Google Employees: ವಾರ್ಷಿಕ 8 ಕೋಟಿ ಸಂಬಳ ಇದ್ರೂ ಗೂಗಲ್ ಕೆಲ್ಸ ಬಿಡ್ತಿದ್ದಾರೆ ಉದ್ಯೋಗಿಗಳು, ಇಂಟರೆಸ್ಟಿಂಗ್ ಆಗಿದೆ ಕಾರಣ

Published : Jul 07, 2026, 11:16 AM IST
Google

ಸಾರಾಂಶ

ಗೂಗಲ್ ಐಷಾರಾಮಿ ಕಚೇರಿ, ಸಂಬಳದಿಂದಲೇ ಖ್ಯಾತಿ ಪಡೆದಿದೆ. ಆದ್ರೆ ಟೆಕ್ಕಿಗಳ ಆಲೋಚನೆ ಈಗ ಸಂಪೂರ್ಣ ಬದಲಾಗಿದೆ. ತಿಂಗಳು ಲಕ್ಷ ಲಕ್ಷ ಸಂಭಾವನೆ ಬಂದ್ರೂ ಕೆಲ್ಸ ಬಿಡ್ತಿರೋದು ಏಕೆ ಗೊತ್ತಾ?

ಗೂಗಲ್ ಜಾಬ್ ಒಂದ್ಕಾಲದಲ್ಲಿ ಎಂಜಿನಿಯರಿಂಗ್ ಹಾಗೂ ಟೆಕ್ ವಿದ್ಯಾರ್ಥಿಗಳ ಡ್ರೀಮ್ ಜಾಬ್ ಆಗಿತ್ತು. ಗೂಗಲ್ ನಲ್ಲಿ ಕೆಲ್ಸ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಿದ್ರು. ಐಷಾರಾಮಿ ಆಫೀಸ್, ಫ್ರೀ ಆಹಾರ, ಐಷಾರಾಮಿ ಸೌಲಭ್ಯಗಳು ಮತ್ತು ಕೋಟಿಗಟ್ಟಲೆ ಮೌಲ್ಯದ ಪ್ಯಾಕೇಜ್ ಉದ್ಯೋಗಿಗಳನ್ನು ಆಕರ್ಷಿಸುತ್ತಿತ್ತು. ಆದ್ರೆ ಈಗ ಎಐ ಹವಾ ಶುರುವಾಗಿದೆ. ಕೃತಕ ಬುದ್ಧಿಮತ್ತೆ (AI) ಜಾಗತಿಕ ಉದ್ಯೋಗ ಮಾರುಕಟ್ಟೆಯನ್ನು ಸಂಪೂರ್ಣ ಬದಲಿಸಿದೆ. ಉದ್ಯೋಗಿಗಳು ವಾರ್ಷಿಕವಾಗಿ ಸುಮಾರು 8 ಕೋಟಿ ಸಂಬಳ ಸಿಗ್ತಿದ್ದ ಕೆಲ್ಸ ಬಿಡ್ತಿದ್ದಾರೆ. ಗೂಗಲ್ ಉದ್ಯೋಗಕ್ಕೆ ಗುಡ್ ಬೈ ಹೇಳ್ತಿದ್ದಾರೆ.

ಗೂಗಲ್ ಕಂಪನಿ ಬಿಡ್ತಿರೋ ಉದ್ಯೋಗಿಗಳು !

ಅಮೇರಿಕನ್ ವ್ಯಾಪಾರ ವೆಬ್ಸೈಟ್ ಬಿಸಿನೆಸ್ ಇನ್ಸೈಡರ್ನ ಇತ್ತೀಚಿನ ವರದಿ ಗೂಗಲ್ನಲ್ಲಿನ ಆಗ್ತಿರುವ ಆಂತರಿಕ ಬದಲಾವಣೆ ಮತ್ತು ಉದ್ಯೋಗಿಗಳ ಬದಲಾಗುತ್ತಿರುವ ಮನಸ್ಥಿತಿಯ ಬಗ್ಗೆ ಹಲವಾರು ಆಘಾತಕಾರಿ ವಿಷ್ಯಗಳನ್ನು ಬಹಿರಂಗಪಡಿಸಿದೆ.

ಕೋರ್ಟ್ ಮೆಟ್ಟಿಲೇರಿದ್ದ 341 OBC ಶಿಕ್ಷಕಿಯರಿಗೆ ಕೊನೆಗೂ ಸಿಕ್ತು ಮುಕ್ತಿ!; ಷರತ್ತುಬದ್ಧ ಸೇರ್ಪಡೆಗೆ ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್!

