ಭಾರತದಲ್ಲಿ ಸೆಕ್ಸ್ ಅಥವಾ ಲೈಂಗಿಕ ಕ್ರಿಯೆ ಬಗ್ಗೆ ಮಡಿವಂತಿಕೆ ಹೆಚ್ಚು. ಈ ಬಗ್ಗೆ ಯಾರೂ ಮುಕ್ತವಾಗಿ ಮಾತನಾಡುವುದೇ ಇಲ್ಲ. ಆ ಕಾರಣದಿಂದಲೇ ಹಲವು ಆರೋಗ್ಯ, ಮಾನಸಿಕ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ವಿರ್ಯಾಣುವಿನಿಂದಲೂ ಹೆಣ್ಣಿಗೆ ಅಲರ್ಜಿ ಆಗಬಹುದು ಎಂಬ ವಿಷಯ ಗೊತ್ತಾ? ಏನಿದು ತಿಳಿದುಕೊಳ್ಳಿ....
ಮುಟ್ಟು, ಋತುಬಂಧ ಹಾಗೂ ಸೆಕ್ಸ್ ಎಲ್ಲವೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ವಿಷಯಗಳು. ಒಂದಕ್ಕೊಂದು ಸಂಬಂಧ ಹೊಂದಿದ್ದು, ಈ ಎಲ್ಲವೂ ಹೆಣ್ಣಿನ ಒಟ್ಟಿನ ಆರೋಗ್ಯದೊಂದಿಗೂ ಸಂಬಂಧ ಹೊಂದಿರುತ್ತದೆ. ಲೈಂಗಿಕ ಕ್ರಿಯೆ ವೇಳೆ ಹೆಣ್ಣು ಅನುಭವಿಸುವ ಕೆಲವು ನೋವಿಗಿಲ್ಲಿವೆ ಪರಿಹಾರ....
ಸೇಮನ್ ಅಲರ್ಜಿ: ಗಂಡಿನ ಸ್ಪರ್ಮ್ ಅಂದರೆ ವೀರ್ಯಾಣುನಲ್ಲಿರುವ ಕೆಲವು ಪ್ರೊಟೀನ್ ಅಂಶಗಳು ಹೆಣ್ಣಿಗೆ ಅಲರ್ಜಿಯನ್ನು ಉಂಟು ಮಾಡಬಹುದು. ಇದರಿಂದ ಅನೇಕ ಮಹಿಳೆಯರು ತೊಂದರೆ ಅನುಭವಿಸುತ್ತಾರೆ. ಲೈಂಗಿಕ ಕ್ರಿಯೆ ನಂತರ ಉರಿಯೂತ, ನವೆ ಹಾಗೂ ಜನನಾಂಗಳ ಊತ ಕಂಡು ಬಂದರೆ, ಅದಕ್ಕೆ ಸ್ಪರ್ಮ್ ಅಲರ್ಜಿಯೂ ಕಾರಣವಾಗಿರಬಹುದು. ಅಯ್ಯೋ ದೇವರೇ, ವೀರ್ಯಾಣುವೇ ಅಲರ್ಜಿಯಾದರೆ ಮಗುವನ್ನು ಹೆರುವುದು ಹೇಗೆಂದು ಚಿಂತಿರಾಗಬೇಡಿ. ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ, ಸಲಹೆ ಪಡೆಯಿರಿ. ಕಾಂಡೋಮ್ ಬಳಕೆಯಿಂದಲೂ ಈ ಸಮಸ್ಯೆಗೆ ತಾತ್ಕಾಲಿಕ ಶಮನ ಪಡೆಯಬಹುದು.
ತೆಲೆ ನೋವು: ಸೆಕ್ಸ್ ನಂತರ ತಲೆ ನೋವು ಬರುವುದು ದೇಹದಲ್ಲಿ ನೀರು ಕಡಿಮೆಯಾದಾಗ. 100ರಲ್ಲಿ ಮೂವರಿಗೆ ಕಂಡು ಬರುವ ಸಮಸ್ಯೆ ಇದು. ಲೈಂಗಿಕ ಕ್ರಿಯೆ ವೇಳೆ ಆಗುವ ರಕ್ತ ಸ್ರಾವಕ್ಕೂ ನೀರಿನ ಕೊರತೆ ಕಾರಣ.
