ಎಷ್ಟೇ ಕ್ಲೀನ್ ಮಾಡಿದ್ರೂ ನೀರಿನ ಬಾಟಲಿಯಿಂದ ವಾಸನೆ ಬರ್ತಿದ್ಯಾ? ಈ ಹ್ಯಾಕ್ ಟ್ರೈ ಮಾಡಿ

Published : Sep 08, 2026, 03:41 PM IST
Water bottle

ಸಾರಾಂಶ

water bottle cleaning tips : ಅನೇಕ ಬಾರಿ ನೀರಿನ ಬಾಟಲಿಯಿಂದ ವಾಸನೆ ಬರ್ತಿರುತ್ತೆ. ಎಷ್ಟೇ ಕ್ಲೀನ್ ಮಾಡಿದ್ರೂ ವಾಸನೆ ಕಡಿಮೆ ಆಗೋದಿಲ್ಲ. ಇಂಥ ಸಂದರ್ಭದಲ್ಲಿ ಬಾಟಲಿ ಬದಲಿಸುವ ಬದಲು ಸುಲಭ ಟ್ರಿಕ್ಸ್ ಫಾಲೋ ಮಾಡಿ.

ಪ್ರತಿ ದಿನ ನಾವು ನೀರಿನ ಬಾಟಲಿ ಬಳಸ್ತೇವೆ. ಆಫೀಸ್ ಇರಲಿ, ಸ್ಕೂಲ್ ಇರಲಿ ನೀರಿನ ಬಾಟಲಿ ನಮ್ಮ ಜೊತೆ ಇರುತ್ತೆ. ಉರಿ ಬೇಸಿಗೆಯಲ್ಲಿ ನೀರಿನ ಬಾಟಲಿ ಕೊಂಡೊಯ್ಯೋದು ಅನಿವಾರ್ಯ ಕೂಡ. ಈ ನೀರಿನ ಬಾಟಲಿಯನ್ನು ಎಷ್ಟೇ ಕ್ಲೀನ್ ಮಾಡಿದ್ರೂ ಕೆಲವೊಮ್ಮೆ ಕೆಟ್ಟ ವಾಸನೆ ಬರ್ತಿರುತ್ತದೆ. ಈ ವಾಸನೆ ತೆಗೆಯೋದು ಹೇಗೆ ಗೊತ್ತಾ?

ನೀರಿನ ಬಾಟಲಿಯಲ್ಲಿ ವಾಸನೆ

ನೀರಿನ ಬಾಟಲಿಯಿಂದ ವಾಸನೆ ಬರ್ತಿದ್ದರೆ ಆ ನೀರನ್ನು ಕುಡಿಯೋದು ಕಷ್ಟ. ಅನೇಕರು ಈ ವಾಸನೆ ಹೋಗ್ಲಿ ಅಂತ ಸೋಪು ಬಳಸಿ ಬಾಟಲಿ ಕ್ಲೀನ್ ಮಾಡ್ತಾರೆ. ಪದೇ ಪದೇ ಕ್ಲೀನ್ ಮಾಡಿದ್ರೂ ವಾಸನೆ ಹೋಗೋದಿಲ್ಲ. ಇಂಥ ಸಂದರ್ಭದಲ್ಲಿ ನೀವು ಸೋಪ್ ಬಳಸಿದ್ರೆ ಪ್ರಯೋಜನ ಇಲ್ಲ.

