ಮಕ್ಕಳು ಸೇರಿ ಎಲ್ಲರಿಗೂ ಇಷ್ಟವಾಗುವ ರೈನ್‌ಬೋ ಚಿತ್ರಾನ್ನ, ಟೇಸ್ಟಿ ತಿಂಡಿಯ ಸರಳ ರೆಸಿಪಿ

Published : Sep 20, 2026, 10:12 PM IST
Rainbow Chitranna Easy and Tasty Recipe

ಸಾರಾಂಶ

ಚಿತ್ರನ್ನ ಹಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ನೋ. ಆದರೆ ರೈನ್‌ಬೋ ಚಿತ್ರಾನ್ನ ಹಾಗಲ್ಲ. ಟೇಸ್ಟ್ ಅದ್ಬುತ, ಒಂದೇ ನೋಟದಲ್ಲಿ ಬಾಯಲ್ಲಿ ನೀರಿಸುವ ಆಕರ್ಷಣೆ ಈ ಚಿತ್ರಾನ್ನಕ್ಕಿದೆ. ಈ ರೈನ್‌ಬೋ ಚಿತ್ರನ್ನ ಮಾಡುವ ಸರಳ ಹಾಗೂ ಸುಲಭ ವಿಧಾನ ಇಲ್ಲಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ಕಡೆ ಚಿತ್ರಾನ್ನ ಸಾಮಾನ್ಯ ತಿಂಡಿ. ಅತೀ ಸುಲಭವಾಗಿ ಹಾಗೂ ಅತೀ ಸರಳವಾಗಿ ಮಾಡಬಹುದಾದ ತಿಂಡಿ ಇದು. ಚಿತ್ರಾನ್ನ ಕೆಲವರಿಗೆ ದೂರ, ಹೀಗಾಗಿ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವ ರೀತಿ ಚಿತ್ರಾನ್ನ ಮಾಡಲು ಸರಳ ಉಪಾಯವಿದೆ. ಕೇವಲ ಚಿತ್ರಾನ್ನ ಮಾಡುವ ಬದಲು ರೈನ್‌ಬೋ ಚಿತ್ರಾನ್ನ ಮಕ್ಕಳು ಸೇರಿದಂತೆ ಎಲ್ಲರಿಗೂ ಇಷ್ಟವಾಗುತ್ತದೆ. ಅದ್ಭುತ ರುಚಿ ಇರುವ ರೈನ್‌ಬೋ ಚಿತ್ರನ್ನಾ ಆಕರ್ಷಕವಾಗಿಯೂ ಕಾಣಲಿದೆ.

ರೈನ್‌ಬೋ ಚಿತ್ರಾನ್ನದ ವಿಶೇಷತೆ ಏನು?

ರೈನ್‌ಬೋ ಚಿತ್ರನ್ನಾದ ಪ್ರಮುಖ ವಸ್ತು ಬಣ್ಣಬಣ್ಣದ ತರಕಾರಿ. ಬೀನ್ಸ್, ಟೋಮ್ಯಾಟೋ, ಕ್ಯಾರೆಟ್, ಕ್ಯಾಪ್ಸಿಕಂ ಸೇರಿದಂತೆ ವಿವಿಧ ಬಣ್ಣಗಳ ತರಕಾರಿಯನ್ನು ಹೆಚ್ಚಿಕೊಂಡು ಈ ರೈನ್‌ಬೋ ಚಿತ್ರನ್ನಾ ತಯಾರಿಸಲಾಗುತ್ತದೆ. ರೈನ್‌ಬೋ ಬಣ್ಣದ ರೀತಿ ಕಾಣುವ ಈ ಚಿತ್ರಾನ್ನ ಎಲ್ಲರಿಗೂ ಇಷ್ಟವಾಗುತ್ತದೆ. ಕೆಂಪು ಬಣ್ಣಕ್ಕಾಗಿ ಟೊಮ್ಯಾಟೋ, ಹಸಿರು ಬಣ್ಣಕ್ಕಾಗಿ ಬೀನ್ಸ್, ಹಳದಿ ಬಣ್ಣಕ್ಕಾಗಿ ಹಳದಿ ಕ್ಯಾಪ್ಸಿಕಂ, ಕಿತ್ತಳೆ ಬಣ್ಣಕ್ಕಾಗಿ ಕ್ಯಾರೆಟ್, ಬಿಳಿ ಬಣ್ಣಕ್ಕಾಗಿ ಈರುಳ್ಳಿ, ಪರ್ಪಲ್ ಬಣ್ಣಕ್ಕಾಗಿ ಬೀಟ್ರೂಟ್ ಹೀಗೆ ಹಲವು ಬಣ್ಣಗಳ ತರಕಾರಿಯನ್ನು ಸಣ್ಣದಾಗಿ ಹೆಚ್ಚಿಡಬೇಕು.

