ಮಕ್ಕಳೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಆನೆಯ ನೀರಾಟ ನೋಡಿ... ವೈರಲ್ ವಿಡಿಯೋ

By Anusha KbFirst Published Dec 9, 2022, 11:28 AM IST
Highlights

ಹಿಂದೂ ತೀರ್ಥಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಆನೆಯ ನೀರಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 

ಆನೆಗಳು ಆಟವಾಡುವುದನ್ನು ಬಹಳ ಇಷ್ಟಪಡುತ್ತವೆ. ಬುದ್ಧಿವಂತ ಪ್ರಾಣಿಗಳಾದ ಆನೆಗಳು ಅದರಲ್ಲೂ ಸಾಕಾನೆಗಳು ಮನುಷ್ಯನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದು ಈ ಹಿಂದೆಯೂ ಆನೆಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ಹಿಂದೂ ತೀರ್ಥಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಆನೆಯ ನೀರಾಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ 

ಸುಬ್ರಹ್ಮಣ್ಯ ದೇಗುಲದ ಒಳಗೆ ಇರುವ ದ್ವಾದಶಿ ಮಂಟಪದ ಸಮೀಪ ವರಾಂಡದಲ್ಲಿ ನೀರನ್ನು ಬಿಡಲಾಗಿದ್ದು, ಇಲ್ಲಿ ಮಕ್ಕಳೊಂದಿಗೆ ಆನೆ ನೀರಾಟವಾಡುತ್ತಿದೆ. ಮಕ್ಕಳು ಆನೆಗೆ ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ನೀರನ್ನು ಎರಚುತ್ತಿದ್ದರೆ ಇತ್ತ ಆನೆ ತನ್ನ ಕಾಲು ಹಾಗೂ ಸೊಂಡಿಲಿನಲ್ಲಿ ನೀರನ್ನು ಎರಚಿ ಮಕ್ಕಳಿನ್ನು ಒದ್ದೆ ಮಾಡುತ್ತಿದೆ. ಆನೆ ತಮ್ಮನ್ನು ನೀರೆರಚಿ ಒದ್ದೆ ಮಾಡುತ್ತಿದ್ದಂತೆ ಮಕ್ಕಳು ಜೋರಾಗಿ ಬೊಬ್ಬೆ ಹಾಕುತ್ತಾ ಹಿಂದೆ ಸರಿಯುತ್ತಾರೆ. ವಿಡಿಯೋದಲ್ಲಿ ಸುಮಾರು ಮಕ್ಕಳ ಜೊತೆ ದೊಡ್ಡವರು ಕೂಡ ಇದ್ದು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಇದನ್ನು ನೀರುಬಂಡಿ ಉತ್ಸವ ಅಥವಾ ಆಟ ಎಂದು ಕರೆಯುತ್ತಾರೆ. ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿಯ ದಿನ ದೇವಾಲಯದ ಪ್ರಾಂಗಣದಲ್ಲಿ ಪೂರ್ತಿ ನೀರು ತುಂಬಿಸಿ ಆನೆ ಯಶಸ್ವಿಯನ್ನು ಅಲ್ಲಿಗೆ ಕರೆತರಲಾಗುತ್ತದೆ. ಅಲ್ಲಿ ಮಕ್ಕಳೊಂದಿಗೆ ಆನೆ ನೀರಲ್ಲಿ ಆಟವಾಡುತ್ತದೆ. 
 

ಆನೆಗೆ ಕಬ್ಬು ನೀಡಿ 75 ಸಾವಿರ ದಂಡ ತೆತ್ತ ಲಾರಿ ಚಾಲಕ!

ಮಾವುತ ಕೂಡ ಆನೆಯ ಜೊತೆಯಲ್ಲೇ ಇದ್ದು, ಆನೆಯ ಸುತ್ತ ನೂರಾರು ಮಕ್ಕಳು ಸೇರಿದ್ದು ಬೊಬ್ಬೆ ಹೊಡೆಯುತ್ತಾ ಖುಷಿಯಿಂದ ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ದೈತ್ಯ ಆನೆಯ ಮೇಲೆ ನೀರಾಭಿಷೇಕ ಮಾಡುತ್ತಿವೆ. ಇತ್ತ ಆನೆಯೂ ಕೂಡ ಸುಮ್ಮನಿರದೇ ತನ್ನ ಸೊಂಡಿಲೂ ಹಾಗೂ ಮುಂಭಾಗದ ಕಾಲುಗಳಿಂದ ಅಲ್ಲಿದ್ದ ಮಕ್ಕಳ ಮೇಲೆ ನೀರೆರಚುತ್ತಿದೆ. ಈ ವಿಡಿಯೋ ನೋಡಲು ತುಂಬಾ ಸೊಗಸಾಗಿದೆ. ಈ ವಿಡಿಯೋವನ್ನು world_tuluvas_network ಪೇಜ್‌ನಿಂದ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ನೀವು ಕೂಡ ಆ ಸುಂದರ ದೃಶ್ಯವನ್ನು ಒಮ್ಮೆ ವೀಕ್ಷಿಸಿ ಕಣ್ತುಂಬಿಸಿಕೊಳ್ಳಿ..

ಈ ಆನೆಗೆಷ್ಟು ಬುದ್ಧಿ ನೋಡಿ: ನಿಧಾನವಾಗಿ ವಿದ್ಯುತ್ ಬೇಲಿ ನೆಲಕ್ಕೆ ಕೆಡವಿದ ಮದಗಜ

ಸರ್ಪ ಸಂಸ್ಕಾರಕ್ಕೆ ಖ್ಯಾತಿ ಗಳಿಸಿರುವ ಕುಕ್ಕೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇದ್ದು, ಸರ್ಪ ಸಂಸ್ಕಾರದ ಕಾರಣಕ್ಕೆ ದೇಶಾದ್ಯಂತ ಪ್ರಸಿದ್ಧವಾಗಿದೆ. ಬಾಲಿವುಡ್ ಸಿನಿಮಾ ತಾರೆಯರಿಂದ ಹಿಡಿದು ಕ್ರಿಕೆಟಿಗರು ಹಾಗೂ ರಾಷ್ಟ್ರಮಟ್ಟದ ರಾಜಕಾರಣಿಗಳು ಕೂಡ ಇಲ್ಲಿಗೆ ಸರ್ಪ ಸಂಸ್ಕಾರ, ಸರ್ಪ ದೋಷ ನಿವಾರಣೆಯ ಕಾರಣಕ್ಕೆ ಆಗಮಿಸುತ್ತಾರೆ. ಅಲ್ಲದೇ ಸರ್ಪ ದೋಷದ ಕಾರಣಕ್ಕೆ ಬೇರೆ ಧರ್ಮದ ಜನರು ಕೂಡ ಇಲ್ಲಿಗೆ ಆಗಮಿಸಿ ಪ್ರಾರ್ಥನೆ ಮಾಡುತ್ತಾರೆ. 

