ಒಡೆದ ಪಾದ ಮುಖದ ಅಂದಕ್ಕೆ ದೃಷ್ಟಿ ಬೊಟ್ಟು...!

By Web DeskFirst Published Jun 4, 2019, 3:49 PM IST
Highlights

ನೀವು ಮುಖದ ಅಂದ ಹಾಗೂ ಫಿಟ್ನೆಸ್‌ಗೆ ಹೆಚ್ಚಿನ ಗಮನ ಹರಿಸುತ್ತಿರಬಹುದು. ಆದರೆ, ಪಾದಗಳನ್ನು ಕಡೆಗಣಿಸುತ್ತಿದ್ದೀರಾದರೆ, ಮುಖ, ಮೈಕಟ್ಟಿನ ಅಂದಕ್ಕೆ ಒಡೆದ ಪಾದ ದೃಷ್ಟಿಬೊಟ್ಟಿನಂತಾದೀತು. 
 

ನಮ್ಮಲ್ಲಿ ಹೆಚ್ಚಿನವರ ಪಾದ ಬಾಯಿ ಬಿಟ್ಟುಕೊಂಡು ಒಂದೊಂದು ಹೆಜ್ಜೆಗೂ ಗೋಳೋ ಎಂದು ಅಳುತ್ತಿರುತ್ತವೆ. ಅದರೆ ಕಿವಿಗೂ ಕಾಲಿಗೂ ಅಂತರ ಹೆಚ್ಚಿರುವುದರಿಂದಲೋ ಏನೋ ಅವರದಕ್ಕೆ ಕಿವುಡಾಗಿರುತ್ತಾರೆ. ಸತ್ತ ಕೋಶಗಳು, ಅತಿಯಾದ ಡ್ರೈನೆಸ್, ಗಡಸು ರಾಸಾಯನಿಕಗಳು ಎಲ್ಲವೂ ಸೇರಿ ಪಾದದ ಅಂದ ಹರಿಪಾದ ಸೇರಿರುತ್ತದೆ. ಪಾದವು ನೀರಿನಂಶ ಕಳೆದುಕೊಂಡಾಗ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಸೇರಿಕೊಂಡು ಇನ್ಫೆಕ್ಷನ್ ಆಗುವುದು ಸುಲಭ. ನಿಮ್ಮ ಸ್ಟೈಲಿಶ್ ಕಾಸ್ಟ್ಲಿ ಚಪ್ಪಲಿಗಳ ಬೆಲೆ ಎಲ್ಲರಿಗೂ ತಿಳಿಯಬೇಕೆಂದರೆ ಮೊದಲು ಆ ಪಾದಗಳತ್ತ ಗಮನ ಹರಿಸಿ. ಇದಕ್ಕಾಗಿ ಮನೆಯಲ್ಲೇ ಏನು ಮಾಡಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ.

ಬೆಣ್ಣೆಹಣ್ಣು ಹಾಗೂ ಬಾಳೆಹಣ್ಣು
ಒಂದು ಬಾಳೆಹಣ್ಣು, ಬೆಣ್ಣೆಹಣ್ಣು ಹಾಗೂ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕಲೆಸಿ ಪಾದಗಳಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮಾಯಿಶ್ಚರೈಸರ್ ಹಚ್ಚಿ ಸಾಕ್ಸ್ ಹಾಕಿಕೊಳ್ಳಿ. ಬಾಳೆಹಣ್ಣು ಹಾಗೂ ಬೆಣ್ಣೆಹಣ್ಣಿನಲ್ಲಿರುವ ಅಮೈನೋ ಆ್ಯಸಿಡ್ ಹಾಗೂ ಫ್ಯಾಟಿ ಆ್ಯಸಿಡ್‌ಗಳು ಕೋಶಗಳ ಪುನರುತ್ಪಾದನೆಗೆ ಸಹಾಯ ಮಾಡಿ, ಕಾಲುಗಳು ಹೆಚ್ಚು ಆರೋಗ್ಯವಂತವಾಗಿ ಕಾಣುವಂತೆ ನೋಡಿಕೊಳ್ಳುತ್ತವೆ.

ಕರಾಗ್ರೇ ವಸತೇ ಲಕ್ಷ್ಮೀ ಹೇಳೋ ಬದಲು ಹೀಂಗ್ ಮಾಡ್ತೀರಾ? ಬಿಟ್ ಬಿಡಿ ಬೇಗ..

