ಬೆಂಗಳೂರು (ಜುಲೈ 26): ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ದ್ವೀಪದೇಶ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಉಭಯ ದೇಶಗಳ ಬಿಕ್ಕಟ್ಟಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ನೀಡಿದ ಮೊದಲ ಭೇಟಿ ಯಶಸ್ಸು ಕಂಡಿದ್ದು, ಎರಡೂ ದೇಶಗಳ ಮಧ್ಯೆ ಸ್ನೇಹದ ಬೆಸುಗೆ ಏರ್ಪಟ್ಟಿದೆ. ಇದರ ಬೆನ್ನಲ್ಲಿಯೇ ಭಾರತ 4850 ಕೋಟಿ ರೂಪಾಯಿ ಸಾಲವನ್ನು ಮಾಲ್ಡೀವ್ಸ್‌ಗೆ ನೀಡಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
08:42 PM (IST) Jul 26
06:50 PM (IST) Jul 26
06:38 PM (IST) Jul 26
05:00 PM (IST) Jul 26
ಸ್ನೇಹಿತೆಯ ವಿಚಾರದಲ್ಲಿ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಇದೇ ವೇಳೆ ಹೈದರಾಬಾದ್‌ನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.
04:41 PM (IST) Jul 26
Islam To Hindu: ಇಬ್ಬರು ಮುಸ್ಲಿಂ ಮಹಿಳೆಯರು ಸನಾತನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವೈದಿಕ ಸಂಪ್ರದಾಯದಂತೆ ಹೋಮ ಹವನ ನೆರವೇರಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
04:04 PM (IST) Jul 26
ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ನಿಜ ಬದುಕಿನ ಉದಾಹರಣೆಗಳೊಂದಿಗೆ ವಿವರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ. ಒಬ್ಬ ಪ್ರೊಫೆಸರ್ ಮಾರ್ಕೆಟಿಂಗ್ ಪರಿಕಲ್ಪನೆಗಳನ್ನು ತಮಾಷೆಯಾಗಿ, ನಿಜ ಜೀವನದ ಉದಾಹರಣೆಗಳೊಂದಿಗೆ ವಿವರಿಸಿದ್ದು, ನಗುತರಿಸುತ್ತಿದೆ..
04:01 PM (IST) Jul 26
YouTuber mohammad aamir: ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುಟ್ಯೂಬರ್ ಮೊಹಮ್ಮದ್ ಆಮೀರ್‌ನನ್ನು ಬಂಧಿಸಲಾಗಿದೆ. ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
03:09 PM (IST) Jul 26
ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ್ದರಿಂದ ಕಾರೊಂದು ನೀರಿಗೆ ಬಿದ್ದಿದೆ. ಮತ್ತೊಂದು ಪ್ರಕರಣದಲ್ಲಿ ಕಾರು ಚಾಲಕ ಕುಡಿದ ಮತ್ತಿನಲ್ಲಿ ಕಾರನ್ನು ಮನೆಯ ಬೌಂಡರಿ ಮೇಲೇರಿಸಿ ನಿಲ್ಲಿಸಿದ್ದಾನೆ.
02:59 PM (IST) Jul 26
02:43 PM (IST) Jul 26
ಜಾಗತಿಕ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ, ದಕ್ಷಿಣ ಕೊರಿಯಾದ ಹೊಸದಾಗಿ ಆಯ್ಕೆಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು ಶೇ. 59 ರಷ್ಟು ಅನುಮೋದನೆಯೊಂದಿಗೆ ಎರಡನೇ ಸ್ಥಾನ ಪಡೆದರು.
01:37 PM (IST) Jul 26
ಇಬ್ಬರು ಪುಟ್ಟ ಮಕ್ಕಳ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡ್ತಿದೆ. ಪುಟ್ಟ ಬಾಲಕನೋರ್ವ ಗಾಯಾಗೊಂಡ ಪಾರಿವಾಳವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ಫಲಿಸದೇ ಅದು ಸಾವನ್ನಪ್ಪಿದೆ. ಇದರಿಂದ ಬಾಲಕ ಬಿಕ್ಕಳಿಸಿ ಅತ್ತಿದ್ದಾನೆ. ಮತ್ತೊಂದು ಮಗುವಿನ ವೀಡಿಯೋ ಏನು ಇಲ್ಲಿದೆ ನೋಡಿ..
01:00 PM (IST) Jul 26
ಕಳೆದ ಮೂರು ವರ್ಷಗಳಿಂದ ಶಿವ ಭಕ್ತನಾಗಿರುವ ಮುಸ್ಲಿಂ ಯುವಕ ಈ ಬಾರಿ ಹಿಂದೂ ಗೆಳೆಯನೊಂದಿಗೆ 101 ಲೀಟರ್ ಗಂಗಾಜಲ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
12:53 PM (IST) Jul 26
ಕೇವಲ 20ನೇ ವಯಸ್ಸಿನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡುವುದರಿಂದ ೬೦ರ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸಬಹುದು. ಸಂಯೋಜಿತ ಬಡ್ಡಿಯ ಮಹತ್ವ ಮತ್ತು ದೀರ್ಘಾವಧಿಯ ಹೂಡಿಕೆಯ ಲಾಭಗಳನ್ನು ಈ ಲೇಖನ ವಿವರಿಸುತ್ತದೆ.
