
ನವದೆಹಲಿ(ಜೂ.01): ಕೊರೋನಾ ವೈರಸ್ , ಲಡಾಖ್ ಗಡಿಯಲ್ಲಿ ಚೀನಾ ಸೇನೆ ತಕರಾರು ಸೇರಿದಂತೆ ಹಲವು ಕಾರಣಗಳಿಂದ ಇದೀಗ ಚೀನಾ ವಿರುದ್ಧ ಭಾರತೀಯರು ಸಿಡಿದೆದ್ದಿದ್ದಾರೆ. ಚೀನಾಗೆ ಆರ್ಥಿಕವಾಗಿ ಹೊಡೆತ ನೀಡಲು ಭಾರತೀಯರು ಕಾರ್ಯಚರಣೆ ಆರಂಭಿಸಿದ್ದಾರೆ. ಚೀನಾ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್‌ಗಳಿಗೆ ಗುಡ್ ಬೈ ಸೇರಿದಂತೆ ಹಲವು ವಿಧಾನದ ಮೂಲಕ ಚೀನಾಗೆ ತಿರುಗೇಟು ನೀಡುತ್ತಿದ್ದಾರೆ. ಟಿಕ್‌ಟಾಕ್ ಸೇರಿದಂತೆ ಹಲವು ಚೀನಾ ಆ್ಯಪ್‌ಗಳನ್ನು ಭಾರತೀಯರು ಡಿಲೀಟ್ ಮಾಡುತ್ತಿದ್ದಾರೆ.
ಚೀನಿ ವಸ್ತು ಬಹಿಷ್ಕರಿಸಲು ವಾಂಗ್‌ಚುಕ್ ಕರೆ; ಟಿಕ್‌ಟಾಕ್ ಡಿಲೀಟ್ ಮಾಡಿದ ಮಿಲಿಂದ್ ಸೋಮನ್!
ಆದರೆ ಹಲವರಿಗೆ ತಮ್ಮ ಮೊಬೈಲ್‌ನಲ್ಲಿ ಚೀನಾ ಆ್ಯಪ್ ಯಾವುದು ಎಂದೇ ಗುರುತಿಸುವುದು ಕಷ್ಟವಾಗಿದೆ. ಇದಕ್ಕಾಗಿ ಜೈಪೂರ ಮೂಲದ ಸ್ಟಾರ್ಟ್ ಅಪ್ ಕಂಪನಿ ರಿಮೂವ್ ಚೀನಾ ಆ್ಯಪ್ ಅನ್ನೋ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಈ ಆ್ಯಪ್ ಇದೀಗ ಭಾರತದಲ್ಲಿ ಪ್ರಖ್ಯಾತಿ ಹೊಂದಿದೆ. 15 ದಿನದಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮಂದಿ ಡೌನ್ಲೋಡ್ ಮಾಡಿದ್ದಾರೆ.
ಲಡಾಖ್ ಗಡಿಯಲ್ಲಿ ಚೀನಾ ಯುದ್ದ ವಿಮಾನ ಹಾರಾಟ; ಯುದ್ಧದ ಕಾರ್ಮೋಡ!
ಬಿಡುಗಡೆಯಾದ ಎರಡೇ ವಾರದಲ್ಲಿ ಗೂಗಲ್ ಪ್ಲೋ ಸ್ಟೋರ್‌ನಲ್ಲಿ 4.8 ರೇಟಿಂಗ್ ಪಡೆದಿದೆ. ಪ್ರಧಾನಿ ಮೋದಿ ಸ್ವಾವಲಂಬಿ ಭಾರತ ನಿರ್ಮಾಣ ಸೇರಿದಂತೆ ಹಲವು ಕಾರಣಗಳಿಂದ ಇದೀಗ ಭಾರತದ ಉತ್ಪನ್ನಗಳ ಖರೀದಿಗೆ ಜನ ಮನಸ್ಸು ಮಾಡಿದ್ದಾರೆ. ವಿದೇಶಿ ಅದರಲ್ಲೂ ಚೀನಾ ವಸ್ತುಗಳಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಚೀನಾ ಕ್ಯಾತೆ: ಮೋದಿ ಉನ್ನತ ಮಟ್ಟದ ತುರ್ತು ಸಭೆ!.
ರಿಮೂವ್ ಚೀನಾ ಆ್ಯಪ್ ಸುಲಭವಾಗಿ, ನಿಮ್ಮ ಮೊಬೈಲ್‌ನಲ್ಲಿರುವ ಚೀನಾ ಮೂಲದ ಆ್ಯಪ್‌ಗಳನ್ನು ಪತ್ತೆ ಹಚ್ಚಿಕೊಡಲಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ರಿಮೂವ್ ಚೀನಾ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಭಾರತದ ಆ್ಯಪ್ ನಿಮ್ಮ ಮೊಬೈಲ್‌ನಲ್ಲಿ ಇನ್ಸ್‌ಸ್ಟಾಲ್ ಆದ ಬಳಿಕ, ಕ್ಲಿಕ್ ಮಾಡಿ ಆ್ಯಪ್ ಒಪನ್ ಮಾಡಬೇಕು. ಈ ಆ್ಯಪ್‌ನಲ್ಲಿ ಸ್ಕಾನ್ ಅನ್ನೋ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಚೀನಾ ಆ್ಯಪ್‌ಗಳ ಪಟ್ಟಿ ನೀಡುತ್ತದೆ. ಬಳಿಕ ಯಾವ ಆ್ಯಪ್ ಡಿಲೀಟ್ ಮಾಡಬೇಕು, ಆ ಅ್ಯಪ್ ಮುಂಭಾಗದಲ್ಲಿ ಅನ್‌ಇನ್ಸ್‌ಸ್ಟಾಲ್ ಬಟನ್ ಕ್ಲಿಕ್ ಮಾಡಿದರೆ ಸಾಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