ಅಡುಗೆ ಸೋಡಾ ಹಾಗೂ ಕೊಬ್ಬರಿ ಎಣ್ಣೆ
ಎರಡು ಚಮಚ ಕೊಬ್ಬರಿ ಎಣ್ಣೆಗೆ ಅರ್ಧ ಚಮಚ ಬೇಕಿಂಗ್ ಸೋಡಾ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಹತ್ತಿಯ ತುಂಡಿನಿಂದ ಪಾದಗಳಿಗೆ ನಯವಾಗಿ ಸವರಿ. ಅರ್ಧ ಗಂಟೆ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಮೂರು ಬಾರಿ ಈ ರೀತಿ ಮಾಡಿ. ಬೇಕಿಂಗ್ ಸೋಡಾ ಹಾಗೂ ಕೊಬ್ಬರಿ ಎಣ್ಣೆ ಸೇರಿದಾಗ ಅದೊಂದು ಅತ್ಯುತ್ತಮ ಹೈಡ್ರೇಟಿಂಗ್ ಕ್ರೀಮ್ ಆಗುತ್ತದೆ. ಇದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವು ಬ್ಯಾಕ್ಟೀರಿಯಾ, ಫಂಗಸ್ ಹಾಗೂ ಇತರೆ ಇನ್ಫೆಕ್ಷನ್ ತರುವ ಕೀಟಾಣುಗಳನ್ನು ದೂರವಿಡುತ್ತದೆ.

ರೋಸ್ ವಾಟರ್, ಗ್ಲಿಸರಿನ್, ನಿಂಬೆ 
1 ಚಮಚ ನಿಂಬೆ ರಸಕ್ಕೆ 2 ಚಮಚ ಗ್ಲಿಸರಿನ್, 3 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ಕದಡಿ. ಇದನ್ನು ಪಾದಗಳಿಗೆ ಹಚ್ಚಿ ಕೆಲ ಕಾಲ ಮಸಾಜ್ ಮಾಡಿ. ಈ ಪೇಸ್ಟನ್ನು ಪಾದ ಹೀರಿಕೊಂಡ ಬಲಿಕ ಚೆನ್ನಾಗಿ ತೊಳೆದು ಸಾಕ್ಸ್ ಹಾಕಿಕೊಳ್ಳಿ. ಈ ಸಾಮಗ್ರಿಗಳ ಅಸಿಡಿಕ್ ಆಗೂ ಇತರೆ ಗುಣಗಳು ಒಟ್ಟಾಗಿ ಸೇರಿ ಇನ್ಫೆಕ್ಷನ್ ದೂರವಿಟ್ಟು, ಡೆಡ್ ಸೆಲ್ಸ್‌ಗಳನ್ನು ತೆಗೆದು ಹಾಕುತ್ತವೆ. ಪಾದವನ್ನು ಹೈಡ್ರೇಟ್ ಮಾಡಿ ಅದಕ್ಕೆ ಜೀವ ನೀಡುತ್ತದೆ.

ಜೇನುತುಪ್ಪ ಹಾಗೂ ಓಟ್ಸ್
3 ಚಮಚ ಓಟ್‌ಮೀಲ್‌ಗೆ ಎರಡು ಚಮಚ ಜೇನುತುಪ್ಪ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನುಅಂಗಾಲಿಗೆ ಹಚ್ಚಿ ಚೆನ್ನಾಗಿ ಸ್ಕ್ರಬ್ ಮಾಡಿ. ಸಾಕ್ಸ್ ಹಾಕಿಕೊಂಡು 1 ಗಂಟೆಗಳ ಕಾಲ ಪೇಸ್ಟ್ ಕಾಲಿನಲ್ಲಿರುವಂತೆ ನೋಡಿಕೊಳ್ಳಿ. 
ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಜೇನುತುಪ್ಪ ಹಾಗೂ ಓಟ್ಸ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್, ಮಿನರಲ್ಸ್ ಹಾಗೂ ವಿಟಮಿನ್ಸ್‌ಗಳು ಡ್ರೈನೆಸ್ ಹೊಡೆದೂಡಿಸಿ ಡೆಡ್‌ಸ್ಕಿನ್ ತೆಗೆದು ಹಾಕುತ್ತವೆ.

ವರ್ಕ್ಔಟ್ ಮಾಡುವಾಗ ಗುಂಡು, ತುಂಡಿನ ಮೇಲಿರಲಿ ಹಿಡಿತ...

ಸಕ್ಕರೆ ಮತ್ತು ವ್ಯಾಸಲೀನ್
ಸಕ್ಕರೆ ಹಾಗೂ ವ್ಯಾಸಲೀನ್ ಮಿಕ್ಸ್ ಡೆಡ್‌ಸೆಲ್ಸ್ ಕಿತ್ತು ಹಾಕಿ, ಹೊಸ ಕೋಶಗಳ ಬೆಳವಣಿಗೆಗೆ ಸಹಕಾರ ನೀಡುತ್ತವೆ. ಅಲ್ಲದೆ ವ್ಯಾಸಲೀನ್‌ ಪಾದಕ್ಕೆ ನುಣುಪನ್ನು ನೀಡಿ, ಒಡಕನ್ನು ಹೋಗಲಾಡಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿ ರಾತ್ರಿ ಈ ಮಿಕ್ಸ್ ಕಾಲಿಗೆ ಹಚ್ಚಿಕೊಂಡು ಮಲಗಿ.

click me!