
ಈಗಿನ ದುಬಾರಿ ಲೈಫ್ ಸ್ಟೈಲ್ ನಲ್ಲಿ ಸ್ಯಾಲರಿ ಬಹಳ ಮುಖ್ಯ. ಎಷ್ಟೇ ಸಂಬಳ ಬಂದ್ರೂ ನಿತ್ಯದ ಖರ್ಚಿಗೆ ಸಾಲೋದಿಲ್ಲ. ಹೆಚ್ಚು ಸಂಬಳ ಸಿಗ್ತಿದ್ದಂತೆ ಜನರು ಕಂಪನಿ ಬದಲಿಸ್ತಾರೆ. ಆದ್ರೆ ಇಲ್ಲೊಬ್ಬ ಸಾಫ್ಟವೇರ್ ಉದ್ಯೋಗಿ ವಾರ್ಷಿಕ 72 ಲಕ್ಷದ ಪ್ಯಾಕೇಜ್ ನಿರಾಕರಿಸಿದ್ದಾರೆ. ಇಲ್ಲಿ ಅವರು ಸಂಬಳಕ್ಕಿಂತ ಕೆಲ್ಸದ ಹೊರೆ, ಶಾಂತಿ, ಲೈಫ್ ಬ್ಯಾಲೆನ್ಸ್ಗೆ ಹೆಚ್ಚು ಆಧ್ಯತೆ ನೀಡಿದ್ದಾರೆ.
ಫುಲ್-ಸ್ಟ್ಯಾಕ್ ಡೆವಲಪರ್ ರಾಗಿಣಿ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಷ್ಯವನ್ನು ಹಂಚಿಕೊಂಡಿದ್ದಾರೆ. ಅವರ ಸ್ನೇಹಿತ ಮತ್ತು ಕಂಪನಿ ಮಧ್ಯೆ ನಡೆದ ಸಂಭಾಷಣೆ ಸ್ಕ್ರೀನ್ ಶಾಟ್ ಅವರು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್ ಜೊತೆಗೆ ನನ್ನ ಸ್ನೇಹಿತ 72 LPA ಆಫರ್ ತಿರಸ್ಕರಿಸಿದ್ದಾಳೆ ಅಂತ ಶೀರ್ಷಿಕೆ ಹಾಕಿದ್ದಾರೆ.
ಕಾರ್ಪೊರೇಟ್ ಲೋಕಕ್ಕೆ 'ಗುಡ್‌ಬೈ': 11 ವರ್ಷಗಳ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ 35 ವರ್ಷದ ಯುವಕ!
ಮನೀಷ್ ಎಂಬುವವರು ಮುಂದಿನ ಔಪಚಾರಿಕತೆ ಪೂರ್ಣಗೊಳಿಸಲು ಕೆಲ್ಸವನ್ನು ಒಪ್ಪಿಕೊಳ್ಳುವಂತೆ ಅಭ್ಯರ್ಥಿಗೆ ಒತ್ತಾಯಿಸ್ತಿದ್ದಾರೆ. ಆದ್ರೆ ಅವರು ಕೆಲ್ಸ ತಿರಸ್ಕರಿಸಿದ್ದಾರೆ. ಕಂಪನಿಯ ನಿಯಮಗಳು ಉದ್ಯೋಗಿ ಸ್ನೇಹಿಯಾಗಿಲ್ಲ ಎಂದು ಅವರು ಬರೆದಿದ್ದಾರೆ. ಕಂಪನಿಯು ಯಾವುದೇ ರಜೆ ನೀತಿಯನ್ನು ಹೊಂದಿರಲಿಲ್ಲ, ಸ್ಥಳಾಂತರಕ್ಕೆ ಯಾವುದೇ ಹಣಕಾಸಿನ ಸಹಾಯವನ್ನು ಹೊಂದಿರಲಿಲ್ಲ ಮತ್ತು ಕೇವಲ ಶೇಕಡಾ 25 ರಷ್ಟು ಸಂಬಳ ಮಾತ್ರ ಹೆಚ್ಚಾಗುತ್ತಿತ್ತು. ಇದು ನನಗೆ ಸೂಕ್ತವಾಗಿರಲಿಲ್ಲ. ವೃತ್ತಿಯ ಆರಂಭದಲ್ಲಾಗಿದ್ರೆ ಇಂಥ ಕೆಲ್ಸವನ್ನು ಒಪ್ಪಿಕೊಳ್ಳಬಹುದಿತ್ತು. ಆದ್ರೆ ಈಗಲ್ಲ, ಒಪ್ಪಂದ ಬಹುತೇಕ ಕಂಪನಿ ಪರವಾಗಿದೆ. ಉದ್ಯೋಗಿಗಳ ಅಗತ್ಯವನ್ನು ಪರಿಗಣಿಸಲಾಗಿಲ್ಲ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.
