Kitchen Tricks: ನೀವು ಬಳಸುತ್ತಿರೋ ಮೆಣಸಿನ ಪುಡಿ ನಕಲಿ ಅಲ್ಲ ತಾನೇ? ಹೀಗೆ ಚೆಕ್ ಮಾಡಿ

Published : Sep 09, 2026, 04:57 PM IST
Chilli Powder

ಸಾರಾಂಶ

Kitchen Tricks: ನೀವು ಮನೆಯಲ್ಲಿ ಬಳಕೆ ಮಾಡುತ್ತಿರುವ ಕೆಂಪು ಮೆಣಸಿನ ಪುಡಿ ಅಸಲಿಯೋ ನಕಲಿಯೋ? ಯಾಕಂದ್ರೆ ಈಗಂತೂ ಎಲ್ಲಾ ಆಹಾರ ವಸ್ತುಗಳಲ್ಲಿ ನಕಲಿ ವಸ್ತುಗಳ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಮೆಣಸಿನ ಪುಡಿಯಲ್ಲೂ ಸಹ ನಕಲಿ ಇರುವ ಸಾಧ್ಯತೆ ಇದೆ. ಹಾಗಿದ್ರೆ ಅದನ್ನು ಪತ್ತೆ ಮಾಡೋದು ಹೇಗೆ ನೋಡೋಣ.

ನೀವು ಬಳಸುತ್ತಿರುವ ಮೆಣಸಿನಪುಡಿ ನಕಲಿ ಅಲ್ಲ ತಾನೆ?

ಅಡುಗೆಗೆ ಖಾರ ಮತ್ತು ರುಚಿ ಹೆಚ್ಚಿಸಲು ಕೆಂಪು ಮೆಣಸಿನ ಪುಡಿಯನ್ನು ಬಹುತೇಕ ಮನೆಗಳಲ್ಲಿ ಬಳಸಲಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಮೆಣಸಿನ ಪುಡಿ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದಷ್ಟೇ ಅಲ್ಲ, ಬಣ್ಣವೂ ಆಕರ್ಷಕವಾಗಿ ಕಾಣುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹೆಚ್ಚುತ್ತಿರುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿರುವುದರಿಂದ, ನಾವು ಪ್ರತಿದಿನ ಬಳಸುವ ಕೆಂಪು ಮೆಣಸಿನ ಪುಡಿಯ ಗುಣಮಟ್ಟದ ಬಗ್ಗೆಯೂ ಎಚ್ಚರಿಕೆ ವಹಿಸುವುದು ಅಗತ್ಯ.

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಕಲಬೆರಕೆ ಅಪಾಯ

ಹಾಲು, ಮೊಸರು, ಜೇನುತುಪ್ಪ, ಪನೀರ್ ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ಕಲಬೆರಕೆ ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಇದೇ ಕಾರಣಕ್ಕೆ ಅಡುಗೆ ಮನೆಯಲ್ಲಿ ಇರುವ ಮೆಣಸಿನ ಪುಡಿಯೂ ಶುದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಅದಕ್ಕಾಗಿ ಕೆಲವು ಸರಳ ವಿಧಾನಗಳ ಮೂಲಕ ಮನೆಯಲ್ಲಿ ಕೆಂಪು ಮೆಣಸಿನ ಪುಡಿಯ ಗುಣಮಟ್ಟವನ್ನು ಪರಿಶೀಲಿಸಬಹುದು.

ಅಸಲಿ ಕೆಂಪು ಮೆಣಸಿನ ಪುಡಿಯನ್ನು ಗುರುತಿಸುವುದು ಏಕೆ ಮುಖ್ಯ?

ಕೆಂಪು ಮೆಣಸಿನ ಪುಡಿಯಲ್ಲಿ ಕೃತಕ ಬಣ್ಣ ಅಥವಾ ಇತರ ಪದಾರ್ಥಗಳನ್ನು ಬೆರೆಸಿರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಕೆಲವೊಮ್ಮೆ ಕೆಂಪು ಮೆಣಸಿನ ಹೆಸರಿನಲ್ಲಿ ಇಟ್ಟಿಗೆಯ ಪುಡಿ, ಕೃತಕ ಬಣ್ಣ ಅಥವಾ ಇತರ ಪದಾರ್ಥಗಳನ್ನು ಬಳಸಿರುವ ಸಾಧ್ಯತೆಯೂ ಇದೆ. ಹೀಗಾಗಿ ಅಡುಗೆಗೆ ಬಳಸುವ ಮೆಣಸಿನ ಪುಡಿ ಸಾಧ್ಯವಾದಷ್ಟು ಶುದ್ಧವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

ಒಂದು ಲೋಟ ನೀರಿನಿಂದ ಪರೀಕ್ಷಿಸಿ

  • ಕೆಂಪು ಮೆಣಸಿನ ಪುಡಿ ಅಸಲಿಯೋ ಅಥವಾ ಕಲಬೆರಕೆಯೋ ಎಂಬುದನ್ನು ತಿಳಿಯಲು ಸರಳವಾಗಿ ನೀರಿನ ಪರೀಕ್ಷೆ ಮಾಡಬಹುದು. ಇದಕ್ಕಾಗಿ ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಕೆಂಪು ಮೆಣಸಿನ ಪುಡಿ ಹಾಕಿ ಗಮನಿಸಿ.
  • ಮೆಣಸಿನ ಪುಡಿ ನಿಧಾನವಾಗಿ ಮೇಲ್ಭಾಗದಲ್ಲಿ ತೇಲುತ್ತಾ, ನೀರಿನ ಬಣ್ಣವೂ ನಿಧಾನವಾಗಿ ಬದಲಾಗುತ್ತಿದ್ದರೆ ಅದು ಶುದ್ಧವಾಗಿರುವ ಸಾಧ್ಯತೆ ಇದೆ. ಆದರೆ ಪುಡಿ ತಕ್ಷಣವೇ ನೀರಿನ ತಳಭಾಗದಲ್ಲಿ ಕುಳಿತುಕೊಂಡು, ನೀರು ಬಹಳ ಬೇಗ ಗಾಢ ಕೆಂಪು ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಕೃತಕ ಬಣ್ಣ ಅಥವಾ ಇತರ ಕಲಬೆರಕೆ ಇರಬಹುದು.

ಕೈಯಲ್ಲೂ ಮಾಡಬಹುದು ಸರಳ ಪರೀಕ್ಷೆ

ಕೆಂಪು ಮೆಣಸಿನ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಅಂಗೈಗೆ ತೆಗೆದುಕೊಂಡು ನಿಧಾನವಾಗಿ ಉಜ್ಜಿ ನೋಡಬಹುದು. ಉಜ್ಜಿದ ನಂತರ ಕೈಗೆ ಅಸಹಜವಾಗಿ ಹೆಚ್ಚು ಹೊಳೆಯುವ ಕೆಂಪು ಬಣ್ಣ ಅಂಟಿಕೊಂಡರೆ ಕೃತಕ ಬಣ್ಣ ಬಳಕೆ ಮಾಡಿದ್ದಾರೆ. ಸಾಮಾನ್ಯವಾಗಿ ನೈಸರ್ಗಿಕ ಮೆಣಸಿನ ಪುಡಿಯ ಬಣ್ಣ ಅತಿಯಾಗಿ ಕೃತಕವಾಗಿ ಹೊಳೆಯುವುದಿಲ್ಲ.

ಮೆಣಸಿನ ಪುಡಿ ಖರೀದಿಸುವಾಗ ಈ ವಿಷಯ ಗಮನಿಸಿ

ಮಾರುಕಟ್ಟೆಯಿಂದ ಕೆಂಪು ಮೆಣಸಿನ ಪುಡಿ ಖರೀದಿಸುವಾಗ ಪ್ಯಾಕೆಟ್ ಮೇಲಿರುವ FSSAI ಗುರುತು, ಪ್ಯಾಕಿಂಗ್ ವಿವರಗಳು ಮತ್ತು ಅವಧಿ ಮುಗಿಯುವ ದಿನಾಂಕ (Expiry Date) ಪರಿಶೀಲಿಸುವುದು ಉತ್ತಮ. ಸಾಧ್ಯವಾದರೆ ಉತ್ತಮ ಗುಣಮಟ್ಟದ ಸಂಪೂರ್ಣ ಒಣ ಮೆಣಸಿನಕಾಯಿ ಖರೀದಿಸಿ ಮನೆಯಲ್ಲಿ ಪುಡಿ ಮಾಡಿಕೊಳ್ಳಬಹುದು. ಇದರಿಂದ ಕಲಬೆರಕೆಯ ಬಗ್ಗೆ ಇರುವ ಆತಂಕವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ, ಮೆಣಸಿನ ನೈಸರ್ಗಿಕ ರುಚಿ ಮತ್ತು ಸುವಾಸನೆಯನ್ನೂ ಪಡೆಯಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಜ್‌ ನಲ್ಲಿಟ್ರೂ ಹಾಲು ಹಾಳಾಗ್ತಿದ್ಯಾ? ಈ ತಪ್ಪು ಮಾಡ್ಬೇಡಿ
Ganesh Chauthi Special : ಅಕ್ಕಿ ಹಿಟ್ಟಿನಿಂದ ಮನೆಯಲ್ಲೇ ತಯಾರಿಸಿ ಸ್ಟೀಮ್ ಮೋದಕ