ಧೂಮಪಾನ ತ್ಯಜಿಸಲು ಈ  ಟಿಪ್ಸ್ ಫಾಲೋ ಮಾಡಿ

Published : Jan 31, 2025, 10:50 AM ISTUpdated : Jan 31, 2025, 11:01 AM IST
ಧೂಮಪಾನ ತ್ಯಜಿಸಲು ಈ  ಟಿಪ್ಸ್ ಫಾಲೋ ಮಾಡಿ

ಸಾರಾಂಶ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಧೂಮಪಾನದಿಂದ ಶ್ವಾಸಕೋಶದ ತೊಂದರೆ, ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಧೂಮಪಾನ ಚಟದಿಂದ ಹೊರಬರಲು ನಿಕೋಟಿನ್ ಬದಲಿ ಚಿಕಿತ್ಸೆ, ವ್ಯಾಯಾಮ, ಒತ್ತಡ ನಿರ್ವಹಣೆ ಮತ್ತು ಇತರ ಸಲಹೆಗಳನ್ನು ಪಾಲಿಸಿ.

Smoking Habit: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಲ್ಲರಿಗೂ ಗೊತ್ತು. ಪ್ರತಿ ಸಿಗರೇಟ್ ಪ್ಯಾಕೆಟ್ ಮೇಲೆಯೂ ಆರೋಗ್ಯಕ್ಕೆ ಹಾನಿಕಾರ ಎಂದು ಕಡ್ಡಾಯವಾಗಿ ಚಿತ್ರ ಸಹಿತವೇ ಬರೆದಿರಲಾಗಿರುತ್ತದೆ. ಆದ್ರೂ ಜನರು ಸಿಗರೇಟ್ ಬಳಸುತ್ತಲೇ ಇರುತ್ತಾರೆ. ಮಾರುಕಟ್ಟೆಯಲ್ಲಿಯೂ ವಿವಿಧ ಕಂಪನಿಗಳ ಸಿಗರೇಟ್‌ಗಳು ಸಿಗುತ್ತವೆ. ಆದ್ರೆ  ಯಾವುದೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಧೂಮಪಾನದಿಂದ ಶ್ವಾಸಕೋಶದ ತೊಂದರೆ, ದೀರ್ಘಕಾಲದ ಬ್ರಾಂಕೈಟಿಸ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ಒಮ್ಮೆ ಧೂಮಪಾನಕ್ಕೆ ಅಡಿಕ್ಟ್ ಆದವರು, ಈ ಚಟದಿಂದ ಹೊರ ಬರಲು ತುಂಬಾನೇ  ಕಷ್ಟಪಡುತ್ತಿರುತ್ತಾರೆ. ನೀವು ಸಹ ಧೂಮಪಾನದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಟಿಪ್ಸ್‌ಗಳನ್ನು ಅನುಸರಿಸಿ.

ಧೂಮಪಾನ ಬಿಡೋಕೆ ನಿಕೋಟಿನ್ ಬದಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಇದು ದೇಹಕ್ಕೆ ಸ್ವಲ್ಪ ನಿಕೋಟಿನ್ ಕೊಡುತ್ತೆ. ಆದ್ರೆ ಧೂಮಪಾನದಲ್ಲಿರುವಷ್ಟು ಹಾನಿಕಾರಕ ರಾಸಾಯನಿಕಗಳಿಲ್ಲ. ಹಸಿವು ಕಡಿಮೆ ಮಾಡಲು ನಿಕೋಟಿನ್ ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಚಾಕ್ಲೆಟ್/ಚೂಯಿಂಗ್ ಗಮ್ ರೂಪದಲ್ಲಿ ನಿಕೋಟಿನ್ ಸಿಗುತ್ತದೆ. ಆದ್ರೆ ಒಂದೇ ದಿನ ಇದರ ಪರಿಣಾಮ ಸಿಗಲ್ಲ. ನಿರಂತರವಾಗಿ ಬಳಕೆಯಿಂದ ಧೂಮಪಾನ ಚಟದಿಂದ ಹೊರಗೆ ಬರಬಬಹುದು. 

