ಶೈಕ್ಷಣಿಕ ಸಮಾವೇಶದಲ್ಲಿಂದು ಪ್ರಧಾನಿ ಮೋದಿ ಭಾಷಣ

By Kannadaprabha NewsFirst Published Aug 7, 2020, 10:31 AM IST
Highlights

ನೂತನ ಶಿಕ್ಷಣ ನೀತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಗಾರವೊಂದರಲ್ಲಿ ಇಂದು ಬೆಳಗ್ಗೆ 11 ಗಂಟೆಗ ಮಾತನಾಡಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ನವದೆಹಲಿ(ಆ.07): ಇತ್ತೀಚೆಗೆ ನೂತನ ಶಿಕ್ಷಣ ನೀತಿ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಅದರ ಅನುಷ್ಠಾನದ ಸಿದ್ಧತೆಯಲ್ಲಿ ತೊಡಗಿದೆ. 

ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾದ ರಾಷ್ಟ್ರೀಯ ಕಮ್ಮಟದಲ್ಲಿ ಶುಕ್ರವಾರ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ‘ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣ ಬದಲಾವಣೆ’ ಹೆಸರಿನ ಕಮ್ಮಟ ಇದಾಗಿದ್ದು, ಯುಜಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವಾಲಯಗಳು ಇದನ್ನು ಹಮ್ಮಿಕೊಂಡಿವೆ.

PM ⁦⁩ to deliver inaugural address at the ‘Conclave on Transformational Reforms in Higher Education under National Education Policy’ at 11 AM today, 7th August. https://t.co/7oL4Rz4oDL

via NaMo App pic.twitter.com/bSPSapWM0j

— PMO India (@PMOIndia)

2022 ಕ್ಕೆ ಪ್ರಿಯಾಂಕಾ ಇನ್‌ ಉತ್ತರ ಪ್ರದೇಶ?

ಇದರಲ್ಲಿ ಮಹತ್ವಾಕಾಂಕ್ಷಿ ಶಿಕ್ಷಣ ನೀತಿಯ ಬಗ್ಗೆ ಚರ್ಚೆ ನಡೆಯಲಿದೆ. ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣದ ಮಹತ್ತರ ಬದಲಾವಣೆಯ ಉದ್ದೇಶವನ್ನು ಶಿಕ್ಷಣ ನೀತಿ ಹೊಂದಿದೆ. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತು. ಇದಾಗಿ ಬರೋಬ್ಬರಿ 34 ವರ್ಷಗಳ ಬಳಿಕ ಶಿಕ್ಷಣ ನೀತಿಗೆ ಬದಲಾವಣೆ ತರಲಾಗಿದೆ. ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ನಿರ್ದೇಶಕರು, ಎಲ್ಲಾ ಕಾಲೇಜುಗಳು ಪ್ರಾಂಶುಪಾಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

click me!