ಶೇವಿಂಗ್ ಮಾಡಲೇ ಬೇಕಾದ ಒಂದು ಕೆಲಸ ಎಂದುಕೊಂಡು, ಬೇಗ ಬೇಗ ಮಾಡಿ ಮುಗಿಸುವ ಅವಸರದಲ್ಲಿ ಪುರುಷರು ಲುಕ್ ಹಾಳು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಏನವು?
ಮುಖ ನಮ್ಮ ಪರ್ಸನಾಲಿಟಿಗೆ ಹಿಡಿದ ಕನ್ನಡಿ. ಮೀಟಿಂಗ್ ಅಥವಾ ಡೇಟಿಂಗ್ ಎಲ್ಲದಕ್ಕೂ ಮುಖ್ಯವಾಗಿ ಮುಖದ ಹಾವ ಭಾವ ಅಗತ್ಯ. ಆದುದರಿಂದ ಮುಖದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು.
ಮಹಿಳೆಯರಿಗೆ ಹೋಲಿಸಿದರೆ ಪುರುಷರ ಸ್ಕಿನ್ ರಫ್. ಅದಕ್ಕಾಗಿ ಮುಖ್ಯವಾಗಿ ನೀವು ಶೇವಿಂಗ್ ಕಡೆ ಗಮನ ಹರಿಸಬೇಕು. ಇಲ್ಲವಾದರೆ ಇದರ ಪರಿಣಾಮ ಲುಕ್ ಮೇಲೆ ಬೀಳುತ್ತದೆ. ಹಾಗಿದ್ದರೆ ಏನು ಮಾಡಬೇಕು, ಮಾಡಬಾರದು ನೋಡೋಣಾ...
undefined
ಉಲ್ಟಾ ಶೇವಿಂಗ್ ಮಾಡಬೇಡಿ: ಪುರುಷರು ಶೇವಿಂಗ್ ಮಾಡುವ ಅವಸರದಲ್ಲಿ ಕೂದಲು ಬೆಳೆಯುವ ವಿರುದ್ಧ ದಿಕ್ಕಿಗೆ ಶೇವ್ ಮಾಡಬೇಡಿ. ಇದರಿಂದ ಶೇವ್ ಬೇಗ ಆಗುತ್ತದೆ. ಆದರೆ ಫಾಲಿಕಲ್ಸ್ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಸ್ಕಿನ್ ಹಾರ್ಡ್ ಆಗುತ್ತದೆ. ಕೂದಲೂ ವಿರುದ್ಧ ದಿಕ್ಕಿಗೆ ಬೆಳೆಯುತ್ತದೆ.
ಶೇವಿಂಗ್‌ಗೆ ಮುನ್ನ ಮುಖ ತೊಳೆಯಿರಿ: ಶೇವಿಂಗ್ ಮಾಡೋ ಮುನ್ನ ಕೆನ್ನೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಕೆನ್ನೆ ಮೇಲೆ ನೀರಿರುವಂತೆ ನೋಡಿಕೊಳ್ಳಿ. ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ. ಸ್ಕಿನ್ ಡ್ರೈ ಪಿಂಪಲ್ ಸಮಸ್ಯೆ ಕಾಡಬಹುದು.
ಶೇವ್ ಜೆಲ್: ಸ್ಕಿನ್ ಸಾಫ್ಟ್ ಮಾಡಲು ಮೈಲ್ಡ್ ಶೇವಿಂಗ್ ಜೆಲ್ ಬಳಸಿ. ಶೇವಿಂಗ್ ಕ್ರೀಮ್ ಹಾಕಿದ ಮೇಲೆ ಐದು ನಿಮಿಷದ ನಂತರ ಶೇವ್ ಮಾಡಿ.
ರೇಜರ್ : ಸ್ಕಿನ್‌ಗೆ ಅನುಸಾರವಾಗಿ ರೇಸರ್ ಬಳಸಬೇಕು. ಹೀಗೆ ಮಾಡಿದರೆ ಯಾವುದೇ ಇನ್ಫೆಕ್ಷನ್ ಉಂಟಾಗುವುದಿಲ್ಲ. ಸೆನ್ಸಿಟಿವ್ ಸ್ಕಿನ್, ಪಿಂಪಲ್ ಸ್ಕಿನ್ ಮತ್ತು ಹಾರ್ಡ್ ಸ್ಕಿನ್ ಗೆ ಬೇರೆ ಬೇರೆಯಾಗಿ ಮಾರ್ಕೆಟ್‌ನಲ್ಲಿ ರೇಜರ್ ಸಿಗುತ್ತದೆ. ಅದನ್ನು ಸರಿಯಾಗಿ ಆಯ್ಕೆ ಮಾಡಿ.
ಆಫ್ಟರ್ ಶೇವ್ ಬೇಡ : ಶೇವಿಂಗ್ ಮಾಡಿದ ನಂತರ ಉಪಯೋಗಿಸುವ ಆಫ್ಟರ್ ಶೇವಿನಿಂದ ಸ್ಕಿನ್ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಕೆಮಿಕಲ್ಸ್. ಇದರಿಂದ ಇನ್ಫೆಕ್ಷನ್ ಉಂಟಾಗಿ ತುರಿಕೆ, ಉರಿ ಕಾಣಿಸುತ್ತದೆ. ಇದರ ಬದಲಾಗಿ ಮಾಯಿಶ್ಚರೈಸರ್ ಕ್ರೀಮ್ ಬಳಸಿ.