20 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಮೋದಿ ವಿರುದ್ಧ ಕವಿತೆ ಮೂಲಕ ರಾಹುಲ್ ಕಿಡಿ

By Suvarna NewsFirst Published Aug 7, 2020, 11:21 AM IST
Highlights

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಕವಿತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಹಳೆಯ ಟ್ವೀಟ್‌ ಶೇರ್ ಮಾಡಿದ ರಾಹುಲ್ ಗಾಂಧಿ ತಮ್ಮ ಊಹೆ ನಿವಾಗಿದೆ ಎಂದಿದ್ದಾರೆ.

ನವದೆಹಲಿ(ಆ.07): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಳೆಯ ಟ್ವೀಟ್‌ ಶೇರ್ ಮಾಡಿದ ರಾಹುಲ್ ಗಾಂಧಿ ತಮ್ಮ ಊಹೆ ನಿವಾಗಿದೆ ಎಂದಿದ್ದಾರೆ.

ಆಸಗ್ಟ್‌ 10ರ ಒಳಗೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲಿದೆ ಎಂದು ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದರು. ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಭಾರತ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, '20 ಲಕ್ಷದ ಗಡಿ ದಾಟಿತು, ಮೋದಿ ಸರ್ಕಾರ ಕಾಣೆಯಾಯ್ತು' ಎಂದು ಕವಿತೆ ಮೂಲಕ ಟಾಂಗ್ ಕೊಟ್ಟಿದ್ದಾರೆ.

ಚೀನಾಗೆ ಟ್ರಂಪ್ ಬಿಗ್‌ ಪಂಚ್..! ಅಮೆರಿಕದಲ್ಲಿ ಟಿಕ್‌ಟಾಕ್ ಜೊತೆ ವಿಚಾಟ್‌ ಕೂಡಾ‌ ಬ್ಯಾನ್..!

ಜುಲೈ 17ರಂದು ಭಾರತದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ10 ಲಕ್ಷ ದಾಟಿತ್ತು. ಆ ಸಂದರ್ಭ ಕೇರಳ ವಯನಾಡಿನ ಸಂಸದರೂ ಆಗಿರುವ ರಾಹುಲ್ ಗಾಂಧಿ ಆಗಸ್ಟ್ 10ಕ್ಕಾಗುವಾಗ ಇನ್ನೂ 10 ಲಕ್ಷ ಪ್ರಕರಣಳು ಹೆಚ್ಚಾಗಲಿದೆ ಎಂದು ಟ್ವೀಟ್ ಮಾಡಿದ್ದರು.

ದೇಶದಲ್ಲೀಗ 20 ಲಕ್ಷ ಮಂದಿ ಕೊರೋನಾ ಸೋಂಕಿತರು..!

ಹಳೆಯ ಟ್ವೀಟ್ ಶೇರ್ ಮಾಡಿದ ರಾಹುಲ್ ಗಾಂಧಿ ತಮ್ಮ ಊಹೆ ನಿಜವಾಗಿತ್ತು ಎಂಬುದನ್ನು ನೆನಪಿಸಿದ್ದಾರೆ. ಕೊರೋನಾ ಸೋಂಕು ಇದೇ ವೇಗದಲ್ಲಿ ಹೆಚ್ಚಾದರೆ ಅಗಸ್ಟ್‌ನಲ್ಲಿ 20 ಲಕ್ಷ ದಾಟಲಿದೆ ಎಂದು ಬರೆದುಕೊಂಡಿದ್ದರು.

ಕೊರೋನಾ ಔಷಧ ಫ್ಯಾವಿಪಿರಾವಿರ್ ಭಾರತದಲ್ಲಿ ಬಿಡುಗಡೆ; ಪ್ರತಿ ಮಾತ್ರೆಗೆ 49 ರೂ!

ಕೊರೋನಾ ಅಟ್ಟಹಾಸದ ಮಧ್ಯೆ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಟೀಕಿಸುತ್ತಲೇ ಬಂದಿದ್ದಾರೆ. ಸುದ್ದಿ ತುಣುಕುಗಳೂ, ವರದಿಗಳನ್ನೂ ಶೇರ್ ಮಾಡಿಕೊಂಡು, ತಜ್ಞರ ಜೊತೆ ಚರ್ಚಿಸಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುತ್ತಿದ್ದಾರೆ. 

20 लाख का आँकड़ा पार,
ग़ायब है मोदी सरकार। https://t.co/xR9blQledY

— Rahul Gandhi (@RahulGandhi)
click me!