Paramannam: ದುರ್ಗಾದೇವಿಗೆ ಪರಮಾನ್ನಂ ನೈವೇದ್ಯ ಮಾಡಿ, ಇದೊಂದು ಪದಾರ್ಥ ಸೇರಿಸಿ, ಮನೆ ತುಂಬಾ ಪರಿಮಳ!

Published : Oct 15, 2026, 03:16 PM IST
Paramannam recipe

ಸಾರಾಂಶ

ನವರಾತ್ರಿಯಂದು ದೇವರಿಗೆ ಪ್ರಿಯವಾದ ಪರಮಾನ್ನಂ ಅಥವಾ ಪರಮಾನ್ನ ಮನೆಯಲ್ಲೇ ಮಾಡಿ. ವಿಶೇಷ ಸಿಹಿತಿಂಡಿ ಮಾಡಿದರೆ ಮನೆಯಲ್ಲೂ ಒಂದು ದೈವಿ ಶಕ್ತಿಯ ಘಮ ಇರುತ್ತದೆ. ಹೇಗೆ ತಯಾರಿಸುವುದು, ಬೇಕಾಗುವ ಪದಾರ್ಥಗಳೇನು ಇಲ್ಲಿ ವಿವರವಾಗಿ ತಿಳಿಸಲಗಿದೆ. ಕೊನೆಯಲ್ಲಿ ವಿಡಿಯೋ ಇದೆ ನೋಡಿ.

ನವರಾತ್ರಿ ಎಂದರೇನೆ ಅಲ್ಲಿ ದುರ್ಗಾ ಪೂಜೆ, ಹಬ್ಬದ ಸಂಭ್ರಮ ವಿಶೇಶ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ಇರಲೇಬೇಕು ಈ ಒಂಭತ್ತು ದಿನಗಳು ಪ್ರತಿದಿನವೂ ಅದರದ್ದೇ ವಿಶೇಷ ಮಹತ್ವದವಿದೆ. ಪ್ರತಿದಿನವೂ ದುರ್ಗಾದೇವಿಗೆ ವಿಶೇಷ ಸಿಹಿ ತಿಂಡಿ ವಿವಿಧ ರೀತಿಯ ಅಡುಗೆ ತಯಾರಿಸಲಾಗುತ್ತದೆ. ನೀವು ಈ ನವರಾತ್ರಿಗೆ ದೇವಿಗೆ ನೈವೇದ್ಯವಾಗಿ ವಿಶೇಷ ಅಡುಗೆ ತಯಾರಿಸಲು ಬಯಸಿದ್ದರೆ ತಪ್ಪದೇ ಮನೆಯಲ್ಲೇ ಮಾಡಬಹುದಾದ ಮತ್ತು ಸಾಂಪ್ರಾದಾಯಿಕ ರುಚಿಕರವಾದ ಸಿಹಿ ಪರಮಾನ್ನಂ ತಯಾರಿಸಿ.

ಪರಮಾನ್ನಂ ದೇವರಿಗೆ ಇಷ್ಟವಾದ ನೈವೇದ್ಯ

ಪರಮಾನ್ನಂ (ಅಥವಾ ಪರಮಾನ್ನ) ಎಂಬುದು ಅಕ್ಕಿ, ಹಾಲು ಮತ್ತು ಬೆಲ್ಲ ಅಥವಾ ಸಕ್ಕರೆಯನ್ನು ಬಳಸಿ ತಯಾರಿಸುವ ಒಂದು ಅತ್ಯುತ್ಕೃಷ್ಟವಾದ ಸಾಂಪ್ರದಾಯಿಕ ದಕ್ಷಿಣ ಭಾರತದ ಸಿಹಿ ಅಡುಗೆಯಾಗಿದೆ. ಸಂಸ್ಕೃತದಲ್ಲಿ ಇದರ ಅರ್ಥ 'ದೇವರಿಗೆ ಅರ್ಪಿಸುವ ಶ್ರೇಷ್ಠವಾದ ಅನ್ನ' ಇದನ್ನು ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಪೂಜೆಗಳಲ್ಲಿ ದೇವರಿಗೆ ನೈವೇದ್ಯ ಅಥವಾ ಪ್ರಸಾದವಾಗಿ ಅರ್ಪಿಸಲಾಗುತ್ತದೆ.

ಪರಮಾನ್ನಂ ತಯಾರಿಸಲು ಬೇಕಾದ ಪದಾರ್ಥಗಳು

• ಅಕ್ಕಿ: ½ ಕಪ್

• ಹಾಲು: 3 ರಿಂದ 4 ಕಪ್ (ಪೂರ್ಣ ಕೆನೆಭರಿತ ಹಾಲು ಸೂಕ್ತ)

• ಬೆಲ್ಲ (ಪುಡಿ): ¾ ಕಪ್ (ನಿಮ್ಮ ಸಿಹಿಗೆ ತಕ್ಕಂತೆ)

• ತುಪ್ಪ: 2 ರಿಂದ 3 ಟೇಬಲ್ ಚಮಚ

• ಗೋಡಂಬಿ ಮತ್ತು ಒಣದ್ರಾಕ್ಷಿ: ಅಗತ್ಯವಿರುವಷ್ಟು

• ಏಲಕ್ಕಿ ಪುಡಿ: ½ ಚಮಚ

• ನೀರು: ½ ಕಪ್ (ಬೆಲ್ಲ ಕರಗಿಸಲು)

ಪರಮಾನ್ನ ತಯಾರಿಸುವ ವಿಧಾನ:

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು 15 ನಿಮಿಷ ನೆನೆಸಿಡಿ. ನಂತರ ಒಂದು ಪಾತ್ರೆಗೆ ಹಾಲು ಹಾಕಿ ಕುದಿಯಲು ಬಿಡಿ. ಹಾಲು ಉಕ್ಕಿ ಬಂದ ನಂತರ ನೆನೆಸಿದ ಅಕ್ಕಿಯನ್ನು ಸೇರಿಸಿ, ಉರಿಯನ್ನು ಕಡಿಮೆ ಮಾಡಿ ಅಕ್ಕಿ ಸಂಪೂರ್ಣವಾಗಿ ಮೆತ್ತಗಾಗುವವರೆಗೆ (ಮೃದುವಾಗುವವರೆಗೆ) ಬೇಯಿಸಿ. (ಬೇಗ ರೆಡಿ ಮಾಡಲು ನೀವು ಕುಕ್ಕರ್‌ನಲ್ಲಿ 3-4 ವಿಸಿಲ್ ಕೂಗಿಸಿ ಅನ್ನವನ್ನು ಮೆತ್ತಗೆ ಮಾಡಿಕೊಳ್ಳಬಹುದು).

ಈಗ ಮತ್ತೊಂದು ಪಾತ್ರೆಯಲ್ಲಿ ತುರಿದ ಬೆಲ್ಲ ಮತ್ತು ½ ಕಪ್ ನೀರು ಸೇರಿಸಿ, ಬೆಲ್ಲ ಕರಗುವವರೆಗೆ ಬಿಸಿ ಮಾಡಿ ಸೋಸಿಕೊಳ್ಳಿ (ಗಟ್ಟಿ ಪಾಕದ ಅಗತ್ಯವಿಲ್ಲ, ಬೆಲ್ಲ ಕರಗಿದರೆ ಸಾಕು).

ನಂತರ ಅಕ್ಕಿ ಹಾಲಿನಲ್ಲಿ ಚೆನ್ನಾಗಿ ಬೆಂದ ನಂತರ ಒಲೆಯನ್ನು ಆಫ್ ಮಾಡಿ.

ಗಮನಿಸಿ: ಬಿಸಿಯಿರುವಾಗಲೇ ಬೆಲ್ಲದ ನೀರನ್ನು ಹಾಲಿಗೆ ಸೇರಿಸಿದರೆ ಹಾಲು ಒಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅನ್ನ ಮತ್ತು ಬೆಲ್ಲದ ನೀರು ಸ್ವಲ್ಪ ಉಗುರುಬೆಚ್ಚಗಾದ ನಂತರ ಇವೆರಡನ್ನೂ ಒಟ್ಟಿಗೆ ಸೇರಿಸಿ ಚೆನ್ನಾಗಿ ಕೈಯಾಡಿಸಿ(ಕಲಸಿ). ನಂತರ ಇದಕ್ಕೆ ಏಲಕ್ಕಿ ಪುಡಿ ಸೇರಿಸಿ.

ಒಗ್ಗರಣೆ/ಗಾರ್ನಿಶ್: ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಕರಗಿಸಿ, ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹೊಂಬಣ್ಣ ಬರುವವರೆಗೆ ಹುರಿದು, ತಯಾರಾದ ಪರಮಾನ್ನಕ್ಕೆ ಸೇರಿಸಿ ಮಿಶ್ರಣ ಮಾಡಿ.

ಪರಮಾನ್ನದ ನೈವೇದ್ಯ ಮಾಡಲು, ಹಬ್ಬದ ದಿನ ಸವಿಯಲು ಕೂಡ ತುಂಬಾ ರುಚಿಕರವಾಗಿರುತ್ತೆ. ನಿಮಗೆ ಯಾವ ರೀತಿ ಪರಮಾನ್ನ ಮಾಡಬೇಕು ಎಂಬ ಕುರಿತು ಇಲ್ಲಿ ವಿಡಿಯೋ ಲಿಂಕ್ ಕೊಡಲಾಗಿದೆ ಅದನ್ನು ಒಮ್ಮೆ ನೋಡಿದ ಬಳಿಕ ನಿಮಗೆ ರೆಸಿಪಿ ಅಥವಾ ಮಾಡುವ ವಿದಾನ ಕುರಿತು ಒಂದು ಸ್ಪಷ್ಟತೆ ಸಿಗಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆಲೂಗಡ್ಡೆ ಪದೇಪದೆ ಮೊಳಕೆ ಬರುತ್ತಿದ್ಯಾ? ಬುಟ್ಟಿಯಲ್ಲಿ ಈ ಒಂದು ವಸ್ತುವಿಡಿ ಸಾಕು.. ತಿಂಗಳಾದ್ರೂ ಹಾಳಾಗಲ್ಲ
Recipe: ಇಡ್ಲಿ ಬ್ಯಾಟರ್‌ನಿಂದ ಕ್ರಿಸ್ಪಿ & ಸ್ಪಾಂಜಿ ದೋಸೆ; ಕಾವಲಿ ಬೇಡ, ಬಾಣಲೆ ಬೇಕು