ಅಕ್ಕಿಯಲ್ಲಿ ಹುಳು, ಸುರಭಿ ಆಗೋ ಚಿಂತೆ ಬಿಟ್ಟು​ಬಿಡಿ: ಇಲ್ಲಿದೆ ಸಕತ್​ ಸಿಂಪಲ್​ ಟ್ರಿಕ್ಸ್​

Published : Jan 22, 2026, 05:05 PM IST
Rice Worm

ಸಾರಾಂಶ

ಮಳೆಗಾಲದಲ್ಲಿ ಅಥವಾ ಸ್ವಲ್ಪ ತೇವಾಂಶ ತಗುಲಿದರೂ ಅಕ್ಕಿಯಲ್ಲಿ ಹುಳುಗಳಾಗುವುದು ಸಾಮಾನ್ಯ. ಈ ಸಮಸ್ಯೆಯನ್ನು ತಡೆಯಲು ಅರಿಶಿಣ, ಸಕ್ಕರೆ, ಲವಂಗ ಮತ್ತು ಕಾಳುಮೆಣಸನ್ನು ಬಳಸಿ ಮಾಡುವ ಒಂದು ಸರಳ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.  

ಅಕ್ಕಿಯಲ್ಲಿ ಹುಳು ಆಗೋದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲಿಯೂ ಮಳೆಗಾಲದಲ್ಲಿ ಇದು ಹೆಚ್ಚು ಹೌದಾದರೂ, ಅನ್ನನೋ, ದೋಸೆಗೋ ಅಕ್ಕಿ ಹಾಕುವ ಸಂದರ್ಭದಲ್ಲಿ ಕೈಯಲ್ಲಿ ಇರುವ ಸ್ವಲ್ಪ ತೇವಾಂಶ ಅದಕ್ಕೆ ತಗುಲಿದರೂ ಬೇಗನೇ ಹುಳು ಆಗಿಬಿಡುತ್ತವೆ. ಅದರಲ್ಲಿಯೂ ಹೆಚ್ಚು ಅಕ್ಕಿ ತಂದು ಇಟ್ಟರೆ ಅದರಲ್ಲಿ ಗೊತ್ತಿಲ್ಲದಂತೆಯೇ ಸುರಭಿಯೋ ಇಲ್ಲವೇ ಹುಳುವೋ ಆಗಿಬಿಡುತ್ತವೆ. ಇದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅದರಲ್ಲಿಯೂ, ಸಾವಯವ ಅಕ್ಕಿಗಳು ರಾಸಾಯನಿಕ ಮುಕ್ತ ಆಗಿರುವ ಹಿನ್ನೆಲೆಯಲ್ಲಿ ಹುಳುಗಳ ಬಾಧೆ ಹೆಚ್ಚು. ಹಾಗಿದ್ದರೆ, ಹುಳು ಆಗದಂತೆ ಅಕ್ಕಿಯನ್ನು ಕಾಪಿಡುವುದು ಹೇಗೆ ಎನ್ನುವ ಚಿಂತೆಯಲ್ಲಿ ಇದ್ದರೆ ಇಲ್ಲೊಂದು ಸುಲಭದ ಉಪಾಯವಿದೆ.

ಅಷ್ಟಕ್ಕೂ ನಮ್ಮ ಹಿರಿಯಲು ಹಲವು ಉಪಾಯಗಳನ್ನು ಇದಾಗಲೇ ಕಂಡುಕೊಂಡಿದ್ದಾರೆ. ಆದರೆ ಅವುಗಳಿಗಿಂತಲೂ ಸುಲಭದಲ್ಲಿ, 100% ವರ್ಕ್​ ಆಗುವಂಥ ಉಪಾಯವೊಂದು ಇಲ್ಲಿದೆ ನೋಡಿ.

ಏನೇನು ಸಾಮಗ್ರಿಗಳು ಬೇಕು?

ಇದಕ್ಕೆ ಬೇಕಿರುವುದು

- ಅರಿಶಿಣದ ಪುಡಿ ಸ್ವಲ್ಪ

- ಸ್ವಲ್ಪ ಸಕ್ಕರೆ

-ನಾಲ್ಕೈದು ಲವಂಗ

-ನಾಲ್ಕೈದು ಕಾಳುಮೆಣಸು

ಇದನ್ನು ಮಾಡುವುದು ಹೇಗೆ?

ಒಂದು ಟಿಶ್ಯೂ ಪೇಪರ್​ನಲ್ಲಿ ಅರಿಶಿಣದ ಪುಡಿ, ಸಕ್ಕರೆ, ಲವಂಗ ಹಾಗೂ ನಾಲ್ಕೈದು ಕಾಳು ಮೆಣಸು ಹಾಕಿಕೊಂಡು ಅದನ್ನು ಮಡಚಿ ರಬ್ಬರ್​ ಬ್ಯಾಂಡ್​ ಕಟ್ಟಿ ಅಕ್ಕಿ ಇಟ್ಟಲ್ಲಿ ಹಾಕಿದರೆ ಸಾಕು. ಇದರಿಂದ ಹುಳುಗಳು ಆಗುವುದೇ ಇಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡುಗೆಮನೆಯಲ್ಲಿ ಮಾಡುವ ಈ ತಪ್ಪುಗಳು ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣ
ಪ್ರೆಶರ್ ಕುಕ್ಕರ್‌ ಸ್ಫೋಟಗೊಳ್ಳುವ ಮೊದಲು ಈ ಸಿಗ್ನಲ್ಸ್ ಕೊಡುತ್ತೆ!