ಶಾಲೆ ಆರಂಭಕ್ಕೆ ಪೋಷಕರ ವಿರೋಧ, ಅನ್‌ಲೈನ್ ಅರ್ಜಿಗೆ 24 ಗಂಟೆಯಲ್ಲಿ 2 ಲಕ್ಷ ಸಹಿ!

Suvarna News   | Asianet News
Published : Jun 01, 2020, 07:18 PM ISTUpdated : Jun 01, 2020, 07:27 PM IST
ಶಾಲೆ ಆರಂಭಕ್ಕೆ ಪೋಷಕರ ವಿರೋಧ, ಅನ್‌ಲೈನ್ ಅರ್ಜಿಗೆ 24 ಗಂಟೆಯಲ್ಲಿ 2 ಲಕ್ಷ ಸಹಿ!

ಸಾರಾಂಶ

ಅನ್‌ಲಾಕ್ 1 ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಲವು ಕ್ಷೇತ್ರಗಳು ಪುನರ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇನ್ನೂ ಶಾಲಾ ಕಾಲೇಜು ಜೂನ್ 30ರ ಬಳಿಕ ಆರಂಭಿಸಲು ಸೂಚಿಸಲಾಗಿದೆ. ಈ ನಿರ್ಧಾರದ ವಿರುದ್ದ ಮಕ್ಕಳ ಪೋಷಕರು ಗುಡುಗಿದ್ದಾರೆ. ಬರೋಬ್ಬರಿ 2 ಲಕ್ಷ ಹೆಚ್ಚು ಪೋಷಕರು ಸಹಿ ಹಾಕಿ ನಿರ್ಧಾರ ಬದಲಿಸಲು ಒತ್ತಾಯಿಸಿದ್ದಾರೆ.

ನವದೆಹಲಿ(ಜೂ.01): ಲಸಿಕೆ ಸಿಕ್ಕಲ್ಲ, ಶಾಲೆ ಆರಂಭವೂ ಬೇಡ. ಇದು ಪೋಷಕರ ಅಭಿಯಾನ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್‌ಲಾಕ್ 1 ಮಾರ್ಗಸೂಚಿಯಲ್ಲಿ ಶಾಲಾ ಕಾಲೇಜು ಜೂನ್ 30 ಬಳಿಕ ಆರಂಭವಾಗಲಿದೆ ಎಂದಿದ್ದಾರೆ. ಇದಕ್ಕೆ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ವೇಳೆ  ಕೇಂದ್ರ ಸರ್ಕಾರ ಶಾಲಾ ಆರಂಭಿಸುವ ನಿರ್ಧಾರ ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೋನಾದಿಂದ ತತ್ತರಿಸಿರುವ ಜನತೆಗೆ ವೈದ್ಯನ ಗುಡ್‌ನ್ಯೂಸ್!

ಮಕ್ಕಳ ಪೋಷಕರ ಸಂಘ ಇದೀಗ ಜುಲೈ ತಿಂಗಳಲ್ಲಿ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಚೇಂಜ್.ಆರ್ಗ್ ಆನ್‌ಲೈನ್ ಮೂಲಕ ಪೋಷಕರು ಆನ್‌ಲೈನ್ ಸಹಿ ಸಂಗ್ರಹಿಸಿದ್ದಾರೆ. ಕೇವಲ 24 ಗಂಟೆಯಲ್ಲಿ 2.13 ಲಕ್ಷ ಪೋಷಕರು ಸಹಿ ಹಾಕಿದ್ದಾರೆ. ನೋ ವ್ಯಾಕ್ಸಿನ್, ನೋ ಸ್ಕೂಲ್ ಎಂದು ಆನ್‌ಲೈನ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. 

120 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿ: ಕೊರೋನಾ ಲಸಿಕೆ ಎಲ್ಲಿಗೆ ಬಂತು?

ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೂನ್ ತಿಂಗಳಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಷ್ಟೇ ಅಲ್ಲ ಇದುವರಗೂ ಲಸಿಕೆ ಕೂಡ ಕಂಡು ಹಿಡಿದಿಲ್ಲ. ಹೀಗಾಗಿ ಜುಲೈ ತಿಂಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸುರಕ್ಷಿತವಲ್ಲ ಎಂದು ಪೋಷಕರು ಹೇಳಿದ್ದಾರೆ. ಈ ಕಾರಣದಿಂದ ಕೇಂದ್ರ ಸರ್ಕಾರ ಶಾಲಾ ಕಾಲೇಜು ಆರಂಭದಲ್ಲಿ ಪುನರ್ ಪರೀಶೀಲನೆ ನಡೆಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?