12:16 PM (IST) Jul 26
ಅನಾದಿ ಕಾಲದಿಂದಲೂ ಅನೇಕ ಪಾಶ್ಚಿಮಾತ್ಯ ದೇಶಗಳ ಜನರು ಕೂಡ ಮುಕ್ತಿ ಹಾಗೂ ಮೋಕ್ಷವನ್ನು ಅರಸಿ ಭಾರತಕ್ಕೆ ಬಂದಿದ್ದಾರೆ. ಅದೇ ರೀತಿ ಈಗ ಜಪಾನ್‌ನ ಉದ್ಯಮಿಯೊಬ್ಬರು ಭಾರತಕ್ಕೆ ಬಂದಿದ್ದು ಕನ್ವರ್ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರ ಕತೆ ಇಲ್ಲಿದೆ.
09:33 AM (IST) Jul 26
ಎಲ್ಲಾ ಶಿಕ್ಷಣ ಸಂಸ್ಥೆಗಳು, ಮಾನಸಿಕ ಆರೋಗ್ಯ ಸೇವೆಗಳು, ಸ್ಥಳೀಯ ಆಸ್ಪತ್ರೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವ ಸಹಾಯವಾಣಿಗಳ ಲಿಖಿತ ಶಿಷ್ಟಾಚಾರಗಳನ್ನು ಸ್ಥಾಪಿಸಬೇಕು ಎಂದು ಇಬ್ಬರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
09:10 AM (IST) Jul 26
08:01 AM (IST) Jul 26
ಗಡಿಯಲ್ಲಿರುವ ಹಿಂದೂ ಶಿವ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಆರಂಭವಾಗಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಸಮರಕ್ಕೆ 2ನೇ ದಿನವಾದ ಶುಕ್ರವಾರ ಬ್ರೇಕ್ ಬಿದ್ದಿದ್ದು, ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿಸಿವೆ.
08:00 AM (IST) Jul 26
2011ರಲ್ಲಿ ದೇಶದಲ್ಲಿ ಸುದ್ದಿ ಮಾಡಿದ್ದ ಕೇರಳದ ಸೌಮ್ಯಾ ಅತ್ಯಾಚಾ*, ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಯೊಬ್ಬ, ಗೋಡೆ ಹಾರಿ ಪರಾರಿಯಾದ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಆದರೆ ಕೆಲವೇ ಗಂಟೆಗಳ ಬಳಿಕ ಸಿಕ್ಕಿಬಿದ್ದಿದ್ದಾನೆ.
07:58 AM (IST) Jul 26
ಭಾರತದ ಜತೆ ಪ್ರವಾಸೋದ್ಯಮ ವಿಚಾರದಲ್ಲಿ ಕಾದಾಟಕ್ಕಿಳಿದು ದ್ವಿಪಕ್ಷೀಯ ಸಂಬಂಧ ಕಡಿದುಕೊಳ್ಳಲೂ ಮುಂದಾಗಿದ್ದ ಮಾಲ್ಡೀವ್ಸ್ ಈಗ ತಣ್ಣಗಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದ್ವೀಪದೇಶಕ್ಕೆ ನೀಡಿದ ಮೊದಲ ಭೇಟಿ ಯಶಸ್ಸು
07:57 AM (IST) Jul 26
ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾತಿಗಣತಿ ಮಾಡದೇ ಇದ್ದದ್ದು ಕಾಂಗ್ರೆಸ್ ಪಕ್ಷದ ತಪ್ಪಲ್ಲ. ಅದು ನನ್ನ ತಪ್ಪು. ಅದನ್ನು ಈಗ ಸರಿಪಡಿಸಿಕೊಂಡು ಗಣತಿ ಮಾಡುತ್ತಿದ್ದೇವೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
07:57 AM (IST) Jul 26
ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ಸೇರಿದಂತೆ ನಾಲ್ವರು ಶುಕ್ರವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
07:57 AM (IST) Jul 26
ಬಿಹಾರದ ಅನರ್ಹ ಮತದಾರರ ಪತ್ತೆಗೆ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ ಮೊದಲ ಹಂತ ಮುಕ್ತಾಯವಾಗಿದ್ದು, 65.2 ಲಕ್ಷ ಮತದಾರರನ್ನು ಅನಹ ಎಂದು ಗುರುತಿಸಲಾಗಿದೆ. ಇವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ.
07:56 AM (IST) Jul 26
ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ ಉಲ್ಲು, ಎಎಲ್‌ಟಿಟಿ, ಡಿಸಿಫ್ಲಿಕ್ಸ್ ಸೇರಿದಂತೆ ೨೫ ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಅಶ್ಲೀಲ ವ್ಯಂಗ್ಯ ಮತ್ತು ದೀರ್ಘ ಲೈಂಗಿಕ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
07:56 AM (IST) Jul 26
ನಾಮಕ್ಕಂಲ್ಲಿ ನಡೆದಿದ್ದು ಕಿಡ್ನಿ ಕಳ್ಳತನ ಅಲ್ಲ, ಅಕ್ರಮ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ವೈದ್ಯಕೀಯ ಸಚಿವ ಮಾ.ಸುಬ್ರಮಣಿಯನ್ ವಿರುದ್ಧ ಅಣ್ಣಾಮಲೈ ಪ್ರಶ್ನಿಸಿದ್ದಾರೆ.