
ನವರಾತ್ರಿ ಅದೇ ಇಡ್ಲಿ, ದೋಸೆ ಬೇಡ ಬೇರೆ ಏನಾದರೂ ವಿಶೇಷ ತಿಂಡಿ ಮಾಡಲು ಬಯಸಿದ್ದರೆ ಸರಿಯಾದ ರೆಸಿಪಿ ಓದುತ್ತಿದ್ದೀರಿ. ಇದು ನೋಡೋಕೆ ಪುಳಿಯೊಗರೆ ರೀತಿ ಕಂಡರೂ ಪುಳಿಯೋಗರೆ ಅಲ್ಲ. ಇದರ ರುಚಿಯೇ ಬೇರೆ. ಪುಳಿಯೊಗರೆಯಂತೆ ಕಾಣುವ ಇದು ಉಳುಂಡೊಗರೆ. ಅಂದರೆ ಹುರಿದ ಉದ್ದಿನ ಬೇಳೆ ರೈಸ್. ಇದು ತುಂಬಾ ರುಚಿಕರ ಅಷ್ಟೇ ಅಲ್ಲ, ತುಂಬಾ ಪೌಷ್ಟಿಕವಾಗಿದೆ. ತೆಂಗಿನಕಾಯಿ, ಸಿಂಪಲ್ ಒಗ್ಗರಣೆ ಬಳಸಿ ಇದನ್ನು ಕೆಲವು ನಿಮಿಷಗಳಲ್ಲಿ ತಯಾರಿಸಬಹುದು.
ಈ ವಿಶೇಷ ತಿಂಡಿ ಹೇಗೆ ಮಾಡಬೇಕು ಎಂಬುದನ್ನು 'Kannada veg recipe ನಲ್ಲಿ ಲತಾ ಎಂಬುವವರು ಹಂಚಿಕೊಂಡಿದ್ದಾರೆ. ನಾವಿಲ್ಲಿ ಅವರು ಹೇಗೆ ಸಿದ್ಧಪಡಿಸುತ್ತಾರೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಉದ್ದಿನ ಬೇಳೆ ರೈಸ್ ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆಯೂ ತಯಾರಿಸಬಹುದು. ರೆಸಿಪಿಗೆ ಹೆಚ್ಚಿನ ಪದಾರ್ಥಗಳೂ ಕೂಡ ಬೇಕಿಲ್ಲ. ತಯಾರಿಸಲು ತುಂಬಾ ಸುಲಭ, ರುಚಿ ಅನುಭವಿಸಿಯೇ ಹೇಳಬೇಕು.
(ಅಳತೆ ಕಪ್ = 240 ಮಿಲಿ)
1/2 ಕಪ್ ಅಕ್ಕಿ (ನಾನು ಸೋನಾ ಮಸೂರಿ ಬೆಸ್ಟ್)
1/4 ಕಪ್ ತುರಿದ ತೆಂಗಿನಕಾಯಿ
4 ಟೀಸ್ಪೂನ್ ಉದ್ದಿನ ಬೇಳೆ
2 - 4 ಕೆಂಪು ಮೆಣಸಿನಕಾಯಿ
1/2 ಟೀಸ್ಪೂನ್ ಕರಿಮೆಣಸು
1/4 ಟೀಸ್ಪೂನ್ ತುಪ್ಪ
ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
2 ಚಮಚ ತುಪ್ಪ ಅಥವಾ ಎಣ್ಣೆ
1/2 ಟೀಸ್ಪೂನ್ ಸಾಸಿವೆ
ಸ್ವಲ್ಪ ಗೋಡಂಬಿ
4-6 ಕರಿಬೇವು ಎಲೆಗಳು
ಕುಕ್ಕರ್‌ನಲ್ಲಿ ಅಕ್ಕಿಯನ್ನು ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆಯಿರಿ.
ಚೆನ್ನಾಗಿ ಕಲಕಿದರೆ ರುಚಿರುಚಿಯಾದ ಉದ್ದಿನ ಬೇಳೆ ರೈಸ್ ರೆಡಿ.. ಬಿಸಿಯಾಗಿದ್ದಾಗಲೇ ತಿನ್ನಿ, ಮತ್ತೆ ಮತ್ತೆ ತಿನ್ನಿಬೇಕು ಅನಿಸುವಷ್ಟು ರುಚಿಯಾಗಿರುತ್ತದೆ. ಇದರ ವಿಶೇಷವೆಂದರೆ ಕೆಲವೇ ಸಮಯಗಳಲ್ಲಿ ಸಿದ್ಧಪಡಿಸಬಹುದು. ನವರಾತ್ರಿ ಹಬ್ಬದ ವೇಳೆ ಬೆಳಗಿನ ತಿಂಡಿಯಾಗಿ ಮಾಡಬಹುದು. ದಿನನಿತ್ಯದ ಅವಸರದ ವೇಳೆ ಇಡ್ಲಿ ದೋಸೆ ಬದಲು ಉದ್ದಿನ ಬೇಳೆ ರೈಸ್ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.