ಕೆಲವೊಂದು ಸೈಕಾಲಜಿಕಲ್ ಹ್ಯಾಕ್ಸ್ ಅರಿತುಕೊಂಡರೆ ಸಂಬಂಧಗಳನ್ನು, ಅಹಿತಕರ ಸನ್ನಿವೇಶಗಳನ್ನು ಸುಲಭವಾಗಿ ನಿಭಾಯಿಸಬಹುದು. ಅಷ್ಟೇ ಅಲ್ಲ, ಅವು ನಿಮ್ಮನ್ನು ಜನರು ಹೆಚ್ಚಾಗಿ ಇಷ್ಟಪಡುವಂತೆ ಮಾಡುತ್ತವೆ ಕೂಡಾ.
ಜೀವನದಲ್ಲಿ ಕೆಲವೊಬ್ಬರು ಕಾರಣವಿಲ್ಲದೆಯೂ ಇಷ್ಟವಾಗುತ್ತಾರೆ. ಅವರ ಮಾತು, ನಡೆ ಎಲ್ಲವೂ ಎಲ್ಲಿ ಹೇಗಿರಬೇಕೋ ಹಾಗೇ ಇರುತ್ತದೆ. ಅವರನ್ನು ನೋಡುವಾಗ ವಶೀಕರಣ ವಿದ್ಯೆ ಕಲಿತಿದ್ದಾರೇನೋ ಎನಿಸುತ್ತದೆ. ನೀವೂ ಅವರಂಥಾಗಲು ಬ್ರಹ್ಮವಿದ್ಯೆಯೇನೂ ಬೇಕಾಗಿಲ್ಲ, ಒಂಚೂರು ಕಾಮನ್ ಸೆನ್ಸ್, ಮತ್ತೊಂದಿಷ್ಟು ಸಿಂಪಲ್ ಸೈಕಾಲಜಿಕಲ್ ಲೈಫ್ ಹ್ಯಾಕ್ಸ್ ಗೊತ್ತಿದರೆ ಸಾಕು.
- ಯಾರನ್ನಾದರೂ ಮೊದಲ ಬಾರಿ ಭೇಟಿಯಾದಾಗ ಅವರತ್ತ ನಗುಮುಖ ಇಟ್ಟುಕೊಂಡು ಕಣ್ಣಿನ ಬಣ್ಣ ಗಮನಿಸಿ. ಇದರಿಂದ ಒಂದೆರಡು ಸೆಕೆಂಡ್ ಹೆಚ್ಚಾಗಿ ಅವರನ್ನು ಗಮನವಿಟ್ಟು ನೋಡಿದಂತಾಗುತ್ತದೆ. ಈ ಟ್ರಿಕ್‌ನಿಂದಾಗಿ ಅವರು ನಿಮಗೆ ಚೆನ್ನಾಗಿ ಪ್ರತಿಕ್ರಿಯಿಸಲಾರಂಭಿಸುತ್ತಾರೆ.
ಕರಾಗ್ರೇ ವಸತೇ ಲಕ್ಷ್ಮೀ ಹೇಳೋ ಬದಲು ಹೀಂಗ್ ಮಾಡ್ತೀರಾ? ಬಿಟ್ ಬಿಡಿ ಬೇಗ..
undefined
- ಜನರ ಕಾಲಿನತ್ತ ಗಮನ ಕೊಡಿ. ಇಬ್ಬರು ನಿಂತು ಮಾತನಾಡುವಾಗ ನೀವಲ್ಲಿ ಹೋದರೆ, ಅವರು ಕೇವಲ ದೇಹವನ್ನು ನಿಮ್ಮತ್ತ ತಿರುಗಿಸಿ ಮಾತನಾಡಿ, ಕಾಲನ್ನು ಇದ್ದಂತೆಯೇ ಇಟ್ಟುಕೊಂಡಿದ್ದರೆ ಅವರಿಗೆ ನೀವು ಮಧ್ಯದಲ್ಲಿ ಮಾತನಾಡುವುದು ಇಷ್ಟವಿಲ್ಲ ಎಂದರ್ಥ. ಹಾಗೆಯೇ ನೀವು ಸಹೋದ್ಯೋಗಿಯೊಂದಿಗೆ ಮಾತನಾಡುವಾಗ ಅವರ ದೇಹ, ಮುಖ ನಿಮ್ಮತ್ತ ತಿರುಗಿ ನಿಮಗೆ ಪ್ರತಿಕ್ರಿಯಿಸುತ್ತಿದ್ದು, ಕಾಲು ಮತ್ತೊಂದು ದಿಕ್ಕಿಗೆ ತಿರುಗಿದ್ದರೆ, ಅವರು 'ಸಾಕಪ್ಪಾ ಮಾತು ನಿಲ್ಲಿಸು, ಕೊರೀಬೇಡ' ಅಂತ ಒಳಗೊಳಗೇ ಹೇಳಿಕೊಳ್ಳುತ್ತಿರುವುದನ್ನು ಸೂಚಿಸುತ್ತಿರುತ್ತದೆ.
