ಈ ರಾಶಿಯವರ ಮದ್ವೆಯಾದರೆ ಸೆಕ್ಸ್ ಲೈಫ್ ಸೂಪರ್...

By Web Desk  |  First Published Apr 4, 2019, 5:15 PM IST

ದಾಂಪತ್ಯದಲ್ಲಿ ಎಲ್ಲವೂ ಪರ್ಫೆಕ್ಟ್ ಎಂದೇನೂ ಇರೋಲ್ಲ. ಇರೋದ್ರಲ್ಲಿ ಅಡ್ಜಸ್ಟ್ ಮಾಡಿಕೊಳ್ಳುವುದು ಅನಿವಾರ್ಯ. ಕೆಲವು ರಾಶಿಯವರನ್ನು ವರಿಸಿದರೆ, ದಾಂಪತ್ಯ ಸಹಿಸಿಕೊಳ್ಳುವುದು ಸುಲಭ. ಈ ಬಗ್ಗೆ ಇಲ್ಲಿವೆ ಕೆಲವು ಮಾಹಿತಿ...


 

ಮದುವೆ ಅನ್ನೋದು ಜೀವನದ ಮುಖ್ಯ ಘಟ್ಟ. ಈ ಸಮಯದಲ್ಲಿ ಜಾತಕವನ್ನು ನೋಡುತ್ತಾರೆ. ಜೊತೆಗೆ ಇದರಲ್ಲಿ ರಾಶಿಯೂ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲಿ ಒಂದಿಷ್ಟು ರಾಶಿಗಳನ್ನು ನೀಡಲಾಗಿದೆ. ಈ ರಾಶಿಯ ಪುರುಷರನ್ನು ಮದುವೆಯಾದರೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎನ್ನುತ್ತಾರೆ. ಆ ರಾಶಿಗಳು ಯಾವುವು?

Tap to resize

Latest Videos

ಮಿಥುನ: ಮಿಥುನ ರಾಶಿ ಹುಡುಗ ತುಂಬಾ ಫ್ರೆಂಡ್ಲಿ ಆಗಿರುತ್ತಾರೆ. ತಮಾಷೆಯಾಗಿ ಬೆರೆಯುವ ಸ್ವಭಾವ ಇವರದ್ದಾಗಿರುತ್ತದೆ. ಹಾಸ್ಯ ಪ್ರವೃತ್ತಿಯಿಂದ ಸುತ್ತಲಿನವರನ್ನು ಸದಾ ನಗಿಸುತ್ತಿರುತ್ತಾರೆ. ಎಲ್ಲರಿಗೂ ಗೌರವ, ಕಾಳಜಿ ತೋರುತ್ತಾರೆ. ಇವರ ಜೊತೆ ವಿವಾಹವಾದರೆ ಪತ್ನಿಯನ್ನು ಅಳವಾಗಿ ಪ್ರೀತಿಸುತ್ತಾರೆ. ಆದರ್ಶಮಯ ಜೀವನ ನಿಮ್ಮದಾಗುತ್ತದೆ.

 

ಕರ್ಕಾಟಕ: ಈ ರಾಶಿಯವರು ಪರ್ಫೆಕ್ಟ್ ತಂದೆ ಅಥವಾ ಪರ್ಫೆಕ್ಟ್ ಗಂಡ ಆಗಿರುತ್ತಾರೆ. ಉತ್ತಮ ಗುಣ ನಡತೆಯುಳ್ಳ ಜವಾಬ್ದಾರಿಯುತ ಪತಿಯಾಗುತ್ತಾರೆ. ಸಂಗಾತಿ ಏನು ಬೇಕು ಎಂಬುದನ್ನು ಸರಿಯಾಗಿ ಅರಿತುಕೊಂಡಿದ್ದಾರೆ. ಈ ರಾಶಿಯವರನ್ನು ಮದುವೆಯಾದರೆ ಸಮಯ ಕಳೆದಂತೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ, ಪ್ರೀತಿಯೂ ಹೆಚ್ಚುತ್ತದೆ.

ಪ್ರೀತಿ ಒಲಿಯಲು ಇಷ್ಟಾರ್ಥ ದೇವರ ಮೊರೆ ಹೋಗಿ...

ತುಲಾ: ಇವರು ಮಹಿಳೆಯರನ್ನು ಮಗುವಿನಂತೆ ಕಾಪಾಡುವ, ಆಕೆ ಅಸೆ ಆಕಾಂಕ್ಷೆಗಳನ್ನು ಈಡೇರಿಸುವ ವ್ಯಕ್ತಿಯಾಗಿರುತ್ತಾರೆ. ಇವರು ಪ್ರತಿಯೊಂದೂ ಕೆಲಸಗಳಲ್ಲಿ ಪತ್ನಿ ಸಹಾಯಕ್ಕೆ ನಿಲ್ಲುತ್ತಾರೆ. ಅಲ್ಲದೆ ಪತ್ನಿಯೂ ಸಂತೋಷಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ. ಪತಿಗಿಂತಲೂ ಹೆಚ್ಚಾಗಿ ಓರ್ವ ಪ್ರಾಣ ಸ್ನೇಹಿತನಾಗಿರುತ್ತಾರೆ. ಮದುವೆಯಾಗಲು ಕೊಂಚ ಸಮಸ್ಯೆಯಾದರೂ ಮದುವೆಯಾದ ನಂತರ ಜೀವನ ಸುಖಮಯವಾಗಿರುತ್ತದೆ

ವೃಶ್ಚಿಕ: ಕ್ರಿಯಾತ್ಮಕ ವ್ಯಕ್ತಿ ಇವರಾಗಿರುತ್ತಾರೆ. ತಮ್ಮ ಪತ್ನಿಯನ್ನು ತುಂಬಾ ಪ್ರೀತಿಸುವವರು ಇವರು. ಪತ್ನಿಗೆ ಕಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಇವರು ಹೆಚ್ಚಾಗಿ ಸುಳ್ಳು ಹೇಳುವುದರಿಂದ ಸಮಸ್ಯೆ ಉಂಟಾಗಬಹುದು. ಒಂದು ವೇಳೆ ನಂಬಿಕೆ ಕಳೆದುಕೊಳ್ಳದಂತಹ ಕೆಲಸ ಮಾಡಿದರೆ ಜೀವನ ಉಲ್ಲಾಸಭರಿತವಾಗಿರುತ್ತದೆ. ಇವರು ಲೈಂಗಿಕ ಕ್ರಿಯೆಯಲ್ಲೂ ಹೆಚ್ಚು ಆಸಕ್ತಿ ಹೊಂದಿರುವ ವ್ಯಕ್ತಿಯಾಗುವುದರಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

click me!