ಯೋಗಿ ಕ್ಷೇತ್ರಕ್ಕೆ ತೆರಳಲಿದ್ದಾರೆ ಮೋದಿ, ಮುಂದಿನ ಪ್ರಧಾನಿ ಅಭ್ಯರ್ಥಿ ದೀದಿ: ಡಿ.4ರ ಟಾಪ್ 10 ಸುದ್ದಿ!

Published : Dec 04, 2021, 05:09 PM ISTUpdated : Dec 04, 2021, 05:47 PM IST
ಯೋಗಿ ಕ್ಷೇತ್ರಕ್ಕೆ ತೆರಳಲಿದ್ದಾರೆ ಮೋದಿ, ಮುಂದಿನ ಪ್ರಧಾನಿ ಅಭ್ಯರ್ಥಿ ದೀದಿ: ಡಿ.4ರ ಟಾಪ್ 10 ಸುದ್ದಿ!

ಸಾರಾಂಶ

ಕನ್ನಡದ ಹಿರಿಯ ನಟ ಶಿವರಾಂ ನಿಧನರಾಗಿದ್ದಾರೆ. ಡಿಸೆಂಬರ್ 7 ರಂದು ಗೋರಖ್ ಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲಾಗಿದೆ. 15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ ನೀತಿ ಜಾರಿಯಾಗಿದೆ.  62 ರನ್‌ಗೆ ನ್ಯೂಜಿಲೆಂಡ್ ಆಲೌಟ್, ಮಮತಾಗೆ ಮುಂದಿನ ಪ್ರಧಾನಿ ಅಭ್ಯರ್ಥಿ ಇಂಗಿತ ಸೇರಿದಂತೆ ಡಿಸೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Sandalwood Actor Shivaram Passes Away : ಹಿರಿಯ ಕನ್ನಡ ನಟ ಶಿವರಾಂ ಇನ್ನಿಲ್ಲ

ಹಿರಿಯ ನಟ ಶಿವರಾಂ (84) (Shivaram) ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಏಟಾಗಿದ್ದು, ಮೆದುಳು ನಿಷ್ಕ್ರೀಯವಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ಒಮಿಕ್ರೋನ್ ಬಗ್ಗೆ ಭಯ ಬೇಡ ಎಂದ WHO ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್

ಅತ್ಯಂತ ಅಪಾಯಕಾರಿ ವೈರಸ್‌ ಎಂದು ಬಣ್ಣಿಸಲಾಗಿರುವ ಕೊರೊನಾ ವೈರಸ್ ನ ರೂಪಾಂತರದ ಒಮಿಕ್ರೋನ್ ವೈರಸ್‌ ಬಗ್ಗೆ ಜನರು ಭಯಭೀತರಾಗುವ ಅಗತ್ಯ ಇಲ್ಲ ಎಂದು  ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ (WHO Scientist) ಡಾ.ಸೌಮ್ಯ ಸ್ವಾಮಿನಾಥನ್ ( Dr Soumya Swaminathan) ಹೇಳಿದ್ದಾರೆ. 

PM candidate from TMC: ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ

2024ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿಯಾಗುವ ಆಕಾಂಕ್ಷೆ ಹೊಂದಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ತಮ್ಮ ಈ ಕನಸನ್ನು ಶುಕ್ರವಾರ ತಮ್ಮ ದ ಮುಖವಾಣಿ ಮೂಲಕ ಹೊರಹಾಕಿದ್ದಾರೆ. ಅವರ ಈ ಅಭಿಲಾಷೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

IND vs NZ Test:ನ್ಯೂಜಿಲೆಂಡ್ 62 ರನ್‌ಗೆ ಆಲೌಟ್, ಭಾರತ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಕುಸಿದ ಕಿವೀಸ್!

ಮೊಹಮ್ಮದ್ ಸಿರಾಜ್(Mohammed Siraj) ಹಾಗೂ ಆರ್ ಅಶ್ವಿನ್(R ashwin) ದಾಳಿಗೆ ನ್ಯೂಜಿಲೆಂಡ್ ತಂಡ ತತ್ತರಿಸಿದೆ. ಪರಿಣಾಮ ಟೀಂ ಇಂಡಿಯಾ(Team India) ವಿರುದ್ಧದ ಮುಂಬೈ ಟೆಸ್ಟ್(Mumbai Test) ಪಂದ್ಯದಲ್ಲಿ ಕೇವಲ 62 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಹಿನ್ನಡೆ ಅನುಭವಿಸಿದೆ. ಭಾರತದ ವಿರುದ್ದ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿಗೆ ನ್ಯೂಜಿಲೆಂಡ್ ಪಾತ್ರವಾಗಿದೆ. 

Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

ದಿಶಾ ಪಟಾನಿ (Disha Patani) ಈ ಹೆಸರು ಕೇಳಿದ ಕೂಡಲೇ ಹುಡುಗರ ಹಾರ್ಟ್‌ ಬೀಟ್ ಒಂದು ಕ್ಷಣ ಹೆಚ್ಚಾಗೋದು ಗ್ಯಾರಂಟಿ! ಇನ್ನು ದಿಶಾ ಪಟಾನಿ ಡ್ಯಾನ್ಸ್ (Dance) ಅಂದ್ರೆ ಕೇಳ್ಬೇಕಾ..? ಇತ್ತೀಚಿಗೆ ಫ್ರೆಂಡ್ಸ್ ಜೊತೆ ಮಾಡಿದ ಡ್ಯಾನ್ಸ್ ವಿಡಿಯೋವನ್ನು ದಿಶಾ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಎಲ್ಲರನ್ನ ಮನ ಗೆದ್ದಿದೆ. ಈ ವಿಡಿಯೋ ವೈರಲ್ ಅಗುತ್ತಿದೆ. 

Complaint Against Home Minister : ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ಲಂಚ (Bribe) ತಿನ್ಕೊಂಡು ಬಿದ್ದಿರ್ತಾರೆ ನಾಯಿ ಹಂಗೆ ಎಂಜಲು ಕಾಸಿಗಾಗಿ ಆಸೆ ಪಡುತ್ತಾರೆಂದು ಪೊಲೀಸರ ಬಗ್ಗೆ ಮಾತನಾಡಿದ  ಗೃಹ ಸಚಿವ  ಆರಗ ಜ್ಞಾನೇಂದ್ರ (Home Minister Araga Jnanendra) ವಿರುದ್ಧ ದೂರು ದಾಖಲಿಸಲಾಗಿದೆ.  ಚಿಕ್ಕಮಗಳೂರು (chikkamagaluru) ಜಿಲ್ಲೆ ಕೊಪ್ಪ ಪೊಲೀಸ್ ಠಾಣೆಯಲ್ಲಿ (Police Station) ಸಚಿವರ ವಿರುದ್ಧ ದೂರು ದಾಖಲಾಗಿದೆ.  ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಇಂದು ದೂರು ದಾಖಲು ಮಾಡಿದ್ದಾರೆ. ಗೃಹ ಸಚಿವರ ಹೇಳಿಕೆಯಿಂದ ಸಾರ್ವಜನಿಕರಿಗೆ (Publics) ಪೊಲೀಸರ ಮೇಲೆ ಗೌರವ ಕಡಿಮೆಯಾಗುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ

ಭಾರತೀಯ ಜೀವ ವಿಮಾ ನಿಗಮ (LIC) ಐಪಿಒಗೆ(IPO) ಸಿದ್ಧತೆ ನಡೆಸುತ್ತಿದ್ದು, ಶೇ.10 ಭಾಗವನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಮಾಹಿತಿ ನವೀಕರಿಸುವಂತೆ ಹಾಗೂ ಡಿಮ್ಯಾಟ್ ಖಾತೆ ತೆರೆಯುವಂತೆ ಪಾಲಿಸಿದಾರರಿಗೆ ಸೂಚಿಸಿದೆ.

Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

ಪೆಟ್ರೋಲ್ ಅಥವಾ ಡೀಸೆಲ್(Petrol Diesel), ವಾಹನ ಯಾವುದೇ ಆದರೂ 15 ವರ್ಷಕ್ಕಿಂತ ಹಳೆಯ ವಾಹನವಾದರೆ(Old vehilce) ಗುಜುರಿಗೆ ಹಾಕಬೇಕು. ಕದ್ದು ಮುಚ್ಚಿ ರಸ್ತೆಗಳಿಸಿದರೂ ದಂಡ, ಪಾರ್ಕ್ ಮಾಡಿದರೂ ದಂಡ.  ಪಾರ್ಕ್ ಮಾಡಿದ 15 ವರ್ಷ ಹಳೆ ಕಾರನ್ನು ಪಾರ್ಕ್ ಮಾಡಿದಲ್ಲಿಂದ ಎತ್ತಿ ಪೊಲೀಸರೇ ಗುಜುರಿಗೆ ಹಾಕಲಿದ್ದಾರೆ.

Fertilizer plant: 3 ದಶಕಗಳ ಬಳಿಕ ಗೋರಖ್‌ಪುರ ರಸಗೊಬ್ಬರ ಸ್ಥಾವರ ರೀ ಓಪನ್, ಯೋಗಿ ತಾಯ್ನಾಡಿಗೆ ಉಡುಗೊರೆ

ಡಿಸೆಂಬರ್ 7 ರಂದು ಗೋರಖ್ ಪುರಕ್ಕೆ ಭೇಟಿ ನೀಡುವ ಪ್ರಧಾನಿ ಮೋದಿ ಅವರು 9,600 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಪಿಎಂಒ (PMO) ಶುಕ್ರವಾರ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana