ಬೆಂಗಳೂರು (ಆ.9): ತೆರಿಗೆ ವಿವಾದ ಪರಿಹಾರ ಆಗುವವರೆಗೂ ಭಾರತದ ಜತೆಗೆ ವ್ಯಾಪಾರ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆ.25ರಂದು ಭಾರತ-ಅಮೆರಿಕ ಮುಂದಿನ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುವುದೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:13 PM (IST) Aug 09
ರೈಸನ್‌ನ ಖಾಸಗಿ ಶಾಲೆಯೊಂದು ನರ್ಸರಿ ಮಕ್ಕಳಿಗೆ 'ಕೆ ಫಾರ್ ಕಾಬಾ', 'ಎಂ ಫಾರ್ ಮಸೀದಿ' ಇತ್ಯಾದಿ ಉರ್ದು ಪದಗಳನ್ನು ಕಲಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪೋಷಕರು ಮತ್ತು ABVP ಪ್ರತಿಭಟಿಸಿದ್ದು, ಶಾಲೆ ತಪ್ಪೊಪ್ಪಿಕೊಂಡಿದೆ.
09:56 PM (IST) Aug 09
ರಾಹುಲ್ ಗಾಂಧಿಯವರ 'ಮತ ಕಳ್ಳತನ' ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. ಚುನಾವಣಾ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
08:17 PM (IST) Aug 09
07:02 PM (IST) Aug 09
ರಾಹುಲ್ ಗಾಂಧಿಯವರ ನಕಲಿ ಮತದಾರರ ಆರೋಪಕ್ಕೆ ಮಾಜಿ ಚುನಾವಣಾ ಆಯುಕ್ತ ಒಪಿ ರಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ ಎಂಬ ಆರೋಪದ ತನಿಖೆಗೆ ಒತ್ತಾಯಿಸಿದ್ದಾರೆ.
06:43 PM (IST) Aug 09
ಭಾರತದಲ್ಲಿ ಹೆಚ್ಚಿನ ಆದಾಯ ನೀಡುವ ಸುರಕ್ಷಿತ ಹೂಡಿಕೆಗಳು ಯಾವುದು ಎಂದು ಹುಡುಕುತ್ತಾ ಇದ್ದೀರಾ? ಹಾಗಿದ್ದರೆ ಇಲ್ಲಿ ನಿಮಗಾಗಿ 16 ಸುರಕ್ಷಿತ ಹೂಡಿಕೆಗಳ ಪಟ್ಟಿ ನೀಡಲಾಗಿದೆ. ಇದರ ಫುಲ್ ಡಿಟೇಲ್ಸ್ ಇಲ್ಲಿದೆ...
06:30 PM (IST) Aug 09
06:09 PM (IST) Aug 09
ಓಡಿ ಹೋಗುವಾಗ ಸಹೋದರಿಯರಾಗಿದ್ದವರು ವಾಪಸ್ ಬಂದಾಗ ಪತಿ-ಪತ್ನಿಯಾಗಿರುವ ವಿಚಿತ್ರ ಘಟನೆ ನಡೆದಿದೆ. ಅಸಲಿಗೆ ಆಗಿದ್ದೇನು? ಏನಿದು ಅಕ್ಕ-ತಂಗಿ ಸ್ಟೋರಿ?
01:13 PM (IST) Aug 09
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಐದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ಒಂದು ದೊಡ್ಡ ವಿಮಾನವನ್ನು ಹೊಡೆದುರುಳಿಸಿದೆ. ಕ್ಷಿಪಣಿ ದಾಳಿಯಲ್ಲಿ ಹ್ಯಾಂಗರ್‌ನಲ್ಲಿದ್ದ ಎರಡು ಯುದ್ಧವಿಮಾನಗಳು ನಾಶವಾಗಿವೆ.
11:01 AM (IST) Aug 09
ಐಸಿಐಸಿಐ ಬ್ಯಾಂಕ್ 2025ರ ಆಗಸ್ಟ್ 1ರಿಂದ ಹೊಸ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅನ್ನು ಗಣನೀಯವಾಗಿ ಹೆಚ್ಚಿಸಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ₹50,000, ಅರೆ ನಗರಗಳಲ್ಲಿ ₹25,000 ಮತ್ತು ಗ್ರಾಮೀಣ ಶಾಖೆಗಳಲ್ಲಿ ₹10,000 ಕನಿಷ್ಠ ಬ್ಯಾಲೆನ್ಸ್ ಇರಬೇಕು.
07:40 AM (IST) Aug 09
ತೆರಿಗೆ ವಿವಾದ ಪರಿಹಾರ ಆಗುವವರೆಗೂ ಭಾರತದ ಜತೆಗೆ ವ್ಯಾಪಾರ ವಿಚಾರದಲ್ಲಿ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
07:39 AM (IST) Aug 09
ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಾರ್ಯಕರ್ತರು ದಕ್ಷಿಣ ಭಾರತದ ಇಡ್ಲಿ ಹೋಟೆಲ್ ಮಾಲೀಕನೊಬ್ಬನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
07:39 AM (IST) Aug 09
ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಇದರ ಹಿಂದೆ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.
07:39 AM (IST) Aug 09
‘ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಿಂದ ಆಕಾಶವಾಣಿಯು ಆರಂಭವಾದ ದಿನದಿಂದ ಇದುವರೆಗೆ 34.13 ಕೋಟಿ ರು. ಆದಾಯ ಗಳಿಸಿದೆ’ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದೆ.
07:38 AM (IST) Aug 09
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ್ದಾರೆ. ಇದು ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಸ್ಪಷ್ಟ ಪರ್ಯಾಯವಾಗಿದೆ. ಈ ಮೂಲಕ, ತಮಿಳುನಾಡು ತನ್ನದೇ ಆದ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎನಿಸಿಕೊಂಡಿದೆ.
07:38 AM (IST) Aug 09
ಪಹಲ್ಗಾಂ ದಾಳಿ ಬಳಿಕದ ಭಾರತ-ಪಾಕ್ ನಡುವಿನ ಸಂಘರ್ಷ ನಿಲ್ಲಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರ ಪಾತ್ರವಹಿಸಿದ್ದರು ಎಂದು ಇದೀಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಕೂಡ ಹೇಳಿದ್ದಾರೆ.
07:37 AM (IST) Aug 09
ಭಾರತ ಮತ್ತು ರಷ್ಯಾ ಸಂಬಂಧದಿಂದ ಕುಪಿತರಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಬರೆ ಹಾಕುತ್ತಿರುವ ಹೊತ್ತಲ್ಲೇ, ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿದ್ದಾರೆ.
07:37 AM (IST) Aug 09
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ‘ಮತ ಚೋರಿ’ ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ದೇಶವ್ಯಾಪಿ ಆಂದೋಲನ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಬಗ್ಗೆ ಪಕ್ಷದ ಕಾರ್ಯತಂತ್ರದ ಕುರಿತು ಸೋಮವಾರ ಸಂಜೆ 4ಕ್ಕೆ ಸಭೆ ನಡೆಯಲಿದೆ.
07:37 AM (IST) Aug 09
ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ.