ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

By Web Desk  |  First Published Aug 18, 2019, 1:52 PM IST

ಜೀವನಪೂರ್ತಿ ಇನ್ನೊಬ್ಬರೊಂದಿಗೆ ಬದುಕುವ ಬದ್ಧತೆಗೆ ಗಟ್ಟಿಯಾದ ತಳಪಾಯ ಹಾಕುವುದು ಮುಖ್ಯ. ಇದೇನು ಅಷ್ಟು ಸುಲಭವಲ್ಲ. ನಮಗೆ ಸರಿಯಾಗೋ ಪಾರ್ಟ್ನರ್ ಎನಿಸಿದ ಮೇಲೂ ಸಾಕಷ್ಟು ಹೊಂದಾಣಿಕೆಗಳು ಬೇಕಾಗುತ್ತವೆ. 


ಒಬ್ಬರೊಂದಿಗೆ ಪ್ರೀತಿಯಲ್ಲಿರುವಾಗ ಅವರ ಕೆಲ ಅಭ್ಯಾಸಗಳನ್ನು ನೀವು ಕಡೆಗಣಿಸಿಬಿಡ್ತೀರಿ. ಪ್ರೀತಿ ಆರಂಭದಲ್ಲಂತೂ ಅವರು ಒದ್ದೆ ಟವಲ್ ಹಾಸಿಗೆ ಮೇಲೆ ಹಾಕಿದ್ರೂ ಕ್ಯೂಟ್ ಅನ್ಸತ್ತೆ, ವಾದ ಮಾಡೋ ಸ್ವಭಾವನೂ ಚೆನಾಗನ್ಸತ್ತೆ. ಕಾರನ್ನು ವೇಗವಾಗಿ ನುಗ್ಗಿಸಿಕೊಂಡು ಹೋದ್ರೂ ಡೇರಿಂಗ್ ಅಂತ ಖುಷಿಯಾಗತ್ತೆ. ಆದರೆ, ಮದುವೆಯಾಗಿ ಜೊತೆಗೇ ಇರೋಕೆ ಶುರು ಮಾಡ್ತೀರಲ್ಲ, ಆಗ ಈ ಕ್ಯೂಟ್, ಸ್ವೀಟ್ ಅನಿಸಿದ ನಡೆಗಳೆಲ್ಲ ಸಿಟ್ಟು ತರಿಸೋಕೆ ಶುರು ಮಾಡ್ತಾವೆ. ಮಂಚದ ಮೇಲೆ ಟವಲ್ ಎಸೆಯೋ ವಿಷಯಕ್ಕೇ ಜಗಳಗಳು ಆರಂಭವಾಗಬಹುದು, ವಾದ ಮಾಡೋ ಸ್ವಭಾವ ಸಹಿಸಲಸಾಧ್ಯ ಎನಿಸಬಹುದು. ಹೀಗೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಮದುವೆ ಗೊತ್ತಾಗಿದ್ದರೆ ಅದಕ್ಕೂ ಮುಂಚೆ ಈ ಅನುಭವಗಳಾಗಿದ್ದರೆ ಒಳ್ಳೆಯದು. ಇದರಿಂದ ನಂತರದ ಬದುಕಿನ ಬಗ್ಗೆ ಸುಳ್ಳು ಕಲ್ಪನೆಗಳಲ್ಲಿ ತೇಲಾಡಿ ನಿರೀಕ್ಷೆಗಳು ಹುಸಿಯಾಗುವುದು ತಪ್ಪುತ್ತದೆ. 

ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

Tap to resize

Latest Videos

undefined

ದೊಡ್ಡ ವಾದ ಮಾಡಿ

ವಿಚಿತ್ರ ಎನಿಸಬಹುದು. ಆದರೆ, ಅಪರೂಪಕ್ಕೊಂದು ದಿನ ಜಗಳ ಮಾಡಬೇಕಾದ ಸಂದರ್ಭ ಒದಗಿದರೆ ಅದನ್ನು ಅವಾಯ್ಡ್ ಮಾಡುವ ಬದಲು ದೊಡ್ಡ ವಾಗ್ವಾದ ನಡೆಸಿ. ಖಂಡಿತವಾಗಿ ಇದು ಸಂತೋಷದ ಅನುಭವವಾಗಿರುವುದಿಲ್ಲ. ಆದರೆ, ನಿಮ್ಮಿಬ್ಬರ ನಡುವೆ ಏನು ಇಷ್ಟಕಷ್ಟಗಳಿವೆ, ಅವನ್ನು ನಿಮ್ಮಿಂದ ಮತ್ತೆ ಹೊಂದಿಕೊಂಡು ಹೋಗಲು ಆಗುತ್ತದೆಯೇ, ಸಂಬಂಧ ಎಷ್ಟು ಗಟ್ಟಿಯಾಗಿದೆ, ಇಂಥ ಸಂದರ್ಭದಲ್ಲಿ ನಿಮ್ಮ ಪಾರ್ಟ್ನರ್ ಸಿಟ್ಟನ್ನು ಹೇಗೆ ನಿಭಾಯಿಸುತ್ತಾನೆ, ಎಷ್ಟು ಸಭ್ಯವಾಗಿ ವರ್ತಿಸುತ್ತಾನೆ ಎಂಬುದನ್ನೆಲ್ಲ ಅರಿತುಕೊಳ್ಳಲು ಈ ಜಗಳ ಸಹಾಯವಾಗಬಹುದು. ಅಲ್ಲದೆ ಸೋತು ಗೆಲ್ಲುವುದು ಹೇಗೆ, ಒಬ್ಬರೆದುರು ಮತ್ತೊಬ್ಬರು ಈಗೋ ಬಿಟ್ಟು ಮಾತನಾಡುವುದು ಹೇಗೆ ಎಂಬುದನ್ನೆಲ್ಲ ಇದು ಕಲಿಸುತ್ತದೆ. ಇಲ್ಲದಿದ್ದಲ್ಲಿ ಮದುವೆಗೂ ಮುನ್ನ ಪೂರ್ತಿ ಸ್ವೀಟ್ ಆಗಿಯೇ ಇದ್ದ ಸಂಬಂಧ, ಮದುವೆಯ ಬಳಿಕ ಜಗಳ ಕದನಕ್ಕೆ ನಾಂದಿ ಹಾಡಿದಾಗ ನಿಮ್ಮ ಕನಸಿನ ಬಲೂನ್‌ಗೆ ಸೂಜಿ ಚುಚ್ಚಿದಂತಾಗಬಹುದು. 

ಒಟ್ಟಿಗೇ ಟ್ರಾವೆಲ್ ಮಾಡಿ

ಸ್ವಲ್ಪ ದೂರದ ಸ್ಥಳಕ್ಕೆ ಇಬ್ಬರೂ ಪ್ರವಾಸ ಹೋಗಿ. ಹೊಸ ಪರಿಸರದಲ್ಲಿ, ಹೊಸ ಹೊಸ ಅನುಭವಗಳ ನಡುವೆ ಇಬ್ಬರೂ ಅದನ್ನು ಹೇಗೆ ನಿಭಾಯಿಸುತ್ತೀರಿ, ಜನರೊಂದಿಗೆ ಹೇಗೆ ವ್ಯವಹರಿಸುತ್ತೀರಿ, ಹಣಕಾಸು ಇತ್ಯಾದಿಗಳನ್ನು ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂಬುದೆಲ್ಲ ಇಬ್ಬರಿಗೂ ಅರಿವಿಗೆ ಬರುತ್ತದೆ. ಅಲ್ಲದೆ, ಇದು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವ ಅನುಭವ ಆಗಿ ಕೂಡಾ ಉಳಿಯುತ್ತದೆ.

