ಮನೆಯಲ್ಲಿ ಮಾಡೋ ಕೊಬ್ಬರಿ ಚಟ್ನಿಗೂ ಹೋಟೆಲ್ ಟೇಸ್ಟ್​ ಬರಬೇಕಾ? ಈ 5 ಟ್ರಿಕ್ಸ್​ ಹೇಳಿಕೊಟ್ಟ ಮಾಸ್ಟರ್​ಷೆಫ್​

Published : Sep 08, 2026, 07:16 PM IST
Coconut Chutney

ಸಾರಾಂಶ

ಹೋಟೆಲ್​ಗಳಲ್ಲಿ ಸಿಗುವಂತಹ ರುಚಿಕರವಾದ ಕೊಬ್ಬರಿ ಚಟ್ನಿಯನ್ನು ಮನೆಯಲ್ಲಿಯೇ ತಯಾರಿಸಲು ಹಲವರು ಬಯಸುತ್ತಾರೆ, ಆದರೆ ಆ ರುಚಿ ಬರುವುದಿಲ್ಲ. ಈ ಲೇಖನದಲ್ಲಿ, ಹೋಟೆಲ್ ಶೈಲಿಯ ಹಸಿಮೆಣಸಿನಕಾಯಿ ಚಟ್ನಿ ಮಾಡಲು ಐದು ಸರಳ ಮತ್ತು ರಹಸ್ಯ ಟಿಪ್ಸ್‌ಗಳನ್ನು ನೀಡಲಾಗಿದೆ. ಕೊಬ್ಬರಿ, ಮೆಣಸು, ಮತ್ತು ರುಬ್ಬುವ ವಿಧಾನದಲ್ಲಿನ ಸಣ್ಣ ಬದಲಾವಣೆಗಳು ಚಟ್ನಿಯ ರುಚಿಯನ್ನು ಹೇಗೆ ಹೆಚ್ಚಿಸುತ್ತವೆ ಎಂದು ವಿವರಿಸಲಾಗಿದೆ.

ಮನೆಯಲ್ಲಿ ಇದ್ದಾಗ ಹೋಟೆಲ್​ ಸ್ಟೈಲ್​ ಟೇಸ್ಟ್​ ಬೇಕು ಎನ್ನೋದು, ಹೋಟೆಲ್​ಗೆ ಹೋದರೆ, ನಮ್ಮಜ್ಜಿ, ನಮ್ಮಮ್ಮ ಮಾಡ್ತಿರೋ ಟೇಸ್ಟ್​ ಬೇಕು ಎನ್ನೋದು ಇವೆಲ್ಲವೂ ಇದ್ದದ್ದೇ. ಮನೆಯಲ್ಲಿ ಇರುವಾಗ ಹೋಟೆಲ್​ ತಿನಿಸು ಚೆನ್ನಾಗಿ ಇದೆ ಎನ್ನಿಸಿದರೆ, ಹೋಟೆಲ್​ನವರು ಜನರನ್ನು ಆಕರ್ಷಿಸಲು, ಅಮ್ಮನ ಕೈರುಚಿ, ಮನೆಯಡುಗೆ, ಅಜ್ಜಿಯ ಕೈರುಚಿ... ಹೀಗೆ ಹೋಟೆಲ್​, ರೆಸ್ಟೋರೆಂಟ್​ ಹೆಸರು ಇಡುತ್ತಾರೆ. ಅದೇನೇ ಇರಲಿ. ಕೆಲವೊಂದು ತಿನಿಸುಗಳು ಏನೇ ಮಾಡಿದ್ರೂ ಹೋಟೆಲ್​ ಟೇಸ್ಟ್​ ಬರೋದೇ ಇಲ್ಲ ಎನ್ನುವ ಕೊರಗು ಹಲವು ಮಹಿಳೆಯರದ್ದು ಇದ್ದೇ ಇರುತ್ತದೆ. ಅವರೇನೋ ಮಿಕ್ಸ್​ ಮಾಡ್ತಾರೆ, ಏನೋ ಕೆಮಿಕಲ್ಸ್​ ಹಾಕ್ತಾರೆ, ಏನೋ ಟೇಸ್ಟಿಂಗ್​ ಪೌಡರ್​ ಹಾಕ್ತಾರೆ... ಹೀಗೆ ಏನೇನೋ ಕಲ್ಪನೆ ಮಾಡಿಕೊಂಡು ಸಮಾಧಾನ ಪಟ್ಟುಕೊಳ್ಳುವುದೂ ಇದೆ.

