
ನೀವು ಪ್ರತಿ ಬಾರಿ ಅಡುಗೆ ಮಾಡುವಾಗ ಅದೇ ಹಳೆಯ ವಿಧಾನ ಅನುಸರಿಸುತ್ತಿದ್ದೀರಾ, ಹಾಗಿದ್ರೆ ಬಿಟ್ಟು ಬಿಡಿ. ಈಗ ಹೊಸ ಮತ್ತು ಆರೋಗ್ಯಕರವಾದದ್ದನ್ನು ಪ್ರಯತ್ನಿಸುವ ಸಮಯ. ವಿಶೇಷವಾಗಿ ಸಿಹಿತಿಂಡಿಗಳ ವಿಷಯಕ್ಕೆ ಬಂದಾಗ. ಬಹುತೇಕರು ಸ್ವೀಟ್ ಮಾಡುವಾಗ ಬಳಸುವುದು ಸಕ್ಕರೆಯನ್ನ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವುದರಿಂದ ಜನರು ಬೆಲ್ಲಕ್ಕೆ ಆದ್ಯತೆ ನೀಡುತ್ತಿದ್ದಾರೆ. ಬೆಲ್ಲ ರುಚಿಯಲ್ಲಿ ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಆದರೆ ಸಿಹಿತಿಂಡಿಗಳನ್ನು ತಯಾರಿಸುವಾಗ ಬೆಲ್ಲವನ್ನು ಸರಿಯಾದ ರೀತಿಯಲ್ಲಿ ಬಳಸುವುದು ಬಹಳ ಮುಖ್ಯ ಎಂದು ನಿಮಗೆ ತಿಳಿದಿದೆಯೇ, ಇಲ್ಲದಿದ್ದರೆ ಸಿಹಿಯ ರುಚಿ ಮತ್ತು ವಿನ್ಯಾಸ ಎರಡೂ ಹಾಳಾಗಬಹುದು.
ಸಿಹಿತಿಂಡಿಗಳನ್ನು ತಯಾರಿಸುವಾಗ ಬೆಲ್ಲ ಸರಿಯಾಗಿ ಕರಗುವುದಿಲ್ಲ, ಕೆಲವೊಮ್ಮೆ ಹಾಲು ಮೊಸರಾಗುತ್ತದೆ ಅಥವಾ ಸಿಹಿತಿಂಡಿಗಳ ಬಣ್ಣ ಮತ್ತು ರುಚಿ ವಿಚಿತ್ರವಾಗಿ ತೋರುತ್ತದೆ. ಅಂತಹ ಸಮಯದಲ್ಲಿ ಪ್ರತಿ ಬಾರಿಯೂ ಸಿಹಿತಿಂಡಿಗಳು ಪರ್‌ಫೆಕ್ಟ್ ಆಗಿ ಬರಲು ಕೆಲವು ಉಪಯುಕ್ತ ಸಲಹೆಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿಗಳಲ್ಲಿ ಅದ್ಭುತ ರುಚಿ ಮತ್ತು ವಿನ್ಯಾಸ ಬೇಕೆಂದರೆ ಒಂದಕ್ಕಿಂತ ಒಂದು ಅದ್ಭುತ ಟಿಪ್ಸ್ ಇಲ್ಲಿದೆ.
ಬೆಲ್ಲವನ್ನು ನೇರವಾಗಿ ಸೇರಿಸಬೇಡಿ, ಸಿರಪ್ ತಯಾರಿಸಿ
ಅನೇಕ ಬಾರಿ ಜನರು ಸಿಹಿತಿಂಡಿಗಳನ್ನು ತಯಾರಿಸುವಾಗ ಬೆಲ್ಲದ ತುಂಡುಗಳನ್ನು ನೇರವಾಗಿ ಬಾಣಲೆಯಲ್ಲಿ ಹಾಕುತ್ತಾರೆ. ಇದರಿಂದ ಬೆಲ್ಲ ಸರಿಯಾಗಿ ಕರಗುವುದಿಲ್ಲ ಅಥವಾ ಮೃದುವಾಗುವುದಿಲ್ಲ. ಮೊದಲು ಬೆಲ್ಲವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಕರಗಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಬಳಸುವುದು ಉತ್ತಮ ಮಾರ್ಗವಾಗಿದೆ. ಇದು ಬೆಲ್ಲದಲ್ಲಿರುವ ಮರಳು ಅಥವಾ ಮಣ್ಣಿನಂತಹ ಕಲ್ಮಶಗಳನ್ನು ತೆಗೆದುಹಾಕುತ್ತದೆ ಮತ್ತು ಸಿಹಿಯ ವಿನ್ಯಾಸವು ಅದ್ಭುತವಾಗಿ ಬರುತ್ತದೆ.
