುಷಿಪಡಿಸುತ್ತದೆ. ಟಿಬೆಟ್ಟನ್ನರ ಚೆಂದದ ದೇವಾಲಯ, ಹೋಟೆಲ್‌ಗಳಿಗೆ ಭೇಟಿ ನೀಡಿ. ಟಿಬೆಟಿಯನ್ ಮಾರುಕಟ್ಟೆಯಲ್ಲಿ ಏನಾದರೂ ಶಾಪಿಂಗ್ ಮಾಡಿ ನೆನಪಿಗಾಗಿ ಮನೆಗೆ ತೆಗೆದುಕೊಂಡು ಹೋಗಿ. 

7. ಇರುಪ್ಪು ಫಾಲ್ಸ್‌ನಲ್ಲಿ ಈಜಾಡಿ

ತಣ್ಣಗೆ ಕೊರೆವ ಇರುಪ್ಪು ಜಲಪಾತದ ನೀರಿನಲ್ಲಿ ಈಜಾಡುವ ಸವಾಲಿಗೆ ಸೈ ಎನ್ನಿ. ಕಾಡಿನ ನಡುವೆ ಜುಳಜುಳ ಸದ್ದು ಮಾಡಿಕೊಂಡು ಹರಿದು, ಧೋ ಎಂದು ಸುರಿವ ಈ ಜಲರಾಶಿಯ ಸೊಬಗು ಸವಿದು ಬನ್ನಿ.

8. ತಡಿಯಾಂಡಮಾಲ್

ಎರಡು ಗಂಟೆಯ ಟ್ರೆಕ್ ಮಾಡಿ ತಡಿಯಾಂಡಮಾಲ್‌ನ ತುದಿಗೆ ಹೋಗಿ ನಿಂತರೆ ಆಶ್ಚರ್ಯದಿಂದ ಅದೆಷ್ಟು ಧೀರ್ಘವಾಗಿ ಉಸಿರೆಳೆದುಕೊಳ್ಳುತ್ತೀರಿ ಗಮನಿಸಿ ನೋಡಿ. ಅಷ್ಟು ಚೆಂದದ ಪಶ್ಚಿಮ ಘಟ್ಟದ ಹಸಿರ ರಾಶಿ, ದಟ್ಟ ಮಂಜು, ನಿಶಬ್ಧ, ದೂರದಲ್ಲೆಲ್ಲೋ ಹರಿವ ನೀರು ಮನಸ್ಸನ್ನು ಧ್ಯಾನದ ಮೋಡ್‌ಗೆ ಕರೆದೊಯ್ಯುತ್ತದೆ. 
 

click me!