
ಫಿಲಿಡೆಲ್ಫಿಯಾ(ನ.27): ನಿತ್ಯವೂ ಸಾಕುನಾಯಿ ಜೊತೆ ಮಲಗುವ ಮಹಿಳೆಯರು ಇತರರಿಗಿಂತ ಹೆಚ್ಚು ನೆಮ್ಮದಿಯ ನಿದ್ದೆ ಮಾಡುತ್ತಾರೆ ಎಂದು ನೂತನ ಸಂಶೋಧನಾ ವರದಿಯೊಂದು ಹೇಳಿದೆ.
ಹೌದು, ಇಲ್ಲಿನ ಕ್ಯಾನಿಸಿಸ್ ಕಾಲೇಜ್‌ನ ಸಂಶೋಧನಾ ತಂಡ ಈ ವಿಷಯ ಬಹಿರಂಗಪಡಿಸಿದ್ದು, ಸಾಕುನಾಯಿಯ ಜೊತೆ ಮಲಗುವ ಮಹಿಳೆಯರು ಹೆಚ್ಚು ನೆಮ್ಮದಿಯ ನಿದ್ದೆ ಮಾಡುತ್ತಾರೆ ಎಂದು ಹೇಳಿದೆ.
ತಮ್ಮ ಸಂಗಾತಿ, ಅಥವಾ ಇತರ ಮಹಿಳೆ ಹೀಗೆ ಬೇರೋಬ್ಬ ಮನುಷ್ಯನೊಂದಿಗೆ ಮಲಗುವ ಮಹಿಳೆಯರಿಗಿಮತ ಸಾಕುನಾಯಿ ಜೊತೆ ಮಲಗುವ ಮಹಿಳೆಯರಿಗೆ ಒಳ್ಳೆಯ ನಿದ್ದೆ ಬರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕಾಗಿ ಅಮೆರಿಕದ 962 ಮಹಿಳೆಯರನ್ನು ಸಂಶೋಧನೆಗೊಳಪಡಿಸಲಾಗಿದ್ದು, ಇವರಲ್ಲಿ ಶೇ.55 ರಷ್ಟು ಮಹಿಳೆಯರು ಸಾಕುನಾಯಿ ಜೊತೆ ಮಲಗುವ ಹವ್ಯಾಸ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.
ಸಾಕು ನಾಯಿ ಮತ್ತು ಮಹಿಳೆಯರ ನಡುವೆ ಬಹಳ ಬೇಗ ಉತ್ತಮ ಸಂಬಂಧ ಏರ್ಪಡುವುದು ಎಂದು ಸಂಶೋಧನೆ ತಿಳಿಸಿದೆ. ಇದೇ ಕಾರಣಕ್ಕೆ ಸಾಕುನಾಯಿ ಜೊತೆ ಮಲಗುವ ಮಹಿಳೆಯರು ಸುರಕ್ಷತಾ ಭಾವದೊಂದಿಗೆ ಒಳ್ಳೆಯ ನಿದ್ದೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.