ಸರಿಯಾದ ಬೆಲ್ಲ ಆರಿಸುವುದು ಸಹ ಮುಖ್ಯ
ಬೆಲ್ಲದ ಬಣ್ಣ ಮತ್ತು ಗುಣಮಟ್ಟವು ಸಿಹಿಯ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಗಾಢ ಕಂದು ಅಥವಾ ಬಹುತೇಕ ಕಪ್ಪು ಬೆಲ್ಲವು ಹೆಚ್ಚಿನ ಪರಿಮಳವನ್ನು ನೀಡುತ್ತದೆ. ಅಂಟಿನ ಉಂಡೆ, ಗೋಧಿ ಹಲ್ವಾ ಅಥವಾ ಚಿಕ್ಕಿಯಂತಹ ತಿನಿಸನ್ನ ತಯಾರಿಸಿದಾಗ ಬಿಸಿ ಬಿಸಿ ಇದ್ದಾಗಲಂತೂ ಉತ್ತಮ ರುಚಿಯನ್ನು ಹೊಂದಿರುತ್ತದೆ. ಮತ್ತೊಂದೆಡೆ ತಿಳಿ ಹಳದಿ ಅಥವಾ ಚಿನ್ನದ ಬಣ್ಣದ ಬೆಲ್ಲವು ತೆಂಗಿನಕಾಯಿ ಲಡ್ಡು ಅಥವಾ ಪಾಯಸದಂತಹ ಸಿಂಪಲ್ ಸಿಹಿತಿಂಡಿಗಳಿಗೆ ಒಳ್ಳೆಯದು. ಏಕೆಂದರೆ ಇದು ಸೌಮ್ಯವಾದ ರುಚಿಯನ್ನು ಹೊಂದಿರುತ್ತದೆ ಮತ್ತು ಇತರ ಪದಾರ್ಥಗಳಲ್ಲಿ ಚೆನ್ನಾಗಿ ಕರಗುತ್ತದೆ.
ಬೆಲ್ಲಕ್ಕೆ ಸ್ವಲ್ಪ ತುಪ್ಪ ಬೆರೆಸಿ
ನೀವು ಬೆಲ್ಲವನ್ನು ಕರಗಿಸಿದಾಗಲೆಲ್ಲಾ ಅದಕ್ಕೆ ಸ್ವಲ್ಪ ದೇಸಿ ತುಪ್ಪ ಸೇರಿಸಿ. ವಿಶೇಷವಾಗಿ ನೀವು ಚುರ್ಮಾ ಲಡ್ಡು ಅಥವಾ ಹಿಟ್ಟಿನ ಸಿಹಿತಿಂಡಿಗಳನ್ನು ತಯಾರಿಸುವಾಗ, ಈ ಸಂಯೋಜನೆಯು ಸಿಹಿತಿಂಡಿಗೆ ಉತ್ತಮ ಪರಿಮಳವನ್ನು ನೀಡುತ್ತದೆ. ತುಪ್ಪ ಮತ್ತು ಬೆಲ್ಲ ಒಟ್ಟಿಗೆ ನೈಸರ್ಗಿಕ ಕ್ಯಾರಮೆಲೈಸ್ಡ್ ರುಚಿಯನ್ನು ಸೃಷ್ಟಿಸುತ್ತದೆ, ಇದು ಸಿಹಿಯನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ.
ಹಾಲಿಗೆ ಬೆಲ್ಲ ಸೇರಿಸುವ ಸರಿಯಾದ ವಿಧಾನ
ನೀವು ಖೀರ್, ಯಾವುದೇ ಹಾಲು ಆಧಾರಿತ ಸಿಹಿತಿಂಡಿ ಮಾಡುತ್ತಿದ್ದರೆ ಹಾಲನ್ನು ಸಂಪೂರ್ಣವಾಗಿ ಕುದಿಸಿದ ನಂತರ ಮತ್ತು ಗ್ಯಾಸ್ ಆಫ್ ಮಾಡಿದ ನಂತರ ಮಾತ್ರ ಬೆಲ್ಲವನ್ನು ಸೇರಿಸಿ ಎಂಬುದನ್ನು ನೆನಪಿನಲ್ಲಿಡಿ. ಕುದಿಯುತ್ತಿರುವ ಹಾಲಿಗೆ ಬೆಲ್ಲ ಸೇರಿಸಿದರೆ ಹಾಲು ಮೊಸರಾಗಬಹುದು. ಆದ್ದರಿಂದ, ಗ್ಯಾಸ್ ಆಫ್ ಮಾಡಿದ ನಂತರವೇ ಬೆಲ್ಲವನ್ನು ಸೇರಿಸುವುದು ಉತ್ತಮ.
ಬೆಲ್ಲ ಹೆಚ್ಚು ಬೇಯಿಸಬೇಡಿ
ಬೆಲ್ಲವನ್ನು ಹೆಚ್ಚು ಹೊತ್ತು ಬೇಯಿಸುವುದರಿಂದ ಅದರ ರುಚಿ ಕಹಿಯಾಗಬಹುದು ಮತ್ತು ಸಿಹಿತಿಂಡಿಗಳಿಗೆ ಕಹಿ ಸೇರಿಸಬಹುದು. ಆದ್ದರಿಂದ ನೀವು ಬೆಲ್ಲದ ಸಿರಪ್ ತಯಾರಿಸುವಾಗಲೆಲ್ಲಾ ಮಧ್ಯಮ ಉರಿಯಲ್ಲಿ ನಿಧಾನವಾಗಿ ಬೇಯಿಸಿ ಮತ್ತು ಅದು ಚೆನ್ನಾಗಿ ಕರಗಿದ ತಕ್ಷಣ ತಕ್ಷಣ ಉರಿಯನ್ನು ಆಫ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.