ಕೇಂದ್ರದ ನಡೆಗೆ ಮತ್ತೆ ಸುಪ್ರೀಂಕೋರ್ಟ್ ಕಿಡಿ: ಜಡ್ಜ್‌ಗಳ ನೇಮಕ ವಿಳಂಬಕ್ಕೆ ಆಕ್ರೋಶ

Published : Dec 09, 2022, 06:50 AM ISTUpdated : Dec 09, 2022, 12:10 PM IST
ಕೇಂದ್ರದ ನಡೆಗೆ ಮತ್ತೆ ಸುಪ್ರೀಂಕೋರ್ಟ್ ಕಿಡಿ: ಜಡ್ಜ್‌ಗಳ ನೇಮಕ ವಿಳಂಬಕ್ಕೆ ಆಕ್ರೋಶ

ಸಾರಾಂಶ

ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಎಚ್ಚರಿಕೆ ನೀಡಿದೆ. ‘ನೆಲದ ಕಾನೂನು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಪಾಲನೆ ಆಗುವಂತೆ ನೋಡಿಕೊಳ್ಳಬೇಕು’ ಎನ್ನುವ ಮೂಲಕ ತಾನು ಶಿಫಾರಸು ಮಾಡಿರುವ 19 ನ್ಯಾಯಾಧೀಶರ ಹೆಸರುಗಳನ್ನು ಕೇಂದ್ರ ಸರ್ಕಾರ ವಾಪಸು ಕಳಿಸಿಕ್ಕೆ ಆಕ್ಷೇಪಿಸಿದೆ. 

ನವದೆಹಲಿ: ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಎಚ್ಚರಿಕೆ ನೀಡಿದೆ. ‘ನೆಲದ ಕಾನೂನು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಪಾಲನೆ ಆಗುವಂತೆ ನೋಡಿಕೊಳ್ಳಬೇಕು’ ಎನ್ನುವ ಮೂಲಕ ತಾನು ಶಿಫಾರಸು ಮಾಡಿರುವ 19 ನ್ಯಾಯಾಧೀಶರ ಹೆಸರುಗಳನ್ನು ಕೇಂದ್ರ ಸರ್ಕಾರ ವಾಪಸು ಕಳಿಸಿಕ್ಕೆ ಆಕ್ಷೇಪಿಸಿದೆ. ಕೊಲಿಜಿಯಂ ವ್ಯವಸ್ಥೆಯಡಿ ಶಿಫಾರಸಾಗಿರುವ ಹೆಸರುಗಳ ನೇಮಕಾತಿ (appointment) ವಿಳಂಬ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾ. ಎಸ್‌. ಕೆ. ಕೌಲ್‌ (S. K. The Kaul) ನೇತೃತ್ವದ ಪೀಠವು ‘ಸಮಾಜದ ಕೆಲವು ವಿಭಾಗಗಳು ಕೊಲಿಜಿಯಂ ವಿರುದ್ಧ ನಿಲುವು ವ್ಯಕ್ತಪಡಿಸಿವೆ ಎಂದ ಮಾತ್ರಕ್ಕೆ ನೆಲದ ಕಾನೂನು ಬದಲಾಗಲ್ಲ’ ಎಂದು ಕಿಡಿಕಾರಿದೆ.

‘ಎಲ್ಲಿಯವರೆಗೆ ಈ ‘ಚೆಂಡಿನಾಟ’ ಕದನ ನಡೆಯುತ್ತದೆ? ಕೊಲಿಜಿಯಂ ವ್ಯವಸ್ಥೆ ಇರುವವರೆಗೆ ಆ ಪ್ರಕಾರ ನಡೆಯಬೇಕು. ಕೊಲಿಜಿಯಂ (Collegium) ವ್ಯವಸ್ಥೆಯಿರುವವರೆಗೂ ನಾವು ಅದನ್ನೇ ಎತ್ತಿ ಹಿಡಿಯುತ್ತೇವೆ. ನೀವು (ಸರ್ಕಾರ) ಬೇರೆ ಕಾನೂನು ತರಲು ಬಯಸಿದ್ದರೆ ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಕಾನೂನುಗಳನ್ನು ರೂಪಿಸುವ ಹಕ್ಕು ಸಂಸತ್ತಿಗಿದೆ. ಆದರೆ ಅದನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸುವ ಹಕ್ಕು ನ್ಯಾಯಾಂಗಕ್ಕಿದೆ. ಹೀಗಾಗಿ ನ್ಯಾಯಾಂಗದ ಕಾನೂನುಗಳನ್ನು ಪಾಲಿಸುವುದು ಮುಖ್ಯ. ಇಲ್ಲದಿದ್ದರೆ ಜನರು ತಮಗೆ ಸರಿ ಎನಿಸಿದ ಕಾನೂನನ್ನೇ ಪಾಲಿಸುತ್ತಾರೆ’ ಎಂದಿದೆ.

ಜಡ್ಜ್‌ ನೇಮಕಾತಿ ಆಯೋಗ ರಚನೆ ರದ್ದು: ಸಿಜೆ ಎದುರೇ ಸುಪ್ರೀಂಗೆ ಉಪರಾಷ್ಟ್ರಪತಿ ಚಾಟಿ

ಕೊಲಿಜಿಯಂ ವಿರುದ್ಧ ಹೇಳಿಕೆಗೆ ಸುಪ್ರೀಂಕೋರ್ಟ್‌ ಆಕ್ಷೇಪ

ಕೊಲಿಜಿಯಂ ವ್ಯವಸ್ಥೆ ವಿರುದ್ಧ ಮಾತುಗಾರಿಕೆ ಸರಿಯಲ್ಲ. ಕೊಲಿಜಿಯಂ ವ್ಯವಸ್ಥೆಯು ಕಾನೂನಾತ್ಮಕವಾದದ್ದು, ಅದನ್ನು ಪಾಲನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಈ ಮೂಲಕ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಸರ್ಕಾರದಲ್ಲಿನ ಪ್ರಮುಖರು ಮಾತನಾಡುತ್ತಿರುವ ಬಗ್ಗೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ. ಕೊಲಿಜಿಯಂ ಕುರಿತಾದ ಅರ್ಜಿಯೊಂದರ ವಿಚಾರಣೆ ವೇಳೆ ಈ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ‘ಕೊಲಿಜಿಯಂ ಆಕ್ಷೇಪಿಸಿ ಸರ್ಕಾರದ ಉನ್ನತ ಜನರು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ ಎಂದು ನೀವು ಸರ್ಕಾರಕ್ಕೆ ಸಲಹೆ ನೀಡಬೇಬೇಕು’ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ (Venkataramani) ಅವರಿಗೆ ತಾಕೀತು ಮಾಡಿದೆ. ಇತ್ತೀಚೆಗೆ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (Jagdeep Dhankar) ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ಟೀಕೆ ಟಿಪ್ಪಣಿ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ಕ್ರಿಮಿನಲ್‌ ಹಿನ್ನೆಲೆ ಪರಿಶೀಲಿಸಿ ನೌಕರಿ ನೀಡಿ: ಪ್ರತಾಪ್‌ ರೆಡ್ಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?