ಬ್ಲಾಕೆಡ್ಸ್: ಯೋನಿ ಮೇಲೆ ಮೊಡವೆ ಹಾಗು ಬ್ಲಾಕೆಡ್ಸ್ ಮೂಡಲು ಶೇವಿಂಗ್ ಅಥವಾ ವ್ಯಾಕ್ಸಿಂಗ್ ಕಾರಣವಾಗಬಹುದು. ಅದರಲ್ಲೂ ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಈ ಮೊಡವೆಯೇ ಉರಿ ತರಬಹುದು. ಗಂಡಸರಿಗೂ ವಿಪರೀತ ನೋವು ಕಾಣಿಸುತ್ತದೆ. ಸದಾ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಹಾಗೂ ವ್ಯಾಕ್ಸಿಂಗ್ ಹಾಗೂ ಶೇವಿಂಗ್ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು.
ಯೋನಿ ಒಣಗುವುದು: ಋತುಬಂಧ ಸಮಯದಲ್ಲಿ ಕಂಡು ಬಂದು ಸಾಮಾನ್ಯ ತೊಂದರೆ ಇದು. ಇಲ್ಲವಾದರೆ ಎದೆ ಹಾಲುಣಿಸುವಾಗ ಅಥವಾ ಮುಟ್ಟಾದಾಗ ಬಳಸುವ ಸ್ಯಾನಿಟರಿ ಪ್ಯಾಡ್ ಬಳಕೆಯಿಂದಲೂ ಈ ಸಮಸ್ಯೆ ಕಾಡಬಹುದು. ಇದರಿಂದ ಸುಖ ಪಡೆಯುವ ಸೆಕ್ಸ್ ಹೆಣ್ಣಿಗೆ ಯಾತನಾಮಯವಾಗಿರುತ್ತದೆ. ಯೋನಿ ಹರಿದಂಥ ಗಾಯ ಕಾಣಿಸಿಕೊಳ್ಳುವುದಲ್ಲದೇ, ಕೆಂಪು ಕೆಂಪಾದ ಗುಳ್ಳೆಗಳಿಗೂ ಇದು ಕಾರಣ.
ಋತುಬಂಧ ಸೆಕ್ಸ್ ಅಂತ್ಯವಲ್ಲ: ಕೆಲವರು ಮುಟ್ಟು ನಿಂತರ ಇನ್ನು ಸೆಕ್ಸ್ ಅನಗತ್ಯವೆಂದೇ ಭಾವಿಸುತ್ತಾರೆ. ಆದರೆ, ಮುಟ್ಟು ನಿಂತ ಕೂಡಲೇ ಸೆಕ್ಸ್ ಲೈಫ್ ಅಂತ್ಯವಾಗಬೇಕೆಂದೇನೂ ಇಲ್ಲ. ಅಕಸ್ಮಾತ್ ಏನಾದರೂ ಸಮಸ್ಯೆ ಕಾಣಿಸಿದರೆ, ವೈದ್ಯರ ಬಳಿ ಸಲಹೆ ಪಡೆಯಬಹುದು. ಊರಿ, ಟೈಟ್‌ನೆಸ್‌ನಂಥ ಸಮಸ್ಯೆ ಕಾಣಿಸಿದರೆ ಸೂಕ್ತ ಚಿಕಿತ್ಸೆ ಲಭ್ಯವಿರುತ್ತದೆ.
** ಲೈಂಗಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಪ್ರತಿಯೊಬ್ಬ ಮನುಷ್ಯನನ್ನೂ ಕಾಡುತ್ತದೆ. ಅದಕ್ಕೆ ಚಿಂತಿತರಾಗುವ ಅಗತ್ಯವಿಲ್ಲ. ಅಲ್ಲದೇ ಹೇಳಿ ಕೊಳ್ಳಲು ಸಂಕೋಚವಾಗುವುದರಿಂದ 'ಲೈಂಗಿಕ ಸಮಸ್ಯೆಗಳಿಗೆ ಸೂಕ್ತ ಔಷಧಿ ಕೊಡುತ್ತೇವೆ...' ಎಂದು ರಸ್ತೆ ಬದಿಗಳಲ್ಲಿ ಬೋರ್ಡ್ ಹಾಕಿ ಕೊಳ್ಳುವ ನಕಲಿ ವೈದ್ಯರ ಬಳಿಯೂ ಹೋಗಬೇಡಿ. ಜೀವನ ಶೈಲಿಯಲ್ಲಿ ತುಸು ಬದಲಾವಣೆ, ಅಲ್ಲದೇ, ನೈರ್ಮಲೀಕರಣದೆಡೆಗೆ ಹೆಚ್ಚು ಒತ್ತು ನೀಡುವುದರಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ನೆನಪಿರಲಿ.