AeroIndia 2023 ಬೆಂಗಳೂರಲ್ಲಿ ನಡೆಯಲಿರುವ ಏಷ್ಯಾದ ಅತೀ ದೊಡ್ಡ ಏರ್ ಶೋ ದಿನಾಂಕ ಪ್ರಕಟ!

By Suvarna NewsFirst Published Nov 27, 2022, 9:31 PM IST
Highlights

ಪ್ರತಿಷ್ಠಿತ ಏರೋ ಇಂಡಿಯಾ ಏರ್ ಶೋ ದಿನಾಂಕ ಪ್ರಕಟಗೊಂಡಿದೆ.  ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಈ ಏರ್ ಶೋಗೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದೆ. ಏರ್ ಶೋ ದಿನಾಂಕ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು(ನ.27): ಏಷ್ಯಾದ ಅತೀ ದೊಡ್ಡ ಏರ್ ಶೋ ದಿನಾಂಕ ಪ್ರಕಟಗೊಂಡಿದೆ. ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ ಫೆಬ್ರವರಿ 13ರಿಂದ 17ರ ವರೆಗೆ ಏರೋಇಂಡಿಯಾ ಶೋ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಘೋಷಿಸಿದೆ. ಇದು 14ನೇ ಆವೃತ್ತಿಯ ಏರ್ ಶೋ ಕಾರ್ಯಕ್ರಮವಾಗಿದೆ.  ಪ್ರತಿಷ್ಠಿತ ಏರ್ ಶೋಗೆ ಕರ್ನಾಟಕ ಸರ್ಕಾರ ಈಗಾಗಲೇ ಸಿದ್ದತೆ ಆರಂಭಿಸಿದೆ. ಕೊರೋನಾಗಿಂತ ಮೊದಲು ಆಯೋಜಿಸಿದ ರೀತಿ ಅದ್ಧೂರಿಯಾಗಿ ಏರೋಇಂಡಿಯಾ ಶೋ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. 

ಏರೋಇಂಡಿಯಾ ಶೋ ಕುರಿತು ಭಾರತೀಯ ರಕ್ಷಣಾ ಇಲಾಖೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ‘ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಭಾರತೀಯ ವಾಯುಸೇನೆ ಅಗತ್ಯ ಸಿದ್ಥತೆಗಳನ್ನು ಮಾಡಿಕೊಳ್ಳುತ್ತಿದೆ. ಕೊರೋನಾ ಕಾರಣದಿಂದ 2021ರಲ್ಲಿ ಸೀಮಿತ ಸಂಖ್ಯೆಯಲ್ಲಿ ಜನ ಭಾಗಿಯಾಗಿದ್ದರು. ಆದರೆ, ಈ ಬಾರಿ ಕೊರೋನಾ ಪೂರ್ವದ ಆವೃತ್ತಿಯಂತೆ 5-7 ಲಕ್ಷ ಮಂದಿ ಭಾಗವಹಿಸಲುವ ನಿರೀಕ್ಷೆ ಇದೆ.

 

Singapore Airshow 2022ರಲ್ಲಿ ಹೀರೋ ಆದ 'ಮೇಡ್‌ ಇನ್ ಇಂಡಿಯಾ'ದ ತೇಜಸ್!

1996ರಿಂದ ಬೆಂಗಳೂರಿನ ಯಲಹಂಕದ ವಾಯುನೆಲೆ ಏರೋ ಇಂಡಿಯಾ ಶೋ ಕಾರ್ಯಕ್ರಮ ಆಯೋಜಿಸುತ್ತಿದೆ. ಇದು ಬೆಂಗಳೂರಿನ ಹೆಮ್ಮೆಯಾಗಿದೆ. ಸದ್ಯ ದಿನಾಂಕ ಮಾತ್ರ ಬಹಿರಂಗಪಡಿಸಲಾಗಿದೆ. ಯಾವ ರಾಷ್ಟ್ರಗಳು ಪಾಲ್ಗೊಳ್ಳಲಿದೆ? ಏರ್ ಶೋದಲ್ಲಿನ ಪ್ರದರ್ಶನ ಸೇರಿದಂತೆ ಇತರ ಮಾಹಿತಿಗಳನ್ನು ಶೀಘ್ರದಲ್ಲೇ ಬಹಿರಂಗ ಪಡಿಸಲಿದೆ.

ಏರ್‌ ಶೋ ಮೂರು ದಿನ ಜನ ಮತ್ತು ವಾಹನ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಪ್ರತಿದಿನ ಬೆಳಗ್ಗೆ 9.30ಕ್ಕೆ ಮೊದಲ ಪ್ರದರ್ಶನ ಆರಂಭಿಸಿ 10.30ರಿಂದ 11ರೊಳಗೆ ಮುಕ್ತಾಯಗೊಳಿಸುವಂತೆ ವಾಯಪಡೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸಲಹೆ ನೀಡಲಾಗಿದೆ. ಈ ಹಿಂದೆ ಮೊದಲ ಶೋ 10.30ರಿಂದ 12ವರೆಗೂ ನಡೆಯುತ್ತಿತ್ತು. 

ಬೀದರ್‌ ಏರ್‌ ಶೋ: ಐತಿಹಾಸಿಕ ಕೋಟೆ ಸುತ್ತಿದ 'ಸೂರ್ಯಕಿರಣ'..!

20 ಸಾವಿರ ವಾಹನಕ್ಕೆ ಪಾರ್ಕಿಂಗ್‌ ಅವಕಾಶ
2019ರಲ್ಲಿ ಅಗ್ನಿ ಅವಗಡ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಬದ್ಧವಾಗಿ ಈ ಹಿಂದಿನ ಆವೃತ್ತಿಗಿಂತ ಅಧಿಕ ವಾಹನ ನಿಲುಗಡೆ ತಾಣಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಬರೋಬ್ಬರಿ 20,000 ವಾಹನಗಳ ನಿಲುಗಡೆಗೆ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಹೀಗಾಗಿ, ವಾಯುನೆಲೆ ಸುತ್ತ ಮಾತ್ರವಲ್ಲದೇ ನಗರದ ಕೇಂದ್ರ ಭಾಗದಿಂದ ವಾಯುನೆಲೆಗೆ ತೆರಳುವ ಮಾರ್ಗದಲ್ಲಿ ಬರುವ ಬೃಹತ್‌ ಮೈದಾನಗಳಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ವಾಯುನೆಲೆ ಸುತ್ತಮುತ್ತ ಎರಡು ಪಾರ್ಕಿಂಗ್‌ ತಾಣಗಳು. ಗಡಿ ಭದ್ರತಾ ಪಡೆ ಕ್ಯಾಂಪಸ್‌, ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣ, ಅರಮನೆ ಮೈದಾನ, ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆ ವಾಯುಪಡೆ ಅಧಿಕಾರಿಗಳು ಹೊಂದಿದ್ದಾರೆ.

ಕೊರೋನಾ ನಡುವೆ ಯಶಸ್ವಿ ಏರ್ ಶೋ
2021ರಲ್ಲಿ ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಿತ್ತು. ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಜೊತೆಗೆ ವಿಶ್ವದಲ್ಲೇ ಪ್ರಮುಖ ಉತ್ಪಾದಕ ಹಾಗೂ ರಫ್ತುದಾರ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಈ ಯುಗದಲ್ಲಿ ವಿಶ್ವಮಟ್ಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಕುರಿತು ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿದ್ದರು.
 

click me!