ಇಡ್ಲಿ, ದೋಸೆಗೆ ಬಳಸೋ ಉದ್ದೂ ತ್ವಚೆ ಸೌಂದರ್ಯ ಹೆಚ್ಚಿಸುತ್ತದೆ. ಹೊರಗಿನಿಂದ ಬಳಸಿದರೂ ಉದ್ದಿನಲ್ಲಿರುವ ಕೆಲವು ಗುಣಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಗ್ಯಾರಂಟಿ.
ಪ್ರತಿಯೊಬ್ಬರೂ ತಮ್ಮ ತ್ವಚೆ ಹೊಳೆಯುವಂತಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ತ್ವಚೆಯ ಕಾಳಜಿ ವಹಿಸುವುದು ಮುಖ್ಯ. ತ್ವಚೆ ಚೆನ್ನಾಗಿರಲು ಮನೆಯಲ್ಲಿರುವ ಉದ್ದಿನ ಬೇಳೆಯನ್ನೇ ಬಳಸಬಹುದು.
ಧೂಳು ನಿವಾರಣೆಗೆ: ಉದ್ದಿನ ಬೇಳೆಯನ್ನು ನೀರಿನಲ್ಲಿ ರಾತ್ರಿ ನೆನೆಸಿ ಬೆಳಗ್ಗೆ ಅದರಿಂದ ಪೇಸ್ಟ್ ತಯಾರಿಸಿ. ಅದಕ್ಕೆ ಎರಡು ಚಮಚ ಹಾಲು, ತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ತ್ವಚೆಯ ರಂಧ್ರಗಳಲ್ಲಿ ಧೂಳು ಉಳಿಯದಂತೆ ನೋಡಿಕೊಳ್ಳುತ್ತದೆ. ಹತ್ತು ನಿಮಿಷದ ನಂತರ ತಣ್ಣನೆ ನೀರಲ್ಲಿ ತೊಳೆಯಿರಿ.
ಪಿಂಪಲ್ ನಿವಾರಣೆ: ಉದ್ದಿನ ಬೇಳೆಯಲ್ಲಿ ಆ್ಯಂಟಿಸೆಪ್ಟಿಕ್ ಇದೆ. ಇದು ಪಿಂಪಲ್ ನಿವಾರಿಸುತ್ತದೆ. ಅದಕ್ಕಾಗಿ ಉದ್ದಿನ ಬೇಳೆ ನೆನೆಸಿ ಬೆಳಗ್ಗೆ ಪೇಸ್ಟ್ ಮಾಡಿ. ಅದಕ್ಕೆ ರೋಸ್ ವಾಟರ್ ಅತ್ತು ಗ್ಲಿಸರಿನ್ ಮಿಕ್ಸ್ ಮಾಡಿ ಪಿಂಪಲ್ ಮೇಲೆ ಹಚ್ಚಿ. ನಂತರ 15 ನಿಮಿಷದ ನಂತರ ತಂಪಾದ ನೀರಿನಲ್ಲಿ ಮುಖ ತೊಳೆಯಿರಿ.
ವೈನ್ ಫೇಷಿಯಲ್, ಹೆಚ್ಚಿಸುತ್ತೆ ಮುಖದ ಹೊಳಪು...
ಮುಖ ಹೊಳೆಯಲು: ತ್ವಚೆ ಡಲ್ ಆಗಿದ್ದರೂ ಉದ್ದಿನ ಬೇಳೆ ಬೆಸ್ಟ್ ಮದ್ದು. ತ್ವಚೆಯಲ್ಲಿ ಹೊಳಪು ಬರಲು ಉದ್ದಿನ ಬೇಳೆ ಮತ್ತು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ತಂಪಾದ ನೀರಿನಲ್ಲಿ ವಾಷ್ ಮಾಡಿ.