ತಮಿಳ್ನಾಡಲ್ಲಿ ಮತ್ತೆ ಆನ್‌ಲೈನ್‌ ಜೂಜು ನಿಷೇಧ ಕಾಯ್ದೆ ಜಾರಿ: ರಾಜ್ಯಪಾಲರಿಂದ ಸಹಿ

By Kannadaprabha NewsFirst Published Apr 11, 2023, 11:17 AM IST
Highlights

ಸೋಮವಾರ ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಂಡಿಸಿದ್ದ ಗೊತ್ತುವಳಿಯನ್ನು ವಿಧಾನಸಭೆ ಅಂಗೀಕರಿಸಿದ್ದು ಅದರಲ್ಲಿ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡುವಂತೆ ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌. ರವಿಗೆ ಸಲಹೆ ನೀಡುವಂತೆ ಕೇಂದ್ರ ಮತ್ತು ರಾಷ್ಟ್ರಪತಿಗಳನ್ನು ಕೋರಲಾಗಿತ್ತು.

ಚೆನ್ನೈ (ಏಪ್ರಿಲ್ 11, 2023): ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಅನುಮೋದಿಸಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗಳನ್ನು ಒತ್ತಾಯಿಸುವ ಗೊತ್ತುವಳಿಯನ್ನು ತಮಿಳುನಾಡು ವಿಧಾನಸಭೆ ಸೋಮವಾರ ಅಂಗೀಕರಿಸಿದೆ. ಅದರ ಬೆನ್ನಲ್ಲೇ ರಾಜ್ಯಪಾಲ ಆರ್‌. ಎನ್‌. ರವಿ, ರಾಜ್ಯದಲ್ಲಿ ಆನ್‌ಲೈನ್‌ ಜೂಜು ನಿಷೇಧಿಸುವ ಮಸೂದೆಗೆ ಅಂಕಿತ ಹಾಕಿದ್ದಾರೆ. 

ಸೋಮವಾರ ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮಂಡಿಸಿದ್ದ ಗೊತ್ತುವಳಿಯನ್ನು ವಿಧಾನಸಭೆ ಅಂಗೀಕರಿಸಿದ್ದು ಅದರಲ್ಲಿ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡುವಂತೆ ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌. ರವಿಗೆ ಸಲಹೆ ನೀಡುವಂತೆ ಕೇಂದ್ರ ಮತ್ತು ರಾಷ್ಟ್ರಪತಿಗಳನ್ನು ಕೋರಲಾಗಿತ್ತು.
ಇನ್ನು, ಗೊತ್ತುವಳಿ ಮಂಡಿಸುವಾಗ ಆನ್‌ಲೈನ್‌ ಜೂಜಿನಲ್ಲಿ ಹಣ ಕಳೆದುಕೊಂಡು ಹಲವಾರು ವ್ಯಕ್ತಿಗಳು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ‘ಭಾರವಾದ ಹೃದಯದೊಂದಿಗೆ ಮಸೂದೆ ಮಂಡಿಸುತ್ತಿದ್ದೇನೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದರು. ಬಳಿಕ ಸ್ಪೀಕರ್‌ ಅವರು ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿದರು.

ಇದನ್ನು ಓದಿ: ಆನ್‌ಲೈನ್‌ ಜೂಜು ನಿಷೇಧಿಸುವ ಮಸೂದೆ ತಮಿಳುನಾಡಲ್ಲಿ ಮತ್ತೆ ಪಾಸ್‌

ಸೈಬರ್‌ ಲೋಕದಲ್ಲಿ ಬಾಜಿ ಅಥವಾ ಬೆಟ್ಟಿಂಗ್‌ ಕಟ್ಟುವುದನ್ನು ನಿಷೇಧಿಸಿ ‘ತಮಿಳುನಾಡು ಗೇಮಿಂಗ್‌ ಮತ್ತು ಪೊಲೀಸ್‌ ಕಾನೂನುಗಳು (ತಿದ್ದುಪಡಿ) ಕಾಯ್ದೆ 2021’ ಅನ್ನು ಜಾರಿಗೆ ತರಲಾಗಿತ್ತು. ಅದನ್ನು 2021ರ ಆಗಸ್ಟ್‌ನಲ್ಲಿ ಮದ್ರಾಸ್‌ ಹೈಕೋರ್ಟ್‌ ರದ್ದುಗೊಳಿಸಿತ್ತು. 

