ನವದೆಹಲಿ (ಅ.18): 'ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತದ ಮೇಲೆ ತೆರಿಗೆ ಹಾಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೊಂದರೆ ನೀಡುತ್ತಿರುವಾಗಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

11:03 PM (IST) Oct 18
ಏರ್‌ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್‌ಗಾಗಿ ಐಬಿಎಂ ಜೊತೆ ಪಾಲುದಾರಿಕೆ, ಕ್ಲೌಡ್ ಸುರಕ್ಷತೆ, ಸಾಮರ್ಥ್ಯ ಹೆಚ್ಚಳ, ವರ್ಕ್‌ಲೋಡ್ ಸೇರಿದಂತೆ ಹಲವು ತಾಂತ್ರಿಕ ಸಂಬಂಧ ಈ ಒಪ್ಪಂದ ಭಾರಿ ಮಹತ್ವ ಪಡೆದಿದೆ
10:43 PM (IST) Oct 18
ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ, ಕ್ರೈಸ್ತರಿಂದ ಕಲಿಯಿರಿ ಎಂದ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದಾರೆ. ಅಖಿಲೇಶ್ ಮಾತಿಗೆ ಬಿಜೆಪಿ ತಿರುಗೇಟು ನೀಡಿದ್ದರೆ, ಹಿಂದೂ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
09:17 PM (IST) Oct 18
ಬುರ್ಖಾ ನಿಷೇಧ ಬಿಲ್‌ಗೆ ಸಂಸತ್ತಿನಲ್ಲಿ ಅನುಮೋದನೆ, ತಪ್ಪಿದ್ರೆ 4 ಲಕ್ಷ ರೂ ದಂಡ ಎಂದ ಪೋರ್ಚುಗಲ್, ಒತ್ತಾಯ ಪೂರ್ವಕವಾಗಿ ಅಥವಾ ಷಡ್ಯಂತ್ರದ ಭಾಗವಾಗಿ ಬುರ್ಖಾ ಹಾಕಲು ಪ್ರೇರೇಪಿಸಿದರ 3 ವರ್ಷ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.
08:47 PM (IST) Oct 18
GST 2.0 India tax reform: ದೀಪಾವಳಿ ಹಬ್ಬಕ್ಕೆ ಸಮೃದ್ಧಿ ತಂದಿದೆ; ಲಕ್ಷ್ಮಿ ದೇವಿ ಪ್ರತಿ ಮನೆಗೂ ತಲುಪಿದ್ದಾಳೆ ಎಂದು ಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಅವರು 'ಜಿಎಸ್‌ಟಿ ಉಳಿತಾಯ ಹಬ್ಬ' ಎಂದು ಕರೆಯಲ್ಪಡುವ ಜಿಎಸ್‌ಟಿ 2.0 ಅನ್ನು ಜಾರಿಗೆ ತಂದಿದ್ದಾರೆ. ಸುದ್ದಿಗೋಷ್ಠಿಯ ವಿವರ ಇಲ್ಲಿದೆ.
08:16 PM (IST) Oct 18
ಪತ್ರಕರ್ತ ರಾಜದೀಪ್ ಸರ್ದೇಸಾಯಿಗೆ ಪ್ರೊಸ್ಟೇಟ್ ಕ್ಯಾನ್ಸರ್, ನಾಲ್ಕು ತಿಂಗಳಿಂದ ಹೋರಾಟ, ಈ ಕುರಿತು ಸ್ವತಃ ರಾಜ್‌ದೀಪ್ ಮಾತನಾಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕ್ಯಾನ್ಸರ್ ಹೋರಾಟದ ಕುರಿತು ಹೇಲಿಕೊಂಡಿದ್ದಾರೆ.
07:08 PM (IST) Oct 18
ಈ ಬಾರಿ ಮುಕೇಶ್ ಅಂಬಾನಿಗೆ ದೀಪಾವಳಿ ಗಿಫ್ಟ್, ರಿಲಯನ್ಸ್ ಇಂಡಸ್ಟ್ರಿಗೆ 22 ಸಾವಿರ ಕೋಟಿ ಲಾಭ ಮಾಡಿದೆ. ಪ್ರತಿ ದೀಪಾವಳಿಗೆ ಗ್ರಾಹಕರಿಗೆ ಉಡುಗೊರೆ ನೀಡುತ್ತಿದ್ದ ಅಂಬಾನಿಗೆ ಈ ಬಾರಿ ಕಂಪನಿ ಭರ್ಜರಿ ಲಾಭದ ಉಡುಗೊರೆ ನೀಡಿದೆ.