ಪ್ರತಿಯೊಬ್ಬರೂ ಒಂದೊಂದು ಕಾರಣಕ್ಕೆ ಧೂಮಪಾನ ಮಾಡುತ್ತಿರುತ್ತಾರೆ  ಧೂಮಪಾನ ಬಿಡಬೇಕು ಅಂದ್ರೆ ಪಾರ್ಟಿಗಳಿಗೆ ಹೋಗೋದು, ಫೋನ್‌ನಲ್ಲಿ ಹೆಚ್ಚು ಹೊತ್ತು ಮಾತಾಡೋದು, ಸ್ಟ್ರೆಸ್ ತಗೊಳೋದು ಮಾಡಬೇಡಿ. ಇತ್ತೀಚಿನ ದಿನಗಳಲ್ಲಿ ಒತ್ತಡ  ನಿವಾರಣೆಗಾಗಿ ಸಿಗರೇಟ್  ಸೇದುತ್ತವೆ ಎಂದು ಹೇಳುತ್ತಾರೆ. ಒತ್ತಡ ಹೆಚ್ಚಿದ್ರೆ ಯೋಗ, ಧ್ಯಾನ ಮಾಡೋದನ್ನು ರೂಢಿಸಿಕೊಳ್ಳಿ. ಧೂಮಪಾನ ಬಿಡೋಕೆ ವ್ಯಾಯಾಮ ಮಾಡಬೇಕು. ಓಡೋದು, ನಡೆಯೋದು ಅಥವಾ ಜಿಮ್‌ಗೆ ಹೋಗೋದು ಮಾಡಿ. ಹೀಗೆ ಮಾಡಿದ್ರೆ ಧೂಮಪಾನದ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ವಿಳ್ಯದೆಲೆ ತಿಂದ್ರೆ ಏನಾಗುತ್ತೆ? ಈ ಸಮಸ್ಯೆಗಳಿದ್ರೆ ದಿನಕ್ಕೊಂದು ಎಲೆ ತಿನ್ನಿ

ಕೆಲವರು ದಿನಕ್ಕೆ ಒಂದು ಸಿಗರೇಟ್ ಸೇದುತ್ತೇನೆ ಅಂತ ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿಕೊಂಡು ಸೇದುತ್ತಾರೆ. ಆದ್ರೆ ಹೀಗೆ ಮಾಡೋದು ನಿಮ್ಮನ್ನೇ ನೀವು ಮೋಸ ಮಾಡಿಕೊಂಡಂತೆ ಆಗುತ್ತದೆ . ಒಂದು ಸಿಗರೇಟ್ ಸೇದಿದ್ರೆ ಇನ್ನೂ ಸೇದಬೇಕು ಅನ್ನಿಸುತ್ತೆ. ಹಾಗಾಗಿ ಸಿಗರೇಟ್ ಸೇದಬೇಕು ಅನ್ನಿಸಿದಾಗ ಆಸೆ ಕಂಟ್ರೋಲ್ ಮಾಡ್ಕೊಳ್ಳಿ. ಯಾವುದೇ ಕಾರಣಕ್ಕೂ ಸಿಗರೇಟ್ ಸೇದಲ್ಲ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಧೂಮಪಾನದ ಹಂಬಲವನ್ನು ಎದುರಿಸಲು, ರಿಲ್ಯಾಕ್ಸೇಶನ್ ಟೆಕ್ನಿಕ್ಸ್ ಫಾಲೋ ಮಾಡಿ. ಆಳವಾದ ಉಸಿರಾಟದ ವ್ಯಾಯಾಮ, ಯೋಗ, ಸಂಗೀತ ಕೇಳುವುದು ಅಥವಾ ನಿಮಗೆ ಇಷ್ಟವಾದ ಯಾವುದೇ ಚಟುವಟಿಕೆ ಮಾಡಿ. ಪ್ರತಿವರ್ಷ ಮೇ 31ರಂದು ಧೂಮಪಾನ ವಿರೋಧಿ ದಿನ ಎಂದು ಆಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಹೃದಯ ಸಮಸ್ಯೆಯವರು ಈ ಆಹಾರ ತಿಂದ್ರೆ ಅಪಾಯ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?