ಹೀಗಾಗಿ 2022ರ ಅಕ್ಟೋಬರ್‌ 1 ರಂದು ರಾಜ್ಯ ಸರ್ಕಾರ ಆನ್‌ಲೈನ್‌ ಜೂಜು, ಬಾಜಿ ಕಟ್ಟಿಆಡುವ ರಮ್ಮಿ ಮತ್ತು ಪೋಕರ್‌ನಂತಹ ಗೇಮ್‌ಗಳನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದಕ್ಕೆ ರಾಜ್ಯಪಾಲರು ಅಕ್ಟೋಬರ್‌ 3ರಂದು ಅಂಕಿತ ಹಾಕಿದ್ದರು. ಅಕ್ಟೋಬರ್‌ 17ರಂದು ತಮಿಳುನಾಡು ವಿಧಾನಸಭೆ ವಿಧೇಯಕ ಅಂಗೀಕರಿಸಿತ್ತು. ಅದನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಜ್ಯಪಾಲರು ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆಗಳೊಂದಿಗೆ ಮತ್ತೆ ಮಂಡಿಸಿ ಅಂಗೀಕಾರ ಪಡೆಯಲಾಗಿದೆ. 

ಇದನ್ನೂ ಓದಿ: ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!

ತಮಿಳುನಾಡು ರಾಜ್ಯಪಾಲರ ವಿರುದ್ಧ ಮತ್ತೆ ಆಕ್ರೋಶ
ಈ ಮಧ್ಯೆ, ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ "ಬಿಲ್ ಈಸ್ ಡೆಡ್" ಎಂಬ ಹೇಳಿಕೆಯ ನಂತರ ಶನಿವಾರ ಚೆನ್ನೈನಾದ್ಯಂತ ಅವಾರ ವಿರುದ್ಧ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ತಮಿಳುನಾಡಿನಿಂದ ಹೊರಹೋಗುವಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ತಿಂಗಳ ಆರಂಭದಲ್ಲಿ, ರಾಜ್ಯಪಾಲ ಆರ್‌.ಎನ್.ರವಿ ಅವರು ನಾಗರಿಕ ಸೇವಾ ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸುವಾಗ, ಸಂವಿಧಾನದಲ್ಲಿ ರಾಜ್ಯಪಾಲರ ಪಾತ್ರವನ್ನು ವಿವರಿಸಿದರು ಮತ್ತು ಅಸೆಂಬ್ಲಿ ಅಂಗೀಕರಿಸಿದ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ಆಯ್ಕೆಯನ್ನು ರಾಜ್ಯಪಾಲರು ಹೊಂದಿರುವುದಾಗಿ ಹೇಳಿದರು. ಅಲ್ಲದೆ, ಮಸೂದೆ ತಡೆ ಹಿಡಿಯುವುದು ಅಂದರೆ "ಆ ಮಸೂದೆ ಸತ್ತಿದೆ" ಎಂದರ್ಥ ಎಂದೂ ಹೇಳಿದ್ದರು.

ಬಳಿಕ, ತಡೆಹಿಡಿಯುವುದು ಎಂಬುದು ಮಸೂದೆಯನ್ನು ತಿರಸ್ಕರಿಸಲು ಬಳಸುವ "ಯೋಗ್ಯ ಭಾಷೆ" ಎಂದೂ ತಮಿಳುನಾಡು ರಾಜ್ಯಪಾಲರು ಹೇಳಿದ್ದರು. ಹಾಗೂ, ರಾಜ್ಯಪಾಲರ ಜವಾಬ್ದಾರಿಯನ್ನು ಸಂವಿಧಾನ ರಕ್ಷಿಸುವ ಸಂವಿಧಾನವೇ ವ್ಯಾಖ್ಯಾನಿಸಿದೆ.ಎಂದೂ ಹೇಳಿದ್ದರು. ಅಲ್ಲದೆ, ಆ ಮಸೂದೆ ಸಾಂವಿಧಾನಿಕ ಮಿತಿಯನ್ನು ಉಲ್ಲಂಘಿಸುತ್ತದಾ ಮತ್ತು ರಾಜ್ಯ ಸರ್ಕಾರವು "ತನ್ನ ಸಾಮರ್ಥ್ಯವನ್ನು ಮೀರಿದ್ಯಾ ಎಂಬುದನ್ನು ರಾಜ್ಯಪಾಲರು ಪರಿಶೀಲಿಸುತ್ತಾರೆ ಎಂದೂ ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಹೇಳಿದ್ದರು.

ಇದನ್ನೂ ಓದಿ: ತಮಿಳುನಾಡಲ್ಲಿ Online Game ಮತ್ತೆ ನಿಷೇಧ: ಆನ್‌ಲೈನ್‌ ಜೂಜು, ಅದೃಷ್ಟದ ಆಟಗಳು ಬ್ಯಾನ್‌

click me!