06:43 PM (IST) Oct 18
ಕೇವಲ 40 ನಿಮಿಷದಲ್ಲಿ ಅಚ್ಚರಿ, ವಂದೇ ಭಾರತ್ ರೈಲಿನ ಅನುಭವ ಹಂಚಿಕೊಂಡ ಡಾಕ್ಟರ್, ರೈಲು ಪ್ರಯಾಣದ ವೇಳೆ ವಾಶ್‌ರೂಂನಲ್ಲಿ ನಡೆದ ಘಟನೆ ಹಾಗೂ ಮನೆಗೆ ಬಂದ ಬಳಿಕ ನಡೆದ ಘಟನೆಯನ್ನು ಡಾಕ್ಟರ್ ವಿವರಿಸಿದ್ದಾರೆ. ಅಷ್ಟಕ್ಕೂ 40 ನಿಮಿಷದ ಘಟನೆ ಏನು?
06:15 PM (IST) Oct 18
Birthday Prank Gone Wrong: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಯುವಕನೊಬ್ಬನ ಹುಟ್ಟುಹಬ್ಬವನ್ನು ಆತನ ಸ್ನೇಹಿತರು ಅತ್ಯಂತ ಅಪಾಯಕಾರಿಯಾಗಿ ಆಚರಿಸಿದ್ದಾರೆ. ಯುವಕನನ್ನು ಕುರ್ಚಿಗೆ ಕಟ್ಟಿ, ಮುಖಕ್ಕೆ ಫೋಮ್ ಎರಚಿ ಉಸಿರುಗಟ್ಟಿಸುವಂತಹ ಕ್ರೌರ್ಯ ಮೆರೆದಿದ್ದಾರೆ.
05:48 PM (IST) Oct 18
ಸೂಪರ್ ಡ್ಯಾನ್ಸರ್ ಶೋನಲ್ಲಿ ಪುಟಾಣಿ ಬಾಲಕಿಯೊಬ್ಬಳ ಡಾನ್ಸ್‌ಗೆ ಶಿಲ್ಪಾ ಶೆಟ್ಟಿ ಸೋಲೊಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಶಿಲ್ಪಾ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಹೆಸರು ಕೂಡ ಉಲ್ಲೇಖವಾಗಿದೆ.
05:17 PM (IST) Oct 18
Professor Slapped by Student: ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನಲ್ಲಿ, ವಿದ್ಯಾರ್ಥಿ ಸಂಘಟನೆಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ಸಭೆಯ ವೇಳೆ ವಿದ್ಯಾರ್ಥಿನಿಯೊಬ್ಬಳು ಪೊಲೀಸರ ಸಮ್ಮುಖದಲ್ಲೇ ಪ್ರೊಫೆಸರ್‌ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
05:16 PM (IST) Oct 18
04:47 PM (IST) Oct 18
ಬರೋಬ್ಬರಿ 149 ಕೋಟಿ ರೂಗೆ 186 ಲಕ್ಷುರಿ ಕಾರು ಖರೀದಿಸಿದ ಜೈನ್ಸ್, ಸಿಕ್ಕಿತು 21 ಕೋಟಿ ರೂ ಡಿಸ್ಕೌಂಟ್ , ವಿಶೇಷ ಅಂದರೆ ಈ ರೀತಿ ಏಕಕಾಲಕ್ಕೆ 186 ಐಷಾರಾಮಿ ಕಾರು ಖರೀದಿಸಿದ ಕಾರಣ ಒಟ್ಟು 21 ಕೋಟಿ ರೂಪಾಯಿ ಡಿಸ್ಕೌಂಟ್ ಸಿಕ್ಕಿದೆ.
03:00 PM (IST) Oct 18
ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ರಿಷಬ್ ಶೆಟ್ಟಿ, 12 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 12.50 ಲಕ್ಷ ರೂ. ಗೆದ್ದರು. ಈ ಹಣವನ್ನು ತಮ್ಮ ಫೌಂಡೇಷನ್‌ಗೆ ನೀಡುವುದಾಗಿ ಘೋಷಿಸಿದ ಅವರು, 'ಸೂಪರ್ ಸಂಧೂಕ್' ಸುತ್ತಿನಲ್ಲಿ ಸುಲಭ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರ ನೀಡಿದರು,
02:54 PM (IST) Oct 18
ದೆಹೆಲಿ ಸಂಸದರ ಫ್ಲ್ಯಾಟ್‌ನಲ್ಲಿ ಹೊತ್ತಿಕೊಂಡ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಫ್ಲ್ಯಾಟ್ ಸಂಪೂರ್ಣ ಸುಟ್ಟುಕರಕಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.
02:38 PM (IST) Oct 18
K Annamalai request to fans: ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ತಮ್ಮ ಕುಟುಂಬದ ಕಡೆಗೆ ಗಮನ ಹರಿಸುವಂತೆ ಅಣ್ಣಾಮಲೈ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
02:30 PM (IST) Oct 18
Funny Wedding Video: ಸ್ನೇಹಿತರ ಉಪಸ್ಥಿತಿ ಮದುವೆಯಂತಹ ಕ್ಷಣಗಳನ್ನು ಅವಿಸ್ಮರಣೀಯವಾಗಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಸ್ನೇಹಿತರು ವಧುವಿನಂತೆ ವೇಷ ಧರಿಸಿ ಮದುಮಗನಿಗೆ ತಮಾಷೆ ಮಾಡಿದ್ದಾರೆ. ಈ ವೀಡಿಯೋ ಭಾರಿ ವೈರಲ್ ಆಗಿದೆ.
