
ಜೈಪುರ (ಏಪ್ರಿಲ್ 11, 2023): ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಯುವ ನಾಯಕ ಸಚಿನ್ ಪೈಲಟ್ ಮತ್ತೆ ಸಮರ ಸಾರಿದ್ದು, ಮಂಗಳವಾರ ತಮ್ಮದೇ ಸರ್ಕಾರದ ವಿರುದ್ಧ 1 ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಮಂಗಳವಾರ ಜ್ಯೋತಿಬಾ ಫುಲೆ ಅವರ ಜನ್ಮದಿನ ಇದ್ದು, ಅಂದೇ ಶಹೀದ್ ಸ್ಮಾರಕದಲ್ಲಿ ಸಚಿನ್ ಪೈಲಟ್ ಉಪವಾಸ ಮಾಡಲಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಮುಂದಾಗಿಲ್ಲ ಎಂಬುದು ಸಚಿನ್ ಪೈಲಟ್ ಅಳಲಾಗಿದೆ.
ಈ ಬಗ್ಗೆ ಭಾನುವಾರ ವಾಗ್ದಾಳಿ ನಡೆಸಿದ್ದ ಸಚಿನ್ ಪೈಲಟ್ (Sachin Pilot), ‘ವಸುಂಧರಾ ರಾಜೇ (Vasundhara Raje) ಜೊತೆ ಅಶೋಕ್ ಗೆಹ್ಲೋಟ್ (Ashok Gehlot) ‘ಡೀಲ್’ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಅವಧಿಯ ಭ್ರಷ್ಟಾಚಾರ (Corruption) ತನಿಖೆಗೆ ರಾಜ್ಯ ಸರ್ಕಾರ (State Government) ಮುಂದಾಗುತ್ತಿಲ್ಲ. ಈ ಬಗ್ಗೆ ನಾನು ಪತ್ರ ಬರೆದರೂ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿಲ್ಲ’ ಎಂದಿದ್ದರು.
ಇದನ್ನು ಓದಿ: Ashok Gehlot vs Sachin Pilot: ರಾಜಸ್ಥಾನ ಕಾಂಗ್ರೆಸ್ಸಲ್ಲಿ ಮತ್ತೆ ಮೆಗಾ ಬಿಕ್ಕಟ್ಟು: ಸಚಿನ್ ಪೈಲಟ್‌ರಿಂದ ನಾಳೆ ಉಪವಾಸ
‘ನಾವು ವಿಪಕ್ಷದಲ್ಲಿದ್ದಾಗ ಬಿಜೆಪಿ (BJP) ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೆವು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಹಲವು ವರ್ಷ ಕಳೆದರೂ ತನಿಖೆಗೆ ಗೋಜಿಗೆ ಹೋಗಿಲ್ಲ. ಇದನ್ನೆಲ್ಲಾ ನೋಡಿದರೆ ನಾವು ಭ್ರಷ್ಟರ ಜೊತೆ ಕೈಜೋಡಿಸಿರುವ ಶಂಕೆ ಉಂಟಾಗುತ್ತಿದೆ’ ಎಂದಿದ್ದರು.
ಪಕ್ಷ ವಿರೋಧಿ ಚಟುವಟಿಕೆ
ಸಚಿನ್ ಪೈಲಟ್ ಕೈಗೊಂಡಿರುವ ಉಪವಾಸಕ್ಕೆ ಕಾಂಗ್ರೆಸ್ (Congress) ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಪಕ್ಷ ವಿರೋಧಿ ಚಟುವಟಿಕೆ (Anti Party Activity) ಎಂದಿದೆ. ಸಾರ್ವಜನಿಕವಾಗಿ ಪ್ರತಿಭಟಿಸುವ (Protest) ಮೊದಲು ಪಕ್ಷದೊಳಗೆ ಮಾತುಕತೆ ನಡೆಸಲು ಸಚಿನ್ ಪೈಲಟ್‌ಗೆ ಸೂಚಿಸಲಾಗಿದೆ ಎಂದು ಪಕ್ಷ ತಿಳಿಸಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್ ಗೆಹ್ಲೋಟ್..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