- ನೀವು ಯಾರಿಗಾದರೂ ಕೆಲಸ ಹೇಳುವಾಗ ಸರಳವಾದುದನ್ನು ಮೊದಲು ಹೇಳಿದರೆ ಅವರು ಒಪ್ಪಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದನ್ನೇ ಫೂಟ್ ಇನ್ ದ ಡೋರ್ ಫಿನೋಮಿನಾನ್ ಎನ್ನುವುದು. ಈ ನಡೆಯು ಅವರಲ್ಲಿ, ನೀವು ಅವರನ್ನು ಇಷ್ಟ ಪಡುವ ಭಾವನೆ ತರುತ್ತದೆ.
- ಇನ್ನು ಯಾವುದಾದರೂ ಕೆಲಸ ಮತ್ತೊಬ್ಬರಿಗೆ ಹೇಳುವಾಗ, ನೀವು ಯಾವ ಕಾರಣಕ್ಕಾಗಿ ಆ ಕೆಲಸವಾಗ ಬಯಸುತ್ತೀರಿ ಎಂದು ವಿವರಿಸಿ ಹೇಳಿದರೆ, ಅವರು ಅದನ್ನು ಮಾಡಲು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚು.
- ನೀವು ಯಾರಿಗಾದರೂ ಏನಾದರೂ ಪ್ರಶ್ನೆ ಕೇಳಿದಾಗ ಅವರು ಸಣ್ಣದಾಗಿ ಉತ್ತರ ನೀಡಿ ಸುಮ್ಮನಾದರೆ, ಸ್ವಲ್ಪ ಕಾಯಿರಿ. ನೀವು ಮೌನದಿಂದಿದ್ದು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ, ಅವರು ಆ ಉತ್ತರವನ್ನು ಬೆಳೆಸಿ ಹೇಳುತ್ತಾರೆ.
- ನಾಲ್ಕು ಜನರ ಮಧ್ಯೆ ಮಾತನಾಡಬೇಕು, ಸಾಹಸವೊಂದರಲ್ಲಿ ಪಾಲ್ಗೊಳ್ಳಬೇಕು ಎಂಬ ವಿಷಯ ನಿಮ್ಮಲ್ಲಿ ಆತಂಕ ತರುತ್ತಿದ್ದರೆ, ಚ್ಯೂಯಿಂಗ್ ಗಮ್ ಬಾಯಿಗೆ ಹಾಕಿಕೊಳ್ಳಿ. ಇದರಿಂದ ನಾನು ಭಯಗೊಂಡಿದ್ದರೆ ಏನಾದರೂ ತಿನ್ನುತ್ತಿರಲಿಲ್ಲ ಎಂದು ಮೆದುಳು ಯೋಚಿಸುತ್ತದೆ. ಹಾಗಾಗಿ, ಈಗ ಭಯಗೊಳ್ಳುವ ಸನ್ನಿವೇಶವಿಲ್ಲ ಎಂಬ ಸಂದೇಶವನ್ನು ನಿಮಗೆ ರವಾನಿಸುತ್ತದೆ. ಮನಸ್ಸು ಶಾಂತವಾಗುತ್ತದೆ.
ವಿಗ್‌ನ ಕೋಮಲತೆ ಕಾಪಾಡುವುದು ಹೇಗೆ?
- ಗುಂಪಿನಲ್ಲಿ ನಡೆಯುವಾಗ ಎದುರಿಗೆ ಬರುತ್ತಿರುವವರಿಗೆ ಡಿಕ್ಕಿ ಹೊಡೆಯುವೆ ಎನಿಸಿದಾಗ ಅವರ ಭುಜವನ್ನೇ ನೋಡುತ್ತಾ ನಡೆದರೆ, ಆ ವ್ಯಕ್ತಿ, ನಿಮಗೆ ತಾಕದಂತೆ ದೇಹ ತಿರುಗಿಸಿ ಪಾಸ್ ಆಗುತ್ತಾನೆ.
