ಇದೆಂಥಾ ಶಿಕ್ಷಣ... ಐ ಲವ್‌ ಯೂ ಮೇರಿ ಜಾನ್ ಎಂದು ಶಿಕ್ಷಕಿಗೆ ಕಿರುಕುಳ ನೀಡಿದ ವಿದ್ಯಾರ್ಥಿಗಳು

Published : Nov 27, 2022, 07:51 PM ISTUpdated : Nov 27, 2022, 08:01 PM IST
ಇದೆಂಥಾ ಶಿಕ್ಷಣ... ಐ ಲವ್‌ ಯೂ ಮೇರಿ ಜಾನ್ ಎಂದು ಶಿಕ್ಷಕಿಗೆ ಕಿರುಕುಳ ನೀಡಿದ ವಿದ್ಯಾರ್ಥಿಗಳು

ಸಾರಾಂಶ

ಇದುವರೆಗೆ ಟೀಚರ್ ಹೊಡೆದರೆಂದು ಮಕ್ಕಳು ಪೋಷಕರನ್ನು ಕರೆದುಕೊಂಡು ಬಂದು ಶಾಲೆಯಲ್ಲಿ ಗಲಾಟೆ ಮಾಡಿದ ಹಲವು ಘಟನೆಗಳನ್ನು ನಾವು ನೀವು ಕೇಳಿದ್ದೆವು. ಆದರೆ ಈಗ ಉತ್ತರಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. 

ಮೀರತ್: ಇದುವರೆಗೆ ಟೀಚರ್ ಹೊಡೆದರೆಂದು ಮಕ್ಕಳು ಪೋಷಕರನ್ನು ಕರೆದುಕೊಂಡು ಬಂದು ಶಾಲೆಯಲ್ಲಿ ಗಲಾಟೆ ಮಾಡಿದ ಹಲವು ಘಟನೆಗಳನ್ನು ನಾವು ನೀವು ಕೇಳಿದ್ದೆವು. ಆದರೆ ಈಗ ಉತ್ತರಪ್ರದೇಶದ ಮೀರತ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಪಾಠ ಮಾಡಿದ ಶಿಕ್ಷಕಿಯ ಜೊತೆಯೇ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಶಿಕ್ಷಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವಿದ್ಯಾರ್ಥಿಗಳ ಈ ಅಸಭ್ಯ ವರ್ತನೆಯಿಂದ ಶಿಕ್ಷಕಿ ಖಿನ್ನತೆಗೆ ಜಾರಿದ್ದಾರೆ ಎಂದು ತಿಳಿದು ಬಂದಿದೆ. ಶಿಕ್ಷಕಿಗೆ ಅಸಭ್ಯವಾಗಿ ಕಾಮೆಂಟ್‌ಗಳನ್ನು ಮಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಆ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿದ ಕಿಡಿಗೇಡಿ ವಿದ್ಯಾರ್ಥಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. 

ಮೀರತ್‌ನ (Meerut) ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ (Kithor Police Station) ರಾಮ್ ಮನೋಹರ್ ಲೋಹಿಯಾ ಇಂಟರ್ ಕಾಲೇಜು (Ram Manohar Lohia Inter College) ಆವರಣದಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯಲ್ಲಿ ಓದುತ್ತಿರುವ ಅಮನ್, ಕೈಫ್ ಹಾಗೂ ಅಮಲ್ತಾಸ್ ಎಂಬ ವಿದ್ಯಾರ್ಥಿಗಳು ತರಗತಿಯೊಳಗೆ ಶಿಕ್ಷಕರೂ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕಿಗೆ ಐ ಲವ್‌ಯೂ ಹೇಳಿ ಮುಜುಗರಕ್ಕೀಡು ಮಾಡಿದ್ದಾರೆ. ನಂತರ ಶಾಲೆಯ ಪ್ರಾರ್ಥನಾ ಸಮಯದ ವೇಳೆ ಎಲ್ಲ ವಿದ್ಯಾರ್ಥಿಗಳು ಸೇರಿದ ವೇಳೆಯೂ ಕೆಟ್ಟ ಪದಗಳಿಂದ ಶಿಕ್ಷಕಿಗೆ ಕಾಮೆಂಟ್ ಮಾಡಿದ್ದಾರೆ. 


