ಕ್ಯಾಮರಾಗೆ ಹಿಮ ಚಿರತೆಯ ಸಖತ್ ಫೋಸ್: ಕ್ಲೋಸ್ ಅಪ್ ವಿಡಿಯೋ ವೈರಲ್

By Anusha KbFirst Published Nov 27, 2022, 10:21 PM IST
Highlights

ಹಿಮ ಕರಡಿಯ ಅಪರೂಪದ ಕ್ಲೋಸ್ ಅಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಗಮನ ಸೆಳೆಯುತ್ತಿವೆ. 

ಹವ್ಯಾಸಿ ವನ್ಯಜೀವಿ ಫೋಟೋಗ್ರಾಫರ್‌ಗಳ ಕ್ಯಾಮರಾದಲ್ಲಿ ಸೆರೆ ಸಿಕ್ಕಿ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿವೆ. ಇತ್ತೀಚೆಗಷ್ಟೇ ಹಿಮ ಚಿರತೆಯೊಂದು ಹಿಮಪರ್ವತದ ಮೇಲೇರಿ ಕುಳಿತ ಸುಂದರವಾದ ದೃಶ್ಯವೊಂದನ್ನು ಅಮೆರಿಕಾ ಮೂಲದ ಫೋಟೋಗ್ರಾಪರ್ ಕಿಟ್ಟಿಯಾ ಪಾವ್ಲೋವ್ಸ್ಕಿ(Kittiya Pawlowski) ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ಸಾಕಷ್ಟು ಗಮನ ಸೆಳೆದಿತ್ತು. ಅದೇ ರೀತಿ ಈಗ ಹಿಮ ಕರಡಿಯ ಅಪರೂಪದ ಕ್ಲೋಸ್ ಅಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಗಮನ ಸೆಳೆಯುತ್ತಿವೆ. 

ವನ್ಯಜೀವಿ ಛಾಯಾಗ್ರಹಣ (Wildlife photographer) ಸುಲಭದ ಕೆಲಸವೇನಲ್ಲ. ಕೇಳುವುದಕ್ಕೆ ಇದು ಕುತೂಹಲಕಾರಿ ಎನಿಸಿದರು. ಅದು ಬಹಳ ಸವಾಲಿನ ಕೆಲಸ ಎಂಬುದು ಬಹುತೇಕರಿಗೆ ತಿಳಿದಿಲ್ಲ. ವನ್ಯಜೀವಿ ಛಾಯಾಗ್ರಾಹಕರು ಅಪೂರ್ವ ಫೋಟೋ ಸೆರೆ ಹಿಡಿಯುವ ಹಿಂದೆ ಹಲವು ಅಡ್ಡಿ ಆತಂಕಗಳಿವೆ. ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ಫೋಟೋ ತೆಗೆಯುವಾಗ ದಿಢೀರ್ ದಾಳಿ ಅಲ್ಲದೇ ಕೆಲವೊಮ್ಮೆ ವಾತಾವರಣವೂ ಅಡ್ಡಿಯುಂಟು ಮಾಡುತ್ತದೆ. ಆದರೆ ತಾಳ್ಮೆಯೊಂದೆ ಉತ್ತಮ ದೃಶ್ಯ ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

The elusive snow leopard during snow fall…
At Karakoram Range.
VC:WWF pic.twitter.com/gFoziwMyxm

— Susanta Nanda (@susantananda3)

ಅದೇ ರೀತಿ ಛಾಯಾಗ್ರಾಹಕರೊಬ್ಬರು ಸೆರೆ ಹಿಡಿದಿರುವ ಹಿಮಕರಡಿಯ 44 ಸೆಕೆಂಡ್‌ಗಳ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದಾ (Susanta Nanda) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ಹಿಮ ಚಿರತೆ ತನ್ನ ನೈಸರ್ಗಿಕ ಆವಾಸಸ್ಥಾನದಲ್ಲಿ ಆರಾಮವಾಗಿ ವಿರಮಿಸುತ್ತಿರುವ ದೃಶ್ಯ ಸೆರೆ ಆಗಿದೆ. ಈ ವಿಡಿಯೋಗೆ ವಿಶ್ವ ವನ್ಯಜೀವಿ ನಿಧಿಯ ವಿಡಿಯೋ ಎಂದು ಸುಶಾಂತ್ ಉಲ್ಲೇಖಿಸಿದ್ದಾರೆ. ಅಪರೂಪದ ಹಿಮಚಿರತೆ ಕಾಶ್ಮೀರದ ಕರಕೊರಮ್ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಎಂದು ಅವರು ಬರೆದುಕೊಂಡಿದ್ದಾರೆ. 