ನೀವು ನೀರಿನ ಬಾಟಲಿ ವಾಸನೆ ತೆಗೆಯಲು 1 ಟೀ ಚಮಚ ಉಪ್ಪು, 1 ಟೀ ಚಮಚ ವಿನೆಗರ್, 1 ಟೀ ಚಮಚ ಅಕ್ಕಿ ಮತ್ತು ಸ್ವಲ್ಪ ನೀರನ್ನು ಬಳಸಬೇಕು. ಮೊದಲು, ಬಾಟಲಿಯಲ್ಲಿರುವ ನೀರನ್ನು ಖಾಲಿ ಮಾಡಿ. 1 ಟೀಚಮಚ ಉಪ್ಪು, 1 ಟೀಚಮಚ ವಿನೆಗರ್ ಮತ್ತು 1 ಟೀಚಮಚ ಅಕ್ಕಿ ಸೇರಿಸಿ. ನಂತರ, ಬಾಟಲಿಗೆ ಸ್ವಲ್ಪ ನೀರು ಹಾಕಿ. ಈಗ, ಬಾಟಲಿಯ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ. ಕೆಲವು ನಿಮಿಷಗಳ ಕಾಲ ಅದನ್ನು ಬಲವಾಗಿ ಅಲ್ಲಾಡಿಸಿ. ಅಕ್ಕಿ ಬಾಟಲಿಯೊಳಗೆ ಮೃದುವಾದ ಸವೆತವನ್ನು ಉಂಟುಮಾಡಲು ಮತ್ತು ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಉಪ್ಪು ಮತ್ತು ವಿನೆಗರ್ ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಿದ ನಂತರ, ಸ್ವಲ್ಪ ಸಮಯದವರೆಗೆ ಅದನ್ನು ಹಾಗೆಯೇ ಬಿಡಿ. ನಂತರ, ಮುಚ್ಚಳವನ್ನು ತೆರೆಯಿರಿ ಮತ್ತು ಬಾಟಲಿಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಿಮ್ಮ ಬಾಟಲಿಯಿಂದ ಬರ್ತಿದ್ದ ವಾಸನೆ ಇದ್ರಿಂದ ಕಡಿಮೆ ಆಗುತ್ತದೆ.

ಇದು ನೆನಪಿರಲಿ

ನಿಮ್ಮ ಬಾಟಲಿ ವಾಸನೆ ಬರಲು ನೀವು ನೀರು ಬದಲಿಸದಿರುವುದು ಒಂದು ಕಾರಣ. ದೀರ್ಘಕಾಲದಿಂದ ಬಾಟಲಿಯಲ್ಲಿ ನೀರಿದ್ದರೆ ಬಾಟಲಿ ವಾಸನೆ ಬರುತ್ತದೆ. ನೀವು ಮನೆಗೆ ಬಂದ ತಕ್ಷಣ ಬಾಟಲಿ ಖಾಲಿ ಮಾಡಿ, ಚೆನ್ನಾಗಿ ಕ್ಲೀನ್ ಮಾಡಬೇಕು. ಬಾಟಲಿ, ಅದರ ಮುಚ್ಚಳ, ರಬ್ಬರ್ ಸೀಲ್ ಮತ್ತು ಮೂಲೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ಪ್ರದೇಶಗಳಲ್ಲಿ ಕೊಳಕು ಹೆಚ್ಚಾಗಿ ಸಂಗ್ರಹವಾಗುತ್ತದೆ, ಇದು ಬಾಟಲಿಯು ಕೆಟ್ಟ ವಾಸನೆಯನ್ನು ಉಂಟುಮಾಡಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಾಗ ಖಾಲಿ ಇದೆ ಎಂದು ಫ್ರಿಜ್ ಡೋರಲ್ಲಿ ಈ ವಸ್ತುಗಳನ್ನ ಇಡ್ತೀರಾ? ಇನ್ಮುಂದೆ ಈ ತಪ್ಪು ಮಾಡಲೇಬೇಡಿ!
ಟಾಯ್ಲೆಟ್‌ ಸೀಟ್‌ಗಿಂತಲೂ ಕೊಳಕು! ನಿಮ್ಮ ಕಿಚನ್‌ನ ಈ 5 ವಸ್ತುಗಳಲ್ಲಿ ಅಡಗಿವೆ ಅಪಾಯಕಾರಿ ಕ್ರಿಮಿಗಳು