ದೇವಸ್ಥಾನಕ್ಕೆ ಹೋಗಿ ಆನೆ ಕಾಲಡಿ ಸಿಲುಕಿದ ಭಕ್ತ... ಆತನ ಪೇಚಾಟ ನೋಡಿ

ಭೂರಿ ಭೋಜನವಿದು... ಆನೆಗೆ ಆಹಾರ ಹೇಗೆ ಸಿದ್ಧಪಡಿಸುತ್ತಾರೆ ಗೊತ್ತಾ? ವಿಡಿಯೋ 

ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ

ಸಾಮಾನ್ಯವಾಗಿ ಆನೆಮರಿಗಳು ಮಕ್ಕಳಂತೆ ಆಟವಾಡುತ್ತಾ ಮೋಜು ಮಾಡಲು ಬಯಸುತ್ತವೆ. ತನ್ನ ಆತ್ಮೀಯರ ಜೊತೆ ಮುದ್ದು ಮಾಡಿಸಿಕೊಳ್ಳಲು ಬಯಸುವ ಆನೆಮರಿಗಳು ತನ್ನ ಪ್ರೀತಿಪಾತ್ರರೊಂದಿಗೆ ಮುದ್ದಾಡುತ್ತಾ ತುಂಟಾಟವಾಡುತ್ತವೆ. ಕೆಲದಿನಗಳ ಹಿಂದೆ ಆನೆಯೊಂದು ಆಟವಾಡುತ್ತಾ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು, ನೋವಿನಿಂದ ಚೀರಿಕೊಂಡ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಈಗ ಪುಟ್ಟ ಆನೆಮರಿಯೊಂದು ಪಿಟುಸಿ ನೀಡುತ್ತಿದ್ದ ಪತ್ರಕರ್ತನಿಗೆ ಕೀಟಲೆ ಮಾಡಿ ಆತನ ಪಿಟುಸಿ ಮಾಡಲು ಬಿಡದೇ ಕ್ವಾಟ್ಲೆ ನೀಡಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ವಿಡಿಯೋವನ್ನು sheldricktrust ಎಂಬ ಇನಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಪ್ರತಿಯೊಬ್ಬರು ತಾರೆಯಾಗಲು ಬಯಸುತ್ತಾರೆ. ಆನೆಮರಿ ಕಿಂದನಿ, ಪತ್ರಕರ್ತ ಅಲ್ವಿನ್ (Alvin) ಅವರ ವರದಿಗಾರಿಕೆ ನೋಡಿ ಅವರಿಂದ ಪ್ರಭಾವಿತಗೊಂಡು ಕ್ಯಾಮರಾ ಮುಂದೆ ತನ್ನದೇ ಸ್ಟೈಲ್‌ನಲ್ಲಿ ಪೋಸ್ ನೀಡಿ ಎಲ್ಲರ ಗಮನ ಸೆಳೆಯಲು ಮುಂದಾಗಿದೆ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಕ್ಯಾಮರಾದೆದುರು ಆನೆಮರಿಗಳ ಮುಂದೆ ನಿಂತು sheldricktrustನ ಸೇವಾಕಾರ್ಯಗಳ ಬಗ್ಗೆ ಹೇಳುತ್ತಾ ಅಂತಿಮ ವರದಿ ನೀಡುತ್ತಿದ್ದಾರೆ. ಈ ವೇಳೆ ಕಿಂದನಿ ಹೆಸರಿನ ಆನೆ ಮರಿಯೊಂದು (Elephant calf) ತನ್ನ ಸೊಂಡಿಲಿನಿಂದ ಮೊದಲಿಗೆ ಈ ಪತ್ರಕರ್ತನ ಕಿವಿಯನ್ನು ಚಿವುಟಿದೆ. ನಂತರ ತಲೆಗೆ ಸೊಂಡಿಲಿರಿಸಿ ಆಶೀರ್ವಾದ (Blessings) ಮಾಡಿದಂತೆ ಮಾಡಿ ತಲೆಯಿಂದ ಕೆಳಗೆ ಮುಖದ ಭಾಗದಲ್ಲಿ ಸೊಂಡಿಲನ್ನು ಇಳಿಸಿ ಮೂಗನ್ನು ಎಳೆದು ಮುತ್ತಿಕ್ಕಿದೆ. ಇದರಿಂದ ಪತ್ರಕರ್ತನಿಗೆ ಪೂರ್ತಿ ಕಚಗುಳಿ ಇಟ್ಟಂತಾಗಿದ್ದು, ಆತ ಪಿಟುಸಿ ಮರೆತು ಆನೆಯ ತುಂಟಾಟಕ್ಕೆ ಜೋರಾಗಿ ನಕ್ಕು ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

 

click me!