
ಬೆಳಗಾಗ್ತಿದ್ದಂತೆ ಭಾರತದ ಬಹುತೇಕರ ಮನೆಯಲ್ಲಿ ಟೀ (tea) ಪರಿಮಳ ಮೂಗಿಗೆ ಬಡಿಯುತ್ತೆ. ಬೆವರಿಳಿಸೋ ಬೇಸಿಗೆ ಇರಲಿ, ಮಳೆ ಅಥವಾ ಚಳಿಗಾಲ ಇರ್ಲಿ ಟೀ ಬೇಕೇಬೇಕು. ಮೂಡ್ ಫ್ರೆಶ್ ಗೆ, ತಲೆ ನೋವಿಗೆ, ಮೈ ಬೆಚ್ಚಗೆ ಮಾಡೋಕೆ ಅಂತ ನೆಪ ಹೇಳ್ಕೊಂಡೇ ಜನ ಟೀ ಕುಡಿತಾರೆ. ಆರೋಗ್ಯ ಹಾಳು ಮಾಡುವ ಟೀ ಬಿಟ್ಟು ಬಿಡಿ ಅಂದ್ರೆ ಅದನ್ನು ಒಪ್ಪಿಕೊಳ್ಳೋದು ಸುಲಭ ಅಲ್ಲ. ಎಷ್ಟೋ ವರ್ಷಗಳಿಂದ ಟೀ ಮಾಡ್ತಾ ಬಂದಿದ್ದೇನೆ, ನಾನು ತಯಾರಿಸೋ ಟೀಯಲ್ಲಿ ದೋಷ ಇರೋಕೆ ಸಾಧ್ಯವೇ ಇಲ್ಲ. ನಾನು ಮಾಡಿದ ಟೀ ಕುಡಿದ್ರೆ ಆರೋಗ್ಯ ಹಾಳಾಗಲ್ಲ ಅಂತ ನೀವು ವಾದ ಮಾಡ್ಬಹುದು. ಆದ್ರೆ ತಜ್ಞರ ಪ್ರಕಾರ, ಹಾಲಿನ ಟೀ ಮಾಡುವ ಶೇಕಡಾ 99 ಮಂದಿ ತಪ್ಪು ಮಾಡ್ತಾರೆ. ಅದೇನು, ಡಿಟೇಲ್ ಇಲ್ಲಿದೆ.
ಪದೇ ಪದೇ ಟೀ ಕುದಿಸಬೇಡಿ : ದಿನದಲ್ಲಿ ಮೂರ್ನಾಲ್ಕು ಬಾರಿ ಟೀ ಕುಡಿಯುವವರಿದ್ದಾರೆ. ಆಗಾಗ ಟೀ ತಯಾರಿಸೋದು ಬೋರಿಂಗ್. ಒಂದೇ ಬಾರಿ ಟೀ ತಯಾರಿಸಿ ಅದನ್ನು ಮುಚ್ಚಿಡ್ತಾರೆ. ಟೀ ಕುಡಿಯೋ ಆಸೆ ಆದಾಗೆಲ್ಲ ಅದೇ ಟೀ ಬಿಸಿ ಮಾಡಿ ಸೇವನೆ ಮಾಡ್ತಾರೆ. ಪದೇ ಪದೇ ಟೀ ಬಿಸಿ ಮಾಡೋದು ಸೂಕ್ತವಲ್ಲ. ಇದು ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿಸುತ್ತೆ. ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತೆ.
ಪ್ಲಾಸ್ಟಿಕ್ ಸ್ಟ್ರೈನರ್ ಬಳಕೆ ಬೇಡ : ಟೀ ಫಿಲ್ಟರ್ ಮಾಡಲು ಅನೇಕರು ಪ್ಲಾಸ್ಟಿಕ್ ಸ್ಟ್ರೈನರ್ ಬಳಕೆ ಮಾಡ್ತಾರೆ. ಪ್ಲಾಸ್ಟಿಕ್ ಸ್ಟ್ರೈನರ್ ನಲ್ಲಿ ನೀವು ಬಿಸಿಯಾದ ಟೀ ಫಿಲ್ಟರ್ ಮಾಡಿದಾಗ ಪ್ಲಾಸ್ಟಿಕ್ ಅಂಶ ಟೀಯನ್ನು ಸೇರುತ್ತೆ. ಇದು ಗಂಭೀರ ಕಾಯಿಲೆಗೆ ಕಾರಣವಾಗುತ್ತೆ. ನೀವು ಬಿಸಿ ಟೀ ಫಿಲ್ಟರ್ ಮಾಡಲು ಸ್ಟೀಲ್ ಸ್ಟ್ರೈನರ್ ಬಳಕೆ ಮಾಡ್ಬೇಕು.
ಟೀ ಕುಡಿಯುವುದ್ರಿಂದ ಆಗುವ ನಷ್ಟ : ದಿನದಲ್ಲಿ ಒಂದು ಬಾರಿ ಟೀ ಸೇವನೆಯಿಂದ ಯಾವುದೇ ನಷ್ಟವಿಲ್ಲ. ಆದ್ರೆ ಖಾಲಿ ಹೊಟ್ಟೆಯಲ್ಲಿ, ಪದೇ ಪದೇ ಟೀ ಸೇವನೆ ಮಾಡೋದ್ರಂದ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಉಂಟಾಗುತ್ತದೆ. ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಉಸಿರಾಟ ದುರ್ಬಲಗೊಳ್ಳುವುದಲ್ಲದೆ ಹಲ್ಲಿನ ಸಮಸ್ಯೆ ಕಾಡುತ್ತದೆ. ನಿದ್ರೆ ಮತ್ತು ಮಾನಸಿಕ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.