ಕೊಬ್ಬರಿ ಚಟ್ನಿಯ ರುಚಿ

ಆದರೆ ಅಸಲಿಗೆ ಎಲ್ಲಾ ಸಮಯದಲ್ಲಿಯೂ ಹೀಗೆ ಆಗಿರುವುದಿಲ್ಲ. ಕೆಲವೊಮ್ಮೆ ಮಾಡುವ ಚಿಕ್ಕಪುಟ್ಟ ಚೇಂಜಸ್​ನಿಂದ ಹೋಟೆಲ್​ ಸ್ಟೈಲ್​ನಲ್ಲಿ ಮನೆಯಲ್ಲಿಯೂ ಮಾಡಿಕೊಂಡು ತಿನ್ನಬಹುದು. ಅವುಗಳಲ್ಲಿ ಒಂದು ಹಸಿಮೆಣಸಿನಕಾಯಿ ಚಟ್ನಿ. ಸಾಮಾನ್ಯವಾಗಿ ಎಲ್ಲಾ ಹೋಟೆಲ್​ಗಳಲ್ಲಿಯೂ, ಬಹುತೇಕ ತಿನಿಸುಗಳಿಗೆ ಈ ಚಟ್ನಿ ಇದ್ದೇ ಇರುತ್ತದೆ. ಆದರೆ ಕೆಲವೊಂದು ಹೋಟೆಲ್​ಗಳು ಈ ಚಟ್ನಿಗೇ ಫೇಮಸ್​ ಆಗಿದ್ದರೆ, ಅವೇ ಸಾಮಗ್ರಿ ಹಾಕಿ ಮಾಡುವ ಕೆಲವು ಕಡೆಗಳಲ್ಲಿ ಚೆನ್ನಾಗಿ ಇರುವುದೇ ಇಲ್ಲ, ಮನೆಯಲ್ಲಿಯೂ ಕೆಲವೊಮ್ಮೆ ಅದು ಟೇಸ್ಟಿ ಎನ್ನಿಸುವುದಿಲ್ಲ. ಹಾಗಿದ್ದರೆ, ಗ್ರೀನ್​ ಚಟ್ನಿಯನ್ನು ಟೇಸ್ಟಿ ಟೇಸ್ಟಿ ಮಾಡಲು ಐದು ಟಿಪ್ಸ್​ ಏನು ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.

ಐದು ಟಿಪ್ಸ್​ ಇಲ್ಲಿವೆ

1. ಮೊದಲ ಸೀಕ್ರೆಟ್,​ ಎಂದರೆ ಕೊಬ್ಬರಿಯನ್ನು ಮಿಕ್ಸಿಗೆ ಹಾಕುವಾಗ ಅದರ ಬ್ರೌನ್​ ಕಲರ್​​ ತೆಗೆಯಿರಿ. ಸಿಪ್ಪೆ ತೆಗೆದು ಕೇವಲ ಬಿಳಿಯ ಕೊಬ್ಬರಿ ಮಾತ್ರ ಹಾಕಿ.

2. ಎರಡನೆಯ ಸೀಕ್ರೆಟ್​, ಟೇಸ್ಟ್​ಗೆ ತಕ್ಕಂತೆ ಹಸಿಮೆಣಸಿನ ಕಾಯಿ ಹಾಕಿ. ಒಣ ಮೆಣಸು ಅರ್ಥಾತ್​ ಕೆಂಪು ಮೆಣಸನ್ನು ಒಗ್ಗರಣೆ ಮಾತ್ರ ಬಳಸಿ.

3. ಇದಕ್ಕೆ ಸ್ವಲ್ಪವೇ ಸ್ವಲ್ಪ ಕಡಲೆಬೇಳೆಯನ್ನು ಸೇರಿಸಿ. ಹೆಚ್ಚಾದರೆ ಟೇಸ್ಟ್​ ಹಾಳಾಗುತ್ತದೆ.

4. ಇದಕ್ಕೆ ಅರ್ಧ ನೀರು, ಅರ್ಧ ಹಾಲು ಸೇರಿಸಿ ಮಿಕ್ಸಿ ಮಾಡಿ.

5. ಮಿಕ್ಸಿಯನ್ನು ದೀರ್ಘ ಕಾಲ ಮಾಡಬೇಡಿ. ಸ್ವಿಚ್ ಆನ್​ ಮಾಡುತ್ತಲೇ ಆಫ್​ ಮಾಡಿ. ಇಲ್ಲದಿದ್ದರೆ ಜಾರ್​ ಒಳಗೆ ಹೀಟ್​ ಆಗಿ ಚಟ್ನಿಯ ಟೇಸ್ಟ್​ ಹಾಳಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗಣೇಶನಿಗೆ ಪ್ರಿಯವಾದ ಅವಲಕ್ಕಿ 'ಪಂಚಕಜ್ಜಾಯ'.. ಕೇವಲ 15 ನಿಮಿಷದಲ್ಲಿ ಮಾಡುವ ಸುಲಭ ವಿಧಾನ
ನಂಬಲಸಾಧ್ಯ ಶಕ್ತಿಯುಳ್ಳ ಬಿಳಿ ವಿನಿಗರ್! ​ ಮನೆಯ ಹೊಸ್ತಿಲಲ್ಲಿ ಸ್ಪ್ರೇ ಮಾಡಿದ್ರೆ ಏನೆಲ್ಲಾ ಆಗತ್ತೆ ಗೊತ್ತಾ