ಸಾಮಾನ್ಯ ಚಿತಾನ್ನ ಮಾಡುವಂತೆ ಇಲ್ಲೂ ಕೂಡ ಅನ್ನ ರೆಡಿ ಇರಲಿ. ಇನ್ನು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸೇರಿಸಬೇಕು. ಜೀರೆಗೆ, ಕಡಲೆ, ಉದ್ದಿನ ಬೇಳೆ(ಅಗತ್ಯವಿದ್ದರೆ) ಸೇರಿಸಿ ಹುರಿಯಬೇಕು. ಒಣಮೆಣಸಿನ ಕಾಯಿ, ಕರಿಬೇವು ಸೇರಿಸಿ ಮಿಶ್ರಣ ಮಾಡಬೇಕು. ಬಳಿಕ ಅರಿಶಿನ ಪುಡಿ ಸೇರಿಸಬೇಕು. ಇಲ್ಲಿದೆ ಮೊದಲ ಹಂತ ಮುಗಿಯಲಿದೆ. ಎರಡನೇ ಹಂತದಲ್ಲಿ ನಿಮ್ಮ ಇಷ್ಟದ ಬಣ್ಣದ ತರಕಾರಿಗಳನ್ನು ಸೇರಿಸಬೇಕು. ಈ ತರಕಾರಿಗಳು ಸರಿಯಾಗಿ ಬೇಯುವವರಿಗೆ ಹುರಿಯಬೇಕು. ಬಳಿಕ ಉಪ್ಪು ಸೇರಿಸಿ ಮಿಶ್ರಣ ಮಾಡಬೇಕು. ಇನ್ನು ಹುರಿದ ತರಕಾರಿ, ಕಡಲೇ ಸೇರಿದಂತೆ ಮಿಶ್ರಣಕ್ಕೆ ರೆಡಿಯಾಗಿ ಇಟ್ಟಿರುವ ಅನ್ನವನ್ನು ಸೇರಿಸಬೇಕು. ಬಳಿಕ ನಿಂಬೆ ಹಣ್ಣಿನ ರಸ ಮಿಶ್ರಣ ಮಾಡಬೇಕು. ಕೊಬ್ಬರಿ ತುರಿ, ಕಡಲೇ ಕಾಯಿ ಪುಡಿಗಳನ್ನು ಸೇರಿಸಬಹುದು.

ಕ್ಯಾಲೋರಿ ಸೇರಿ ಉತ್ತಮ ಪೌಷ್ಠಿಕಾಂಶ

ಬಳಿಕ ಗ್ಯಾಸ್ ಆಫ್ ಮಾಡಿದರೆ ರೈನ್‌ಬೋ ಚಿತ್ರನ್ನಾ ರೆಡಿಯಾಗಲಿದೆ. ಈ ಚಿತ್ರಾನ್ನ ರೈನ್‌ಬೋ ರೀತಿ ಎಲ್ಲರನ್ನು ಆಕರ್ಷಿಸಲಿದೆ. ಜೊತೆಗೆ ಉತ್ತಮ ರುಚಿಯನ್ನು ಹೊಂದಿರುತ್ತದೆ. ಇಷ್ಟೇ ಅಲ್ಲ ಹಲವು ಬಗೆಯ ತರಕಾರಿಗಳನ್ನು ಬಳಸುವ ಕಾರಣ ಆರೋಗ್ಯಕ್ಕೂ ಉತ್ತಮವಾಗಿದೆ. ಈ ಚಿತ್ರಾನ್ನದಲ್ಲಿ 280 ರಿಂದ 320 ಕ್ಯಾಲೋರಿ, 6 ರಿಂದ 9 ಗ್ರಾಂ ಪ್ರೊಟೀನ್, 45 ರಿಂದ 50 ಗ್ರಾಂ ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಸಿ, ವಿಟಮಿನ್ ಎ, ಕಬ್ಬಿಣಾಂಶ ಸೇರಿದಂತೆ ಹಲವು ಪೌಷ್ಠಿಕಾಂಶಗಳು ದೇಹ ಸೇರಲಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸತ್ಯ ಗೊತ್ತಿಲ್ಲ ಅಂದ್ರೆ ಲೈಫು ಕಷ್ಟನೇ.. ಕಿಡ್ನಿ ಪ್ರಾಬ್ಲಂ ಇದ್ರೆ ಈ ಹಣ್ಣುಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ!
ನಿಮ್ಮ ಅಡುಗೆಮನೆಯ ಮಸಾಲೆ ಪದಾರ್ಥಗಳಿಂದಲೇ ನಿಮ್ಮ ಲಿವರ್ ಕೊಬ್ಬು ಕರಗಿಸಬಹುದು!