ಇದ್ರ ಸ್ಕ್ರೀನ್ ಶಾಟ್ ಹಂಚಿಕೊಂಡ ರಾಗಿಣಿ ಪಾಂಡೆ, ಸ್ನೇಹಿತ ಕೆಲ್ಸ ನಿರಾಕರಿಸಲು ವರ್ಕ್ ಫ್ರಮ್ ಆಫೀಸ್ ಕೂಡ ಒಂದು ಕಾರಣ ಎಂದಿದ್ದಾರೆ. ಕಂಪನಿ ವಾರದಲ್ಲಿ ಐದೂ ದಿನ ಆಫೀಸ್ ಗೆ ಬರುವಂತೆ ಸೂಚನೆ ನೀಡಿತ್ತು. ಯಾವುದೇ ರಜೆ ಆಯ್ಕೆ ಇರಲಿಲ್ಲ. ಸ್ಥಳಾಂತರ ಮಾಡಿದ್ರೆ ಯಾವುದೇ ಆರ್ಥಿಕ ನೆರವು ನೀಡುವ ಭರವೆ ಇರಲಿಲ್ಲ. ಹಾಗಾಗಿ ಸ್ನೇಹಿತೆ ಕೆಲ್ಸ ಒಪ್ಪಲಿಲ್ಲ ಎಂದಿದ್ದಾರೆ. ರಾಗಿಣಿ ತಮ್ಮ ಪೋಸ್ಟ್ನಲ್ಲಿ ತಮ್ಮ ಸ್ನೇಹಿತೆಗೆ ಆಫರ್ ತಿರಸ್ಕರಿಸಿದ ಬಗ್ಗೆ ಯಾವುದೇ ವಿಷಾದವಿಲ್ಲ, ಇದು ನನಗೆ ಅಚ್ಚರಿಯುಂಟು ಮಾಡಿದೆ ಎಂದಿದ್ದಾರೆ. ಅನೇಕ ವೃತ್ತಿಪರರಿಗೆ, ಉತ್ತಮ ಜೀವನ ಮತ್ತು ಬ್ಯಾಲೆನ್ಸ್ ಹಣಕ್ಕಿಂತ ಮುಖ್ಯವಾಗಿದೆ ಎಂದು ಅವರು ಬರೆದಿದ್ದಾರೆ.
ಬೆಂಗಳೂರಲ್ಲಿ ಐಟಿ ಜಾಬ್ ಪಡೆಯೋದು ಸುಲಭವಲ್ಲ: 15 ದಿನಗಳಲ್ಲಿ ಡೆವೆಲಪರ್ ಹುದ್ದೆಗಳಿಗೆ 34 ಸಾವಿರಕ್ಕೂ ಹೆಚ್ಚು ಅರ್ಜಿ!
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗ್ತಿದೆ. ಈಗಿನ ದಿನಗಳಲ್ಲಿ ಸಂಬಳವೇ ಎಲ್ಲವೂ ಅಲ್ಲ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ಇಷ್ಟು ದೊಡ್ಡ ಪ್ಯಾಕೇಜ್ ಅನ್ನು ತಿರಸ್ಕರಿಸುವುದು ಸುಲಭದ ನಿರ್ಧಾರವಲ್ಲ ಅಂತ ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.