ಮಕ್ಕಳು ಅತ್ತರೆ ಸಾಕು, ಇಲ್ಲವಾದರೆ ತುಸು ತುಸು ಕಿರಿ ಕಿರಿ ಮಾಡಿದರೂ ಹಸಿವೆಂದು ಬಾಯಿಗೆ ತುರುಕುತ್ತೇವೆ. ಅವು ಏನೇ ಕಾರಣಕ್ಕೂ ಅತ್ತರೂ ಹಸಿವೆಗೆ ರಗಳೆ ಎಂದು ತಿನ್ನಲು ಒತ್ತಾಯಿಸುತ್ತೇವೆ. ಆದರೆ, ಆ ಮುಗ್ಧ ಮಕ್ಕಳಿಂದ ನಾವು ಕಲಿಯುವಂಥದ್ದೂ ಇವೆ. ಏನವು?
ಕಲಿಯುವ ಮನಸ್ಸಿದ್ದರೆ ಮಕ್ಕಳಿಂದಲೂ ಕಲಿಯಬಹುದು. ಅದರಲ್ಲಿಯೂ ತಿನ್ನುವ ವಿಚಾರದಲ್ಲಿ ಮಕ್ಕಳಿಂದ ಕಲಿಯುವಂತದ್ದು ತುಂಬಾ ವಿಷಯಗಳಿವೆ. ಟಿವಿ ನೋಡುವಾಗ, ಹೋಯಿತು, ಬಂತು ಬಾಯಿಯಲ್ಲಿ ಸದಾ ಏನಾದರೂ ಮುಕ್ಕುತ್ತಲೇ ಇರುವವರಿಗೆ ಮಕ್ಕಳು ಕಲಿಸುವ ಪಾಠವಿದು...
ತುಂಟ ಮಕ್ಕಳನ್ನು ಬೈಯದೇ ಸಂಭಾಳಿಸಬಹುದಾ!
ಅದಕ್ಕೆ ಮಕ್ಕಳಿಗೆ ತಾವಾಗಿಯೇ ತಿನ್ನೋ ಅಭ್ಯಾಸ ಮಾಡಿಸಬೇಕು. ಎಷ್ಟು ಬೇಕೋ ಅಷ್ಟು ತಿಂದು ಸುಮ್ಮನಾಗುತ್ತವೆ. ಒತ್ತಾಯವಾಗಿ ತಿನಿಸಿದರೆ ವಾಂತಿ, ಬೇಧಿಯಂಥ ಅನಾರೋಗ್ಯ ಸದಾ ಕಾಡುತ್ತದೆ. ಅಲ್ಲದೇ ಆರೋಗ್ಯವಾಗಿರಲು ಒಳ್ಳೊಳ್ಳೆ ಅಭ್ಯಾಸಗಳನ್ನು ಕಲಿಸಬೇಕು.