Climate Change: ಅಲಾಸ್ಕಾದಿಂದ ರಷ್ಯಾಗೆ ವಲಸೆ ಹೋಗುತ್ತಿರುವ ಹಿಮ ಕರಡಿಗಳು

ಹಿಮಚಿರತೆಗಳ ಬಿಳಿ ಬಣ್ಣದ ರೋಮಗಳು ಅವುಗಳನ್ನು ಹಿಮದಿಂದ ರಕ್ಷಣೆ ಮಾಡುತ್ತವೆ. ಈ ಹಿಮಚಿರತೆಗಳು ನಾಚಿಕೆ ಗುಣವನ್ನು ಹೊಂದಿದ್ದು, ತಮ್ಮ ಪ್ರದೇಶದಲ್ಲಿ ಸುಪ್ತವಾಗಿರುತ್ತವೆ ಈ ಕಾರಣಕ್ಕೆ ಇವುಗಳು ಕಾಣಲು ಸಿಗುವುದು ಬಲು ಅಪರೂಪ. ಹಾಗೆಯೇ ಈ ಅಪರೂಪದ ವಿಡಿಯೋದಲ್ಲಿ ಹಿಮಪ್ರದೇಶದಲ್ಲಿ ಕುಳಿತಿರುವ ಈ ಹಿಮಚಿರತೆ ಮೈ ಮುರಿಯುತ್ತಾ ಬೀಳುತ್ತಿರುವ ಹಿಮಕ್ಕೆ ಮೈಯೊಡ್ಡುತ ಕುಳಿತಿದೆ.  ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದಕ್ಕಿಂತ ಸುಂದರವಾದುದು ಬೇರೆನಿದೆ ಇದೊಂದು ದೇವರ ವಿಸ್ಮಯವೇ ಸರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇದೇ ಮೊದಲ ಬಾರಿಗೆ ರಾಯಲ್ ಲುಕ್‌ನಲ್ಲಿ ಈ ಹಿಮಚಿರತೆಯನ್ನು ನೋಡಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವುಗಳು ನೋಡಲು ಸುಂದರವಾಗಿರುವ ಜೊತೆ ಬಲಶಾಲಿಯೂ ಆಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Polar Bear: ಹಲ್ಲು ನೋವೆಂದು ಬಂದ ಹಿಮಕರಡಿಗೆ ರೂಟ್ ಕೆನಲ್ ಸರ್ಜರಿ ಮಾಡಿದ ಡೆಂಟಿಸ್ಟ್

ವಿಶ್ವ ವನ್ಯಜೀವಿ ನಿಧಿ ನೀಡುವ ಮಾಹಿತಿ ಪ್ರಕಾರ ಹಿಮಚಿರತೆಗಳು ಬಹಳ ವಿರಳವಾಗಿ ಕೇಂದ್ರ ಏಷ್ಯಾ ಭಾಗದ 12 ದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೇ ಎತ್ತರದ ಹಿಮ ಪ್ರದೇಶಗಳಲ್ಲೇ ಹೆಚ್ಚಾಗಿ ವಾಸಿಸುತ್ತವೆ. ಸುಂದರವಾದ ಕಪ್ಪು ಡಾಟ್‌ಗಳನ್ನು ಮೈಮೇಲೆ ಹೊಂದಿದ್ದು, ಇವು ಚಳಿಯಿಂದ ಇವುಗಳನ್ನು ರಕ್ಷಿಸಿಕೊಳ್ಳಲು ಸಹಾಯಕವಾಗಿವೆ. ಅಲ್ಲದೇ ಈ ಹಿಮಚಿರತೆಗಳ ಅಗಲವಾದ, ತುಪ್ಪಳದಿಂದ ಆವೃತವಾದ ಪಾದಗಳು ನೈಸರ್ಗಿಕ ಸ್ನೋ ಶೂಗಳಂತೆ ಇದ್ದು, ಮೃದುವಾದ ಹಿಮದ ಮೇಲೆ ನಡೆಯಲು ಸಹಾಯ ಮಾಡುತ್ತವೆ. ಜೊತೆಗೆ ಇವುಗಳು ಶಕ್ತಿಶಾಲಿ ಪರಭಕ್ಷಕ ಪ್ರಾಣಿಗಳಾಗಿದ್ದು, ತಮ್ಮ ತೂಕಕ್ಕಿಂತ ಮೂರು ಪಟ್ಟು ಹೆಚ್ಚು ತೂಕದ ಪ್ರಾಣಿಯನ್ನು ಬೇಟೆಯಾಡಲು ಸಶಕ್ತವಾಗಿವೆ. 

click me!