ಶಿಕ್ಷಕಿಯ ಪ್ರಕಾರ, ಶಿಕ್ಷಕಿ ಮೂಲತಃ ಮುಸ್ಲಿಂ ಆಗಿದ್ದು, ಶಾಲೆಯಲ್ಲಿ ಮಾಮೂಲಿಯಂತೆ ಇಡೀ ದಿನ ಹಿಜಾಬ್ ಧರಿಸುತ್ತಿದ್ದರು. ಇತ್ತೀಚೆಗೆ ವಿದ್ಯಾರ್ಥಿಗಳ ವರ್ತನೆಯಿಂದ ಶಿಕ್ಷಕಿ ಬೇಜಾರಾಗಿದ್ದರು. ಆದರೆ ವಿದ್ಯಾರ್ಥಿಗಳು ಮಾತ್ರ ತಮ್ಮ ಮಿತಿಯನ್ನು ಮೀರಿದ್ದು, ಪಾಠ ಮಾಡುವ ಮೂಲಕ ಬದುಕಿನ ಮಾರ್ಗ ತೋರಿಸುವ ಶಿಕ್ಷಕಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ಆ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದುವರೆಗೆ ವಿದ್ಯಾರ್ಥಿಗಳ ಕಿರುಕುಳವನ್ನು ಸಹಿಸಿಕೊಂಡಿದ್ದ ಶಿಕ್ಷಕಿ ಮಕ್ಕಳು ತಮ್ಮ ಮಿತಿಯನ್ನು ಮೀರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುತ್ತಿದ್ದಂತೆ ಮಾನಕ್ಕೆ ಅಂಜಿ ವಿದ್ಯಾರ್ಥಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. 

ಈ ಘಟನೆಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಅರವಿಂದ್ ಮೋಹನ್ ಶರ್ಮಾ ( Arvind Mohan Sharma) ಮಾಹಿತಿ ನೀಡಿದ್ದು, ಒಬ್ಬಳು ವಿದ್ಯಾರ್ಥಿನಿ ಸೇರಿದಂತೆ ಒಟ್ಟು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್, 354, 500 ಹಾಗೂ 67 ರ ಅಡಿ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (Information Technology Act) ಪ್ರಕರಣ ದಾಖಲಿಸಲಾಗಿದೆ. ಮಕ್ಕಳ ಕಿರುಕುಳದಿಂದ ತಾನು ಖಿನ್ನತೆಗೆ ಒಳಗಾಗಿದ್ದಾಗಿ ಶಿಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು, ಶಿಕ್ಷಕಿಗೆ ತರಗತಿ ನಡೆಸುತ್ತಿರುವಾಗಲೇ ಐಲವ್‌ ಯೂ ಮೇರಿ ಜಾನ್ ಎಂದೆಲ್ಲಾ ಹೇಳಿದ್ದಾರೆ. ಮೂವರು ವಿದ್ಯಾರ್ಥಿಗಳು ಶಿಕ್ಷಕಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ಒಬ್ಬನಂತೂ ಬಾಯಲ್ಲಿ ಲಾಲಿಪಾಪ್ ಇರಿಸಿಕೊಂಡು ಶಿಕ್ಷಕಿಯತ್ತ ಅಸಭ್ಯ ವರ್ತನೆ ತೋರಿದ್ದಾನೆ.

ಮಂಗಳೂರು: ಬಸ್‌ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ವಶಕ್ಕೆ

ಎಂಥಾ ಕಾಲ ಬಂತು ನೋಡಿ ಗುರು ದೇವೋಭವ ಎಂದು ಗುರುವಿಗೆ ದೇವರ ಸ್ಥಾನ ನೀಡಿರುವ ಭಾರತದಲ್ಲಿ ಈಗ ವಿದ್ಯಾರ್ಥಿಗಳು ಗುರುವನ್ನೇ ಮಂಚಕ್ಕೆ ಕರೆಯುವಷ್ಟರ ಮಟ್ಟಿಗೆ ಕೆಟ್ಟು ಹೋಗಿದ್ದಾರೆ ಎಂದಾದರೆ ಅವರೆಂಥಾ ವಿದ್ಯಾರ್ಥಿಗಳಾಗಿರಬಹದು. ಇದನ್ನು ಗಮನಿಸಿದರೆ ಇಂದಿನಿ ವಿದ್ಯಾರ್ಥಿಗಳಿಗೆ  ಶಿಕ್ಷಣಕ್ಕಿಂತ ಸಂಸ್ಕಾರ ಕಲಿಸುವುದು ಇಂದಿನ ತುರ್ತು ಅಗತ್ಯವಾಗಿದೆ. 

Sexual harassment : 7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ 5ವರ್ಷ ಜೈಲು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana