ಭಾರತದ ಈ ಸುಂದರ ತಾಣಗಳೀಗ ದೆವ್ವ ನಗರಿ...!

By Web Desk  |  First Published Jul 16, 2019, 10:32 AM IST

ನಮ್ಮ ದೇಶದಲ್ಲಿ ಹಲವುಪ ತಾಣಗಳು ಗೋಸ್ಟ್ ಟೌನ್ ಎಂದೇ ಖ್ಯಾತ ಪಡೆದಿವೆ. ಹಾಗಂತ ಅಲ್ಲಿ ಭೂತ ದೆವ್ವದ ಕಾಟ ಇದೆ ಎಂದರ್ಥವಲ್ಲ. ಅಲ್ಲಿ ಜನವಸತಿ ಇಲ್ಲದ ಕಾರಣ ಈ ಹೆಸರು ಬಂದಿದೆಯಷ್ಟೇ. ಅಂತಹ ತಾಣಗಳು ಯಾವುವು?
 


ಭಾರತದಲ್ಲಿರೋ ಸುಂದರ ತಾಣಗಳ ಬಗ್ಗೆ ನಮಗೆ ಗೊತ್ತು. ಆದರೆ, ಸ್ಮಶಾನ ಮೌನ ಆವರಿಸೋ ಗೋಸ್ಟ್ ಟೌನ್‌ ಎಂದೇ ಖ್ಯಾತವಾದ ನಗರಗಳ ಬಗ್ಗೆ ಏನಾದ್ರೂ ಕೇಳಿದ್ದೀರಾ? ಅನಾದಿ ಕಾಲದಿಂದಲೂ ಸುಂದರ ತಾಣಗಳಾಗಿದ್ದ ಈ ನಗರಗಳು ಪ್ರಾಕೃತಿಕ ವಿಕೋಪ, ದುಷ್ಟರ ದಾಳಿ ಹೀಗೆ  ಹತ್ತು ಹಲವು ಕಾರಣಗಳಿಂದ ನಶಿಸಿ ಹೋಗಿ, ಅವಶೇಷಗಳಾಗಿ ಮಾತ್ರ ಉಳಿದಿವೆ. ಅಷ್ಟೇ ಅಲ್ಲ, ಇಲ್ಲಿನ ಜನರೂ ಜೀವನ ನಡೆಸದ ಕಾರಣ ಇದು ಗೋಸ್ಟ್ ಟೌನ್ ಎಂದೇ ಖ್ಯಾತವಾಗಿವೆ. 

ಅಮಾವಾಸ್ಯೆಯಂದು ಈ ಕೋಟೆಯಿಂದ ಕೇಳಿ ಬರುತ್ತೆ ವಿಚಿತ್ರ ಕೂಗು!

ಧನುಷ್ಕೋಟಿ

Tap to resize

Latest Videos

undefined

ಪಂಬನ್ ಐಲ್ಯಾಂಡ್‌ನಲ್ಲಿರೋ ಈ ಪ್ರದೇಶಕ್ಕೆ 1964ರಲ್ಲಿ ದೊಡ್ಡದಾದ ಚಂಡಮಾರುತ ಅಪ್ಪಳಿಸಿತ್ತು. ಇದರಿಂದ ಧನುಷ್ಕೋಟಿ ಪೂರ್ತಿಯಾಗಿ ಡ್ಯಾಮೇಜ್ ಆಗಿತ್ತು. ಅಷ್ಟೇ ಅಲ್ಲದೆ ಪಂಬನ್ - ಧನುಷ್ಕೋಟಿ ನಡುವೆ ಚಲಿಸುವ ಪ್ಯಾಸೆಂಜರ್ ಟ್ರೈನನ್ನೂ ನಾಶ ಮಾಡಿ ಅದರಲ್ಲಿದ್ದ 115 ಜನರು ಸಾಯುವಂತೆ ಮಾಡಿತ್ತು. ಇದಕ್ಕೆ ಇಲ್ಲಿ ಸ್ಮಶಾನ ಮೌನ ನೆಲೆಸಿದೆ ಈಗ.

ಫತೇಪುರ್ ಸಿಕ್ರಿ 

ಮೊಘಲ್ ವಾಸ್ತುಶಿಲ್ಪ ಕಲೆಗೆ ಹೆಸರು ವಾಸಿಯಾದ ಈ ನಗರ ಯುನೆಸ್ಕೊ ವರ್ಲ್ಡ್ ಹೆರಿಟೇಜ್ ತಾಣವೂ ಹೌದು. 

ಲಕ್ ಪತ್ 

ಈ ಕೋಟೆಯ ನಗರ ಗುಜರಾತ್‌ನ ಕಛ್ ಜಿಲ್ಲೆಯಲ್ಲಿದೆ. ಇಲ್ಲಿ ಅಳಿದುಳಿದ ಕೋಟೆಗಳನ್ನು ನಾವು ಕಾಣಬಹುದು. 

ಗೋವಾದ 6 ನಿಗೂಢ ಜಾಗಗಳಿವು! ಹೀಗೂ ಉಂಟು...

ಮಾಂಡು 

ಇದು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮಾಲ್ವಾದಲ್ಲಿದೆ. ಇದು ಅಲ್ಲಿನ ಒಂದು ಸುಂದರ ಹಾಗೂ ಆಕರ್ಷಕ ಪ್ರವಾಸಿ ತಾಣ. ಇಲ್ಲಿ ಜನಪ್ರಿಯ ಜೈನ ದೇವಾಲಯಗಳು ಮತ್ತು ಮಸೀದಿಗಳಿವೆ. 

ಹಳೆ ಗೋವಾ

ಈ ಸುಂದರ ಬೀಚ್ 17ನೇ ಶತಮಾನದಲ್ಲಿ ಮಲೇರಿಯಾ ಮತ್ತು ಕಾಲರಾ ರೋಗದಿಂದ ಬಳಲಿ ಮೂಲೆ ಗುಂಪಾದ ತಾಣವಾಗಿತ್ತು. ಇಲ್ಲಿ ಉಳಿದಿರುವ ತಾಣಗಳು ಯುನೆಸ್ಕೊದ ವರ್ಲ್ಡ್ ಹೆರಿಟೇಜ್ ಸೈಟ್ ಲಿಸ್ಟ್‌ಗೆ ಸೇರಿದೆ. 

ರೋಸ್ ಐಲ್ಯಾಂಡ್ 

ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್‌ನಲ್ಲಿರುವ ಈ ದ್ವೀಪ ಪೋರ್ಟ್ ಬ್ಲೇರ್‌ನಲ್ಲಿದೆ. ಈ ಪ್ರದೇಶವನ್ನು ಮೇಲಿಂದ ಮೇಲೆ ಭೂಕಂಪ ಅಪ್ಪಳಿಸಿದ್ದು, ಈಗ ಗೋಸ್ಟ್ ಟೌನ್ ಎಂದೇ ಖ್ಯಾತವಾಗಿದೆ.

ಸ್ಮಶಾನದಲ್ಲಿರೋ 'ಲಕ್ಕಿ' ರೆಸ್ಟೋರೆಂಟ್ ಇದು!

ಬೆಂಗಳೂರು, ಗೋವಾದ ಹಲವು ಪ್ರದೇಶಗಳಲ್ಲಿ ಭೂತ ಇದೆ ಹೇಳಲಾಗುತ್ತಿದೆ. ಈ ನಗರಗಳಂತೂ ಅಕ್ಷರಶಃ ಪ್ರೇತಗಳಿರೋ ತಾಣಗಳಾಗಿವೆ.

click me!