ಮನೆ ಗೋಡೆ ಮೇಲಿರುವ ಹಲ್ಲಿ ವಿಷವಾ? ಕಚ್ಚಿದ್ರೆ ಏನಾಗುತ್ತೆ?

Published : Sep 21, 2026, 09:09 AM IST
Lizard

ಸಾರಾಂಶ

ಮನೆಯ ಗೋಡೆ ಮೇಲೆ ಹಲ್ಲಿ ಕಂಡ್ರೆ ಭಯಪಡುವವರೇ ಹೆಚ್ಚು. ಅದು ಆಹಾರದಲ್ಲಿ ಬಿದ್ರೆ ಅಥವಾ ಕಚ್ಚಿದ್ರೆ ವಿಷ ಅಂತ ಜನರು ಆತಂಕಕ್ಕೆ ಒಳಗಾಗ್ತಾರೆ. ಹಲ್ಲಿಯನ್ನು ಮನೆಯಿಂದ ಹೊರಗೆ ಹಾಕುವವರೆಗೂ ನೆಮ್ಮದಿ ಇರೋದಿಲ್ಲ. ಮನೆಯಲ್ಲಿ ಕಾಣಿಸಿಕೊಳ್ಳುವ ಈ ಹಲ್ಲಿ ವಿಷವೇ? ಅದು ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

ಮನೆಯ ಗೋಡೆ, ಸಂದಿಯಲ್ಲಿ ಆಗಾಗ ಹಲ್ಲಿಗಳು ಕಾಣಸಿಗ್ತಿರುತ್ತವೆ. ಮನೆಯಲ್ಲಿರು ಕೀಟಗಳನ್ನು ತಿನ್ನಲು ಅವು ಬರುತ್ವೆ. ಕೆಲ ಹಲ್ಲಿಗಳು ಮನೆ ಹಲ್ಲಿಗಳಾಗಿ ಅಲ್ಲೇ ವಾಸ ಶುರು ಮಾಡೋದಿದೆ. ಈ ಹಲ್ಲಿಗಳನ್ನು ಕಂಡ್ರೆ ಕೆಲವರಿಗೆ ಹೇಸಿಗೆ. ಮತ್ತೆ ಕೆಲವರಿಗೆ ಭಯ. ಈ ಹಲ್ಲಿ ಎಷ್ಟು ವಿಷಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಮನೆಯ ಹಲ್ಲಿ ವಿಷಕಾರಿಯೇ?

ಮನೆಯಲ್ಲಿ ಕಾಣಿಸಿಕೊಳ್ಳುವ ಹಲ್ಲಿಗಳು ವಿಷವಲ್ಲ. ಮನೆಯ ಹಲ್ಲಿಯ ಬಾಯಿಯಲ್ಲಿ ಮನುಷ್ಯನ ದೇಹಕ್ಕೆ ವಿಷ ಹರಿಸುವಂತಹ ವಿಷ ಇರುವುದಿಲ್ಲ. ಇವು ಸಾಮಾನ್ಯವಾಗಿ ಕೀಟಗಳನ್ನು ತಿನ್ನುತ್ತವೆ ಮತ್ತು ಮನುಷ್ಯರಿಂದ ದೂರವಿರಲು ಪ್ರಯತ್ನಿಸುತ್ತವೆ. ಹಾಗಾಗಿ ಹಲ್ಲಿ ಮನುಷ್ಯನಿಗೆ ಕಚ್ಚುವುದು ಅಪರೂಪ. ಆದರೆ ವಿಶ್ವದಲ್ಲಿ ಗಿಲಾ ಮಾನ್ಸ್ಟರ್ ಮತ್ತು ಮೆಕ್ಸಿಕನ್ ಬೀಡೆಡ್ ಲಿಜರ್ಡ್ನಂತಹ ವಿಷಕಾರಿ ಹಲ್ಲಿ ಪ್ರಭೇದಗಳೂ ಇವೆ.