ಈ ವರದಿಯ ಪ್ರಕಾರ, ಗೂಗಲ್ನಲ್ಲಿ ಖಾತೆ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಯೂಸುಫ್ ಇಮ್ರಾನ್ (41) ಇತ್ತೀಚೆಗೆ ಕಂಪನಿ ತೊರೆದಿದ್ದಾರೆ. 2026 ರಲ್ಲಿ ಅವರ ವಾರ್ಷಿಕ ಪ್ಯಾಕೇಜ್ 8 ಕೋಟಿಗಿಂತ ಹೆಚ್ಚಿತ್ತು. ಸಂದರ್ಶನದಲ್ಲಿ ಯೂಸುಫ್, ಗೂಗಲ್ ಸಂಬಳ ಉತ್ತಮವಾಗಿದೆ. ಆದ್ರೆ ಓಪನ್ಎಐ (ಚಾಟ್ಜಿಪಿಟಿ ತಯಾರಕ) ಮತ್ತು ಆಂಥ್ರೊಪಿಕ್ನಂತಹ ಹೊಸ ಎಐ ಕಂಪನಿಗಳಲ್ಲಿ ನೀಡಲಾಗುವ ಇಕ್ವಿಟಿ ಪ್ಯಾಕೇಜ್ (ಷೇರುಗಳು) ಪ್ರಸ್ತುತ ವಿಭಿನ್ನ ಮಟ್ಟದಲ್ಲಿವೆ. ಹೊಸ ಎಐ ಕಂಪನಿಗಳನ್ನು ಮೊದಲೇ ಸೇರುವುದರಿಂದ ಸಾಕಷ್ಟು ಲಾಭವಿದೆ ಎಂದಿದ್ದಾರೆ. ಎಐ ಕಂಪನಿ ನೀಡ್ತಿರುವ ಇಕ್ವಿಟಿ ಪ್ಯಾಕೇಜ್ ಗೂಗಲ್ನ ಸ್ಥಿರ ಸಂಬಳಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ.

ಉದ್ಯೋಗಿಗಳ ವಿಶ್ವಾಸ ಕಳೆದುಕೊಂಡ ಕಂಪನಿ ಗೂಗಲ್ (Google)ನಲ್ಲಿ ಉದ್ಯೋಗ ಭದ್ರತೆ ಇದೆ ಅಂತ ಜನರು ನಂಬಿದ್ರು. ಆದ್ರೆ ವರದಿ ಪ್ರಕಾರ 2023 ರ ವೇಳೆಗೆ 12,000 ಉದ್ಯೋಗಿಗಳನ್ನು ವಜಾಗೊಳಿಸುವ ಕಂಪನಿಯ ಯೋಜನೆ ಮತ್ತು ನಂತರದ ಸಣ್ಣ ವಜಾಗಳು ಉದ್ಯೋಗಿಗಳ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಗೂಗಲ್ನಂತಹ ದೊಡ್ಡ ಕಂಪನಿಯಲ್ಲಿ ಉಳಿಯುವುದು ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂದು ಟೆಕ್ಕಿಗಳು ಭಾವಿಸಿದ್ದಾರೆ. ವರದಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ, ಗೂಗಲ್ ತನ್ನ ಕಚೇರಿ ಕೆಫೆಯಲ್ಲಿ ಕೆಲಸದ ಸಮಯವನ್ನು ಕಡಿಮೆ ಮಾಡಿದೆ. ಟೂರ್ ಬಜೆಟ್ಗಳನ್ನು ಕಡಿಮೆ ಮಾಡಿದೆ ಮತ್ತು ತಂಡದ ಕಾರ್ಯಕ್ರಮಗಳು ಮತ್ತು ಹಬ್ಬದ ಆಚರಣೆಗಳ ವೆಚ್ಚವನ್ನು ಕಡಿತಗೊಳಿಸಿದೆ. ವರ್ಕ್ ಫ್ರಮ್ ಹೋಮ್ ರೂಲ್ಸ್ ಬದಲಾಗಿದೆ.

ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ

ಇಷ್ಟೇ ಅಲ್ಲ ಗೂಗಲ್ ನಂತ ದೊಡ್ಡ ಕಂಪನಿಗಳಲ್ಲಿ ಎಷ್ಟೇ ಕೆಲ್ಸ ಮಾಡಿದ್ರೂ ಅದೊಂದು ಸಣ್ಣ ಭಾಗವಾಗಿ ಕಾಣುತ್ತದೆ. ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಕೆಲಸದ ನೇರ ಪರಿಣಾಮವನ್ನು ನೋಡುವ ಅವಕಾಶ ಅಲ್ಲಿ ಸಿಗೋದಿಲ್ಲ. ಹಾಗಾಗಿಯೇ ಅನೇಕರು ಗೂಗಲ್ ತೊರೆದು ಸ್ವಂತ AI ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸಲು ಮುಂದಾಗ್ತಿದ್ದಾರೆ. ಈ ಜಾಗತಿಕ ಮಾರುಕಟ್ಟೆ ಪ್ರವೃತ್ತಿ ಭಾರತೀಯ ಐಟಿ ವೃತ್ತಿಪರರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಹತ್ವದ ಪಾಠವಾಗಿದೆ. ಎಐ ಯುಗದಲ್ಲಿ ದೊಡ್ಡ ಕಂಪನಿಯಲ್ಲಿ ಒಬ್ಬರಾಗುವ ಬದಲು ಇಂದಿನ ಯುವಕರು ಅಪಾಯಗಳನ್ನು ತೆಗೆದುಕೊಳ್ಳಲು, ತಮ್ಮದೇ ಆದ ಸ್ಟಾರ್ಟ್ಅಪ್ಗಳನ್ನು ನಿರ್ಮಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುವ ಮೂಲಕ ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ.

PREV
Read more Articles on
click me!

Recommended Stories

ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು ಟೆಕ್ಕಿಯ ವೈರಲ್ ಸ್ಟೋರಿ! ಜೀವನ ವೆಚ್ಚವೋ? ಹಣ ನಿರ್ವಹಣೆ ಲೋಪವೋ?
21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್​! ಬೆಂಗಳೂರು, ಹೈದರಾಬಾದ್​ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