ವೈರಲ್ ಚೆಕ್: ಬಿಸಿ ಎಳನೀರಿನಿಂದ ಕ್ಯಾನ್ಸರ್‌ ಗುಣಮುಖವಾಗುತ್ತಾ?

Published : Apr 29, 2019, 02:02 PM ISTUpdated : Apr 29, 2019, 02:05 PM IST
ವೈರಲ್ ಚೆಕ್:  ಬಿಸಿ ಎಳನೀರಿನಿಂದ ಕ್ಯಾನ್ಸರ್‌ ಗುಣಮುಖವಾಗುತ್ತಾ?

ಸಾರಾಂಶ

ಬಿಳಿ ಎಳನೀರು ಕುಡಿದರೆ ಕ್ಯಾನ್ಸರ್‌ ಗುಣವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? ಇಲ್ಲಿದೆ ಓದಿ. 

ಬಿಳಿ ಎಳನೀರು ಕುಡಿದರೆ ಕ್ಯಾನ್ಸರ್‌ ಗುಣವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ಹೀಗಿದೆ, ‘ಹಾಟ್‌ ಕೊಕನಟ್‌ ವಾಟರ್‌ ನಿಮ್ಮನ್ನು ಜೀವನಪೂರ್ತಿ ಕಾಪಾಡುತ್ತದೆ. ಅದಕ್ಕೆ ಮಾಡಬೇಕಿರುವುದಿಷ್ಟೆ, ಎಳನೀರಿನಲ್ಲಿರುವ ತೆಳುಗಂಜಿಗೆ ಬಿಸಿ ನೀರನ್ನು ಹಾಕಿ. ಅದು ‘ಅಲ್ಕೇನ್‌ ವಾಟರ್‌’ ಆಗುತ್ತದೆ. ಇದನ್ನು ಪ್ರತಿ ದಿನ ಕುಡಿದಲ್ಲಿ ಕ್ಯಾನ್ಸರ್‌ ಗುಣಮುಖವಾಗುತ್ತದೆ. ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಇದು ಕ್ಯಾನ್ಸರ್‌ ಸೆಲ್‌ಗಳನ್ನು ಕೊಲ್ಲುತ್ತದೆ. ಎಳನೀರು ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಈ ಸಂದೇಶವನ್ನು ಪ್ರತಿಯೊಬ್ಬರಿಗೂ ತಲುಪಿಸಿ’ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಬಿಸಿ ಎಳನೀರಿಗೆ ಕ್ಯಾನ್ಸರ್‌ ಗುಣಪಡಿಸುವ ಶಕ್ತಿ ನಿಜಕ್ಕೂ ಸಾಬೀತಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ಕ್ವಿಂಟ್‌ ಸುದ್ದಿಸಂಸ್ಥೆಯು ದೆಹಲಿಯ ಅಪೋಲೋ ಆಸ್ಪತ್ರೆ ಕ್ಯಾನ್ಸರ್‌ ತಜ್ಞರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು ಅವರು, ‘ ಬಿಸಿ ಎಳನೀರಿನಿಂದ ಕ್ಯಾನ್ಸರ ಮತ್ತು ಟ್ಯೂಮರ್‌ ಗುಣವಾಗುತ್ತದೆ ಎಂಬ ಯಾವ ಸಂಶೋಧನೆಗಳೂ ನಡೆದಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ’ಎಂದಿದ್ದಾರೆ.

ಎಳನೀರಿನಿಂದ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಸೋಂಕನ್ನು ತಡೆಗಟ್ಟುವ ಶಕ್ತಿ ಇದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೆಲ್ಲಕ್ಕಿಂತಾ ಹೆಚ್ಚಾಗಿ ಪೌಷ್ಟಿಕಾಂಶವಿರುವ ಉತ್ತರ ಆಹಾರಗಳಲ್ಲಿ ಒಂದು. ಅದರ ಹೊರತಾಗಿ ಎಳನೀರಿನಲ್ಲಿ ಕ್ಯಾನ್ಸರ್‌ ಅಥವಾ ಟ್ಯೂಮರ್‌ ಅನ್ನು ಗುಣಪಡಿಸುವ ಅಂಶಗಳಿಲ್ಲ.

- ವೈರಲ್ ಚೆಕ್ 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