ಹಲ್ಲಿ ಕಚ್ಚಿದ್ರೆ ಏನು ಮಾಡ್ಬೇಕು?

ಹಲ್ಲಿಗಳು ಮನುಷ್ಯನಿಂದ ದೂರ ಇರುತ್ವೆ. ಅವು ಕಚ್ಚೋದು ಬಹಳ ಅಪರೂಪ. ಒಂದು ವೇಳೆ ಹಲ್ಲಿ ಕಚ್ಚಿದರೆ ಮೊದಲು ಗಾಯವನ್ನು ಸ್ವಚ್ಛ ನೀರು ಮತ್ತು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ರಕ್ತ ಬರುತ್ತಿದ್ದರೆ ಸ್ವಚ್ಛ ಬಟ್ಟೆಯಿಂದ ನಿಧಾನವಾಗಿ ಒತ್ತಡ ಹಾಕಿ ರಕ್ತಸ್ರಾವ ನಿಲ್ಲಿಸಬೇಕು. ಗಾಯವನ್ನು ಸ್ವಚ್ಛವಾಗಿಟ್ಟುಕೊಂಡು ಪದೇಪದೇ ಮುಟ್ಟುವುದನ್ನು ತಪ್ಪಿಸಬೇಕು.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಗಾಯ ಆಳವಾಗಿದ್ದರೆ, ರಕ್ತಸ್ರಾವ ನಿಲ್ಲದಿದ್ದರೆ, ಊತ ಹೆಚ್ಚಾಗುತ್ತಿದ್ದರೆ ಅಥವಾ ತೀವ್ರ ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಬೇಕು. ಗಾಯದ ಸುತ್ತ ಕೆಂಪಾಗುವುದು, ಬಿಸಿಯಾಗುವುದು, ಕೀವು ಬರುವುದು, ಜ್ವರ ಅಥವಾ ಊತ ಹರಡುವುದು ಸೋಂಕಿನ ಲಕ್ಷಣಗಳಾಗಿರಬಹುದು.

ಹಲ್ಲಿಯಿಂದ ದೂರ ಇರಿ

ಸಾಮಾನ್ಯ ಮನೆಯ ಹಲ್ಲಿಯಿಂದ ರೇಬಿಸ್ ಬರುವ ಅಪಾಯವಿಲ್ಲ ಎಂದು ಪರಿಗಣಿಸಲಾಗುತ್ತದೆ. ಹಲ್ಲಿಯನ್ನು ಕೈಯಿಂದ ಹಿಡಿಯಲು ಅಥವಾ ಓಡಿಸಲು ಪ್ರಯತ್ನಿಸುವ ಬದಲು ಸುರಕ್ಷಿತವಾಗಿ ಹೊರಗೆ ಹೋಗಲು ಬಿಡುವುದು ಉತ್ತಮ. ಮನೆಯಲ್ಲಿ ಹಲ್ಲಿಗಳ ಸಂಖ್ಯೆ ಕಡಿಮೆ ಮಾಡಲು ಕೀಟಗಳನ್ನು ನಿಯಂತ್ರಿಸುವುದು, ಆಹಾರವನ್ನು ತೆರೆದಿಡದಿರುವುದು ಮತ್ತು ಸ್ವಚ್ಛತೆ ಕಾಪಾಡುವುದು ಸಹಾಯ ಮಾಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಕ್ಕಳು ಸೇರಿ ಎಲ್ಲರಿಗೂ ಇಷ್ಟವಾಗುವ ರೈನ್‌ಬೋ ಚಿತ್ರಾನ್ನ, ಟೇಸ್ಟಿ ತಿಂಡಿಯ ಸರಳ ರೆಸಿಪಿ
ಈ ಸತ್ಯ ಗೊತ್ತಿಲ್ಲ ಅಂದ್ರೆ ಲೈಫು ಕಷ್ಟನೇ.. ಕಿಡ್ನಿ ಪ್ರಾಬ್ಲಂ ಇದ್ರೆ ಈ ಹಣ್ಣುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!