02:25 PM (IST) Oct 18
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿ ಟೈಟಲ್ ಗೆದ್ದ ನಂತರ $269 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಐಪಿಎಲ್‌ನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇದು ಸಾಧ್ಯವಾಗಿದ್ದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
01:43 PM (IST) Oct 18
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಲ್ರೌಂಡರ್ ಭಾರತ ಎದುರಿನ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
12:42 PM (IST) Oct 18
Bride Calls Off Wedding: ವಾರಣಾಸಿಯಲ್ಲಿ, ವರನ ಸ್ನೇಹಿತರು ತನ್ನ ಗೆಳತಿಯರನ್ನು ಅವಮಾನಿಸಿದ್ದನ್ನು ಕಂಡು ವಧುವೊಬ್ಬಳು ಮದುವೆಯನ್ನೇ ನಿಲ್ಲಿಸಿದ್ದಾಳೆ. ತನ್ನ ಸ್ನೇಹಿತರನ್ನು ನಿಯಂತ್ರಿಸುವಂತೆ ವರನಿಗೆ ಹೇಳಿದಾಗ ಆತ ನಕ್ಕಿದ್ದರಿಂದ ವಧು ಮದ್ವೆಯನ್ನೇ ಮುರಿದಿದ್ದಾಳೆ.
12:34 PM (IST) Oct 18
11:50 AM (IST) Oct 18
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಬ್ರ್ಯಾಂಡ್ ವ್ಯಾಲ್ಯೂ ಈ ವರ್ಷ 8% ಕುಸಿದಿದೆ. ಡಿ ಅಂಡ್ ಪಿ ಅಡ್ವೈಸರಿ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, 2024ರಲ್ಲಿ 82,700 ಕೋಟಿ ಇದ್ದ ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ 2025ರಲ್ಲಿ 76100 ಕೋಟಿಗೆ ಇಳಿದಿದೆ. ಯಾಕೆ ಹೀಗೆ ಎನ್ನುವುದನ್ನು ನೋಡೋಣ.
10:55 AM (IST) Oct 18
ಐಪಿಎಲ್ 2026: ಐಪಿಎಲ್ 2026ರ ಟ್ರೇಡ್ ವಿಂಡೋದಲ್ಲಿ ಸಂಜು ಸ್ಯಾಮ್ಸನ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಅವರ ಮೇಲೆ ಡೆಲ್ಲಿ ಕ್ಯಾಪಿಟಲ್ಸ್ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ. ಡಿಸಿ ಸಂಜು ಅವರನ್ನು ನಾಯಕ ಮತ್ತು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ.
10:28 AM (IST) Oct 18
ಡಿಯಾಜಿಯೋ ಸಂಸ್ಥೆಯು ಆರ್‌ಸಿಬಿ ಫ್ರಾಂಚೈಸಿಯನ್ನು 2 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಭವಿಷ್ಯದ ಐಪಿಎಲ್ ಮಾಧ್ಯಮ ಹಕ್ಕುಗಳ ಬೃಹತ್ ಆದಾಯ ಈ ಬೆಲೆಯನ್ನು ಸಮರ್ಥಿಸಿದರೂ, ಕೊಹ್ಲಿ ನಿವೃತ್ತಿ ಹಾಗೂ ಕ್ರೀಡಾಂಗಣದ ಅನಿಶ್ಚಿತತೆ ಅಂಶಗಳು ಖರೀದಿದಾರರ ಮೇಲೆ ಪರಿಣಾಮ ಬೀರಬಹುದು.
08:20 AM (IST) Oct 18
Afghan Cricket Board Withdraws from Tri-Series ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಘಾನ್ ದೇಶೀಯ ಕ್ರಿಕೆಟಿಗರು ಸಾವನ್ನಪ್ಪಿದ್ದರಿಂದ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ಮುಂಬರುವ ತ್ರಿಕೋನ T20 ಸರಣಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.
08:12 AM (IST) Oct 18
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ, ರೋಹಿತ್ ಶರ್ಮಾ ತಮ್ಮ 500ನೇ ಅಂತರಾಷ್ಟ್ರೀಯ ಪಂದ್ಯವನ್ನು ಆಡುವ ಮೂಲಕ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಈ ಮೂಲಕ ಅವರು ಸಚಿನ್ ತೆಂಡೂಲ್ಕರ್ ಮತ್ತು ದ್ರಾವಿಡ್ ಅವರಂತಹ ದಿಗ್ಗಜ ಕ್ರಿಕೆಟಿಗರ ವಿಶೇಷ ಕ್ಲಬ್‌ಗೆ ಸೇರಲಿದ್ದಾರೆ.
07:59 AM (IST) Oct 18
ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಬಂಧಿಸಿದೆ
07:58 AM (IST) Oct 18
ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.