- ನೀವು ಹೊಸತೇನನ್ನಾದರೂ ಕಲಿಯುವಾಗ, ಗೆಳೆಯನಿಗೆ ಅದನ್ನು ಹೇಗೆ ಮಾಡುವುದೆಂದು ವಿವರಿಸುತ್ತಾ ಹೋಗಿ. ಅವರು ಪ್ರಶ್ನಿಸಿದರೆ ಆಕ್ಷೇಪ ಬೇಡ. ನೀವು ಒಬ್ಬರಿಗೆ ಚೆನ್ನಾಗಿ ಅರ್ಥವಾಗುವಂತೆ ಹೇಳಬಲ್ಲಿರಾದರೆ, ನೀವದನ್ನು ಚೆನ್ನಾಗಿ ಕಲಿತಿದ್ದೀರೆಂದರ್ಥ.
- ಜನರು ನೀವು ಹೇಳಿದುದನ್ನು ನೆನಪಿಡುವುದಕ್ಕಿಂತ ಅವರನ್ನು ಹೇಗೆ ನಡೆಸಿಕೊಂಡಿರಿ ಎಂಬುದನ್ನು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
- ನೀವು ಯಾರನ್ನಾದರೂ ನೋಡಿದಾಗ ಫುಲ್ ಖುಷ್ ಆಗಿ, ಎಕ್ಸೈಟ್ ಆದುದನ್ನು ವ್ಯಕ್ತಪಡಿಸಿದರೆ, ಅವರೂ ನಿಮಗೆ ಹಾಗೆಯೇ ಪ್ರತಿಕ್ರಿಯಿಸುತ್ತಾರೆ. ಕನಿಷ್ಠ ಪಕ್ಷ ಮುಂದಿನ ಭೇಟಿಯಲ್ಲಾದರೂ ಅವರು ಹಾಗೆಯೇ ನಿಮ್ಮನ್ನು ನೋಡಿ ಎಕ್ಸೈಟ್ ಆಗುತ್ತಾರೆ.
- ಆತ್ಮವಿಶ್ವಾಸದ ಒಂದು ಗುಟ್ಟೆಂದರೆ, ಕೋಣೆಯಲ್ಲಿರುವ ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ನಂಬಿಕೊಳ್ಳುವುದು.
- ನಿಮ್ಮಿಂದ ಸಾಧ್ಯವಾದಷ್ಟು ಜೋರಾಗಿ ನಕ್ಕರೆ, ನೀವು ಸಂತೋಷವಾಗಿರುವ ಸಂಭವ ಹೆಚ್ಚು.
- ಮಕ್ಕಳಿಗೆ ಮಾತನಾಡಿಸುವಾಗ ಯಾವಾಗಲೂ ಎರಡು ಆಯ್ಕೆ ಕೊಡಿ. ಉದಾಹರಣೆಗೆ ನಿನಗೆ ಸ್ಟಾರ್ ವಾರ್ ಶೂಸ್ ಹಾಕಲಾ ಅಥವಾ ಮಿಕ್ಕಿ ಮೌಸ್ ಶೂಸ್ ಹಾಕಲಾ ಎಂದು ಕೇಳಿದರೆ, ನೀವು ಅವರ ಅಭಿಪ್ರಾಯವನ್ನು ಗೌರವಿಸುತ್ತೀರಿ ಎಂದೂ ಖುಷಿಯಾಗುತ್ತದೆ, ಅವರು ನಿಮ್ಮ ಕಂಟ್ರೋಲ್‌ನಲ್ಲಿ ಇದ್ದಾರೆ ಎಂಬ ಸೂಚನೆಯನ್ನೂ ನೀಡಿದಂತಾಗುತ್ತದೆ. ಜೊತೆಗೆ, ಯಾವುದೂ ಬೇಡ ಎಂದು ಹೇಳದೆ ಎರಡರಲ್ಲಿ ಒಂದನ್ನು ಹೇಳುತ್ತಾರೆ.
- ಆಗಷ್ಟೇ ಭೇಟಿಯಾದವರನ್ನು ಹೆಸರಿನಿಂದ ಕರೆದು ಮಾತನಾಡಿಸಿ. ಇದು ಅವರಲ್ಲಿ ನಂಬಿಕೆ ಹಾಗೂ ಗೆಳೆತನದ ಭಾವ ಹುಟ್ಟಿಸುತ್ತದೆ.
- ಯಾರಾದರೂ ನಿಮ್ಮ ಬಗ್ಗೆ ಸಿಟ್ಟಾದಾಗ ಅದರಿಂದ ನಿಮಗೇನೂ ನಷ್ಟವಿಲ್ಲ ಎಂಬಂತೆ ಶಾಂತವಾಗಿದ್ದರೆ, ಅವರಿಗೆ ಕೋಪ ಹೆಚ್ಚಾಗಿ ಕಡೆಗೆ ಅವರ ಬಗ್ಗೆಯೇ ನಾಚಿಕೆಯಾಗುತ್ತದೆ.