ಜವಾಬ್ದಾರಿಗಳನ್ನು ಹಂಚಿಕೊಳ್ಳಿ

ಸಂಪೂರ್ಣ ಜವಾಬ್ದಾರಿಹೀನ ಹುಡುಗನನ್ನು ಅಥವಾ ಹುಡುಗಿಯನ್ನು ವಿವಾಹವಾಗಲು ಯಾರಿಗೆ ತಾನೇ ಇಷ್ಟವಿರುತ್ತದೆ? ಹುಷಾರಿಲ್ಲದ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವುದಿರಬಹುದು, ಬಾಲ್ಕನಿ ಗಾರ್ಡನ್ ಮಾಡುವುದಿರಬಹುದು- ಯಾವೆಲ್ಲ ಕೆಲಸದಲ್ಲಿ ಇಬ್ಬರೂ ಜವಾಬ್ದಾರಿ ಹಂಚಿಕೊಳ್ಳಲು ಸಾಧ್ಯವೋ ಅದರಲ್ಲಿ ಹಂಚಿಕೊಳ್ಳಿ. ಈ ಜವಾಬ್ದಾರಿಯನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದರ ಮೇಲೆ ಎಷ್ಟು ರೆಸ್ಪಾನ್ಸಿಬಲ್ ಇದ್ದಾನೆಂದು ತಿಳಿಯಬಹುದು. 

ಅತಿಯಾದರೆ ಹಸ್ತಮೈಥುನವೂ ಡೇಂಜರಸ್...ಜೋಪಾನ!

ಆರ್ಥಿಕ ಒತ್ತಡ

ಹೊಸದಾಗಿ ವಿವಾಹವಾದ ಬಹುತೇಕ ಜೋಡಿಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಾರೆ. ಆರಂಭದಲ್ಲಿ ಖರ್ಚೂ ಜಾಸ್ತಿ. ಅಲ್ಲಿಯವರೆಗೆ ತಮಗಾಗಿ ಮಾಡುತ್ತಿದ್ದ ಖರ್ಚು ಈಗ ಡಬಲ್ ಆಗಬಹುದು, ಮನೆ ಸೆಟ್ ಮಾಡಬೇಕೆಂದರೆ ಇನ್ನೂ ಹೆಚ್ಚಾಗಬಹುದು. ಕೂಡಿಟ್ಟ ಗಂಟೆಲ್ಲ ಕರಗುತ್ತಾ ಬಂದಂತೆಲ್ಲ ಅದೇ ವಿಷಯಕ್ಕೆ ಮುನಿಸು ಆರಂಭವಾಗಬಹುದು. ಹೀಗಾಗಿ, ಮದುವೆಗೂ ಮುಂಚೆಯೂ ಇಬ್ಬರೂ ಹಣಕಾಸು ಖರ್ಚುವೆಚ್ಚವನ್ನು ಹಂಚಿಕೊಳ್ಳಿ. ಮನೆಗೆ ಹಣ ಕೊಡಬೇಕಿದ್ದರೆ ಅದಕ್ಕಿಷ್ಟು, ನಮ್ಮಿಬ್ಬರಿಗಿಷ್ಟು, ಮನೆಯ ಖರ್ಚಿಗಿಷ್ಟು, ಯಾರು ಯಾವುದನ್ನು ನಿಭಾಯಿಸಬೇಕು ಎಂಬುದನ್ನೆಲ್ಲ ಲೆಕ್ಕ ಹಾಕಿ ಹಂಚಿಕೊಳ್ಳಿ. ಇದರಿಂದ ಇಬ್ಬರೂ ಹೇಗೆ ಖರ್ಚು ಮಾಡುತ್ತೀರಿ, ಹಣಕಾಸಿನ ನಿರ್ವಹಣೆ ಹೇಗೆ ಮಾಡುತ್ತೀರಿ, ಸೇವಿಂಗ್ಸ್ ಕುರಿತ ನಿಲುವೇನು, ಈ ವಿಷಯದಲ್ಲಿ ಇಬ್ಬರ ಲೋಕಜ್ಞಾನ ಎಷ್ಟಿದೆ ಎಂಬುದೆಲ್ಲ ಅರಿವಿಗೆ ಬರುತ್ತದೆ. 

ಸಮಾನ ಹವ್ಯಾಸ ಹುಡುಕಿಕೊಳ್ಳಿ

ಮೂವಿಗೆ ಹೋಗುವುದು, ಡಿನ್ನರ್‌ಗೆ ಹೋಗುವುದೆಲ್ಲ ಇದ್ದಿದ್ದೇ. ಅದರ ಬದಲು ಇಬ್ಬರೂ ಒಟ್ಟಿಗೆ ಯೋಗ, ಜಿಮ್ ಯಾವುದಕ್ಕಾದರೂ ಹೋಗುವದು, ಎನ್‌ಜಿಒದಲ್ಲಿ ವಾಲಂಟೀರ್ ಆಗುವುದು, ಟ್ರೆಕಿಂಗ್ ಹೋಗುವುದು- ಹೀಗೆ ಯಾವುದಾದರೂ ಇಬ್ಬರ ಆಸಕ್ತಿಯ ಒಂದೇ ಹವ್ಯಾಸ ಹುಡುಕಿಕೊಂಡು ಒಟ್ಟಿಗೇ ಹೋಗಲು ಮಾಡಿ. ಇದರಿಂದ ಪ್ರತಿ ದಿನ ಮೀಟ್ ಆದಂತೆಯೂ ಆಗುತ್ತದೆ. ಜೊತೆಗೆ, ನಿಮ್ಮ ಪಾರ್ಟ್ನರ್‌ನ ಮತ್ತೊಂದು ಮುಖದ ಅನಾವರಣವೂ ಆಗಬಹುದು. ಅವರ ನಿಲುವುಗಳು, ಹೊರಗಿನವರೊಂದಿಗೆ ವ್ಯವಹರಿಸುವ ಕಲೆ, ಎನರ್ಜಿ, ಆ್ಯಟಿಟ್ಯೂಡ್ ಮುಂತಾದುವು ಗಮನಕ್ಕೆ ಬರುತ್ತವೆ. ಇದರಿಂದ ಭವಿಷ್ಯದ ಬಗ್ಗೆ ಸ್ಪಷ್ಟ ಕನಸುಗಳನ್ನು ಕಾಣಲು ಸಹಾಯವಾಗುತ್ತದೆ. 

ಬಾಲ್ಯದ ಕತೆ

ದಿನವೊಂದನ್ನು ಇಬ್ಬರ ಬಾಲ್ಯದ ಕತೆಗಳು, ಕುಟುಂಬ ಸದಸ್ಯರು, ಅವರೊಂದಿಗಿನ ಸಂಬಂಧ ಕುರಿತ ಕತೆಗಳನ್ನು ಕೇಳುತ್ತಾ ಕಳೆಯಿರಿ. ಇದರಿಂದ ಅವರು ಯಾವುದಕ್ಕೆ ಎಷ್ಟು ಮಹತ್ವ ಕೊಡುತ್ತಾರೆ, ಸಂಬಂಧಗಳಿಗೆ ಎಷ್ಟು ಬೆಲೆ ಕೊಡುತ್ತಾರೆ, ಯಾವ ಬಾಲ್ಯದ ಅನುಭವಗಳು ಅವರಿಗೆ ಸಿಹಿ, ಕಹಿ ಎನಿಸಿವೆ, ಅವರು ನಂಬಿ ಬಂದ ಮೌಲ್ಯಗಳೇನು ಮುಂತಾದ ವಿಷಯಗಳು ಸ್ಪಷ್ಟವಾಗುತ್ತವೆ. 
 

click me!