ಲಾಲು ಏನಾದ್ರೂ ಹೊರಗೆ ಬಂದರೆ ಬಿಹಾರ ಚುನಾವಣೆಯ ವಾತಾವರಣವೇ ಅದಲುಬದಲು..!

By Suvarna NewsFirst Published Aug 7, 2020, 10:44 AM IST
Highlights

ಕರ್ಪೂರಿ ಠಾಕೂರ್‌ ಕಾಲವಾದ ನಂತರ ಬಿಹಾರದ ರಾಜಕಾರಣ ಅರ್ಥವಾಗೋದು ಇಬ್ಬರಿಗೆ ಮಾತ್ರ. ಒಬ್ಬರು ನಿತೀಶ್‌ ಕುಮಾರ್‌, ಇನ್ನೊಬ್ಬರು ಲಾಲು ಪ್ರಸಾದ್‌ ಯಾದವ್‌. ನಿತೀಶ್‌ ಮೈದಾನದಲ್ಲಿದ್ದಾರೆ, ಆದರೆ ಲಾಲು ಜೈಲಿನಲ್ಲಿದ್ದಾರೆ. 

ನವದೆಹಲಿ (ಆ. 07): ಕರ್ಪೂರಿ ಠಾಕೂರ್‌ ಕಾಲವಾದ ನಂತರ ಬಿಹಾರದ ರಾಜಕಾರಣ ಅರ್ಥವಾಗೋದು ಇಬ್ಬರಿಗೆ ಮಾತ್ರ. ಒಬ್ಬರು ನಿತೀಶ್‌ ಕುಮಾರ್‌, ಇನ್ನೊಬ್ಬರು ಲಾಲು ಪ್ರಸಾದ್‌ ಯಾದವ್‌. ನಿತೀಶ್‌ ಮೈದಾನದಲ್ಲಿದ್ದಾರೆ, ಆದರೆ ಲಾಲು ಜೈಲಿನಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಎನ್‌ಡಿಎಗೆ ನೀತಿಶ್‌ ಇದ್ದಾರೆ, ಮೋದಿಯೂ ಬರುತ್ತಾರೆ.

2022 ಕ್ಕೆ ಪ್ರಿಯಾಂಕಾ ಇನ್‌ ಉತ್ತರ ಪ್ರದೇಶ?

ಆದರೆ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಬಳಿ ಯಾರೂ ಇಲ್ಲ. ಹೀಗಾಗಿ ಜೈಲಿನಲ್ಲಿರುವ ಲಾಲು ಯಾದವ್‌ರನ್ನು ಹೇಗಾದರೂ ಮಾಡಿ ಹೊರಗೆ ಕರೆದುಕೊಂಡು ಬರುವ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಲಾಲು ಜಾರ್ಖಂಡ್‌ನ ಶಿಬು ಸೊರೇನ್‌ ಸರ್ಕಾರದ ಕೃಪೆಯಿಂದ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್‌ ಆಗಿದ್ದಾರೆ. ಲಾಲು ಏನಾದರೂ ಹೊರಗೆ ಬಂದರೆ ಬಿಹಾರದ ಚುನಾವಣೆಯ ವಾತಾವರಣವೇ ಬದಲಾಗಲಿದೆ. ಲಾಲುಗಿರುವ ಪೊಲಿಟಿಕಲ್ ಮಸ್ತಿಷ್ಕ ಮಕ್ಕಳಿಗೆ ಇಲ್ಲ. ಲಾಲುಗೆ ಮತ್ತು ಆಲೂಗೆ ಪರ್ಯಾಯ ಇಲ್